VicksWeb upgrade Location upload ads trending
VicksWeb ಭಾರತ
ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ
Source:  Oneindia Kannada
Tuesday, 20 February 2018 08:39

ಅಹಮದಾಬಾದ್, ಫೆಬ್ರವರಿ 20: ಗುಜರಾತ್ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಒಟ್ಟು 75 ನಗರ ಪಾಲಿಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 47ನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 16, ಎನ್ ಸಿಪಿ 1, ಬಿಎಸ್ಪಿ 1 ನಗರ ಪಾಲಿಕೆಗಳನ್ನು ತಮ್ಮ ತೆಕ್ಕೆ ತೆಗೆದುಕೊಂಡಿವೆ. 4 ಪಾಲಿಕೆಗಳಲ್ಲಿ ಪಕ್ಷೇತರರು ಅಧಿಪತ್ಯ ಸ್ಥಾಪಿಸಿದ್ದ 6 ಪುರಸಭೆಗಳ ಸ್ಪಷ್ಟ

ನಾನೇ ಸಾಲ ಕಟ್ಟುತ್ತಿದ್ದೆ: ಪಿಎನ್‌ಬಿಗೆ ತಿರುಗೇಟು ನೀಡಿದ ನೀರವ್ ಮೋದಿ
Source:  Oneindia Kannada
Tuesday, 20 February 2018 07:59

ನವದೆಹಲಿ, ಫೆಬ್ರವರಿ 20: ಜುವೆಲ್ಲರಿ ಉದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ತಿರುಗೇಟು ನೀಡಿದ್ದಾರೆ. ನೀವು ಪ್ರಕರಣವನ್ನು ಸಾರ್ವಜನಿಕವಾಗಿ ಎಳೆದು ತಂದು ಸಾಲ ಕಟ್ಟುವ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಬ್ಯಾಂಕನ್ನೇ ಆರೋಪಿ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಫೆಬ್ರವರಿ 15/16ರಂದು ಬ್ಯಾಂಕಿನ ಆಡಳಿತ ಮಂಡಳಿಗೆ ಪತ್ರ ಬರೆದಿರುವ ನೀರವ್ ಮೋದಿ ತಮ್ಮ

ಪಾಟ್ನಾದಲ್ಲಿ ನಿಯಂತ್ರಣ ತಪ್ಪಿ ಮಗುಚಿದ ಬಸ್: 7 ಜನ ದುರ್ಮರಣ
Source:  Oneindia Kannada
Tuesday, 20 February 2018 07:24

ಪಾಟ್ನಾ, ಫೆಬ್ರವರಿ 20: ಬಿಹಾರದ ಪಾಟ್ನಾದ ಕಂದಪ ಎಂಬ ಹಳ್ಳಿಯ ಬಳಿ ಬಸ್ ವೊಂದು ಮಗುಚಿಬಿದ್ದ ಪರಿಣಾಮ 7 ಜನ ಮೃತರಾದ ದುರ್ಘಟನೆ ನಡದೆದಿದೆ. ಒಡಿಶಾದಲ್ಲಿ ಪ್ರಪಾತಕ್ಕೆ ಬಿದ್ದ ಲಾರಿ: 9 ಜನ ದುರ್ಮರಣ ಬಸ್ಸಿನಲ್ಲಿದ್ದ ಪ್ರಯಾಣಿಕರು ಮದುವೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ಚಾಲಕ ಬಸ್ಸನ್ನು ಅತೀ ವೇಗವಾಗಿ ಓಡಿಸುತ್ತಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಮಗುಚಿದೆ. ಈ

ಪ್ರಧಾನಿ ಮೋದಿಗೆ ಕರ್ನಾಟಕ ಕಾಂಗ್ರೆಸ್‌ನ ಪ್ರಶ್ನೆಗಳು!
Source:  Oneindia Kannada
Monday, 19 February 2018 20:35

ಬೆಂಗಳೂರು, ಫೆಬ್ರವರಿ 19 : ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಹಲವು ಪ್ರಶ್ನೆಗಳನ್ನು ಕೇಳಿದೆ. ನರೇಂದ್ರ ಮೋದಿ ಮೈಸೂರು ಭಾಷಣದಲ್ಲಿನ ಕನ್ನಡ, ಪುಟ್ಟಣ್ಣಯ್ಯ, ಕಾಂಗ್ರೆಸ್ ಕರ್ನಾಟಕ ಕಾಂಗ್ರೆಸ್‌ನ ಟ್ವಿಟರ್ ಖಾತೆ INCKarnataka ಮೂಲಕ ಪ್ರಧಾನಿ ಮೋದಿ ಅವರಿಗೆ ಹಲವು ಪ್ರಶ್ನೆ

ರೂ.800 ಕೋಟಿ ಸಾಲ ಪಡೆದಿದ್ದ ರೊಟೊಮ್ಯಾಕ್ ಮಾಲೀಕನ ಬಂಧನ
Source:  Oneindia Kannada
Monday, 19 February 2018 20:32

ಕಾನ್ಪುರ, ಫೆಬ್ರವರಿ 19: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ ವಜ್ರದ ವ್ಯಾಪಾರಿ ನೀರವ್ ಮೋದಿ 11 ಸಾವಿರ ಕೋಟಿ ವಂಚಿಸಿ ದೇಶದಿಂದ ಪೇರಿ ಕಿತ್ತ ಬೆನ್ನಲ್ಲೆ ಚುರುಕಾಗಿರುವ ಸಿಬಿಐ ಮತ್ತು ಇಡಿ (ಜಾರಿ ನಿರ್ದೇಶನಾಲಯ) ಮತ್ತೊಬ್ಬ ಭಾರಿ ವಂಚಕ ಸಾಲಗಾರನನ್ನು ಬಂಧಿಸಿದೆ. ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ನಿಯಮ ಮೀರಿ ಸಾಲ ಪಡೆದಿರುವ ರೋಟೊಮ್ಯಾಕ್ ಸಂಸ್ಥೆ

ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ
Source:  Oneindia Kannada
Monday, 19 February 2018 18:56

ಮೈಸೂರು, ಫೆಬ್ರವರಿ 19: ಮೋದಿ ಅತ್ಯುತ್ತಮ ಸಂವಹನಾಕಾರ, ಅವರ ಭಾಷಣ ಕಲೆಗೆ ಹೋಲಿಸಬಹುದಾದ ಇನ್ನೊಬ್ಬ ರಾಜಕಾರಣಿ ಸದ್ಯಕ್ಕಂತೂ ರಾಷ್ಟ್ರ ರಾಜಕಾರಣದಲ್ಲಿ ದೂರಕ್ಕೂ ಕಾಣ ಸಿಗುತ್ತಿಲ್ಲ. ಇದ್ದರೂ ಮೋದಿ ಅವರ ಶೈಲಿಯನ್ನೇ ಅನುಕರಿಸುವವರು ಇದ್ದಾರೆ ಅಷ್ಟೆ. ಅವರ ಭಾಷಣ ಶೈಲಿ, ಧ್ವನಿ ಏರಿಳಿತ, ಹಾವ ಭಾವ, ಪದಗಳ ಆಯ್ಕೆ, ಎಲ್ಲವೂ ಗಮನಿಸಲರ್ಹ. ಅವರ ಭಾಷಣವನ್ನು ಸಂಶೋಧಿಸಿ ಪುಟಗಟ್ಟಲೆ ಪ್ರಬಂಧ

ಒಂದೇ ವಾರಕ್ಕೆ ಶೇ 26ರಷ್ಟು ಕುಸಿದ ಪಿಎನ್ ಬಿ ಷೇರು ಬೆಲೆ, ಮುಂದೇನು?
Source:  Oneindia Kannada
Monday, 19 February 2018 16:50

ಬೆಂಗಳೂರು, ಫೆಬ್ರವರಿ 19 : ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಷೇರುಗಳು ಸೋಮವಾರ ವಾರ್ಷಿಕ ಕನಿಷ್ಠ ಮಟ್ಟವನ್ನು ಮುಟ್ಟಿ, ಅಲ್ಪ ಪ್ರಮಾಣದ ಚೇತರಿಕೆ ಕಂಡಿದೆ. ಆದರೆ ಈ ಹಂತದಲ್ಲಿ ಷೇರು ಖರೀದಿಗೆ ಮುಂದಾಗಬಹುದಾ ಎಂಬ ಪ್ರಶ್ನೆಗೆ ಷೇರುಪೇಟೆ ತಜ್ಞರು ಹಾಗೂ ಅಂಕಣಕಾರರಾದ ಕೆ.ಜಿ.ಕೃಪಾಲ್ ಅವರು ಒನ್ಇಂಡಿಯಾ ಕನ್ನಡಕ್ಕೆ ಉತ್ತರ ನೀಡಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದಲ್ಲೇ ಎರಡನೇ

ಬಸವನಗೌಡ ವಿರುದ್ಧ ಬಸನಗೌಡ, ಇದು ಅಮಿತ್ ಶಾ ತಂತ್ರ
Source:  Oneindia Kannada
Monday, 19 February 2018 16:41

ವಿಜಯಪುರ, ಫೆಬ್ರವರಿ 14: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಪಾಟೀಲರ ಆಸೆಗೆ ಇಂಬು ನೀಡುವ ಸುದ್ದಿಯೂ ಬಂದಿದೆ. ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿ ಮಲ್ಲನಗೌಡ ಬಸವನಗೌಡ ಪಾಟೀಲ್ (ಎಂ.ಬಿ ಪಾಟೀಲ್) ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿಲ್ಲಿಸಲು ಬಿಜೆಪಿ

ಮನರಂಜನೆಗೆ ಸೀಮಿತವಾದ ಚಲನಚಿತ್ರಗಳು: ವಿಷಾದ
Source:  ಸಂಜೆವಾಣಿಗೆ ಸ್ವಾಗತ
Monday, 19 February 2018 16:38

ಮಧುಗಿರಿ, ಫೆ. ೧೯- ಇಂದಿನ ಚಲನಚಿತ್ರಗಳಲ್ಲಿ ಜೀವನ ನಡೆಸಲು ಬೇಕಾದಂತಹ ಮಾಹಿತಿಗಳು ಸಮಾಜಕ್ಕೆ ರವಾನೆಯಾಗದೆ ಕೇವಲ ಮನರಂಜನೆಗೆ ಸೀಮಿತವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರ ಭೂಪತಿ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಕಾರ ರತ್ನ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಕಾದಂಬರಿಗಾರ್ತಿ ಎಂ.ಕೆ.ಇಂದಿರಾ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂ.ಕೆ.ಇಂದಿರಾ ಕಾದಂಬರಿ ಆಧಾರಿತ ಚಿತ್ರಗಳಾದ ಗೆಜ್ಜೆಪೂಜೆ ರಾಷ್ಟ್ರ ಮಟ್ಟದಲ್ಲಿ, ಫಣಿಯಮ್ಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವು. ಇಂದಿನ ಚಿತ್ರಗಳು ಅಪ್ರಬುದ್ಧ ಸಾಹಿತ್ಯದೊಂದಿಗೆ ಬಿಡುಗಡೆಯಾಗುತ್ತಿದ್ದು, ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.

2ನೇ ತರಗತಿ ವ್ಯಾಸಂಗ ಮಾಡಿ ಹೊರಗಿನ ಪ್ರಪಂಚ ಗೊತ್ತಿಲ್ಲದಿದ್ದರೂ ಜೀವನ ಅನುಭವದಿಂದ 46ರ ವಯಸ್ಸಿನಲ್ಲಿ ಕಾದಂಬರಿಗಳನ್ನು ಬರೆದು ಬದುಕಿನಲ್ಲಿ ಕಲಿಯಬಹುದಾದಂತಹ ಮಾಹಿತಿಯನ್ನು ನೀಡಿದ ಇಂದಿರಾ ಶೋಷಣೆ, ದಬ್ಬಾಳಿಕೆ ವಿರುದ್ದ ಸ್ತ್ರೀ ಶಕ್ತಿಗಳ ಮೂಲಕ ಧ್ವನಿ ಎತ್ತಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ದಿಟ್ಟ ಲೇಖಕಿ ಅವರ ಬದುಕು-ಬರಹ ಸಂವೇದನೆಗಳ ಅನುಭವವೇ ದೊಡ್ಡ ಶಕ್ತಿಯಾಗಿದೆ ಎಂದರು.

ಇವರ ಕಾದಂಬರಿ ಸಾಮಾನ್ಯ ಓದುಗನಿಂದ ಹಿಡಿದು ವಿಶ್ವವಿದ್ಯಾಲಯದ ವರೆಗೂ ಪಠ್ಯ ಪುಸ್ತಕಗಳಾಗಿವೆ. ಭಾರತದ ಇತರ ಭಾಷೆಗಳಿಗೂ ತರ್ಜುಮೆಯಾಗಿದೆ. ತುಂಗಭದ್ರಾ ಮತ್ತು ಗೆಜ್ಜೆ ಪೂಜೆ ಕಾದಂಬರಿಗಳು ತೆಲುಗಿಗೆ, ಫಣಿಯಮ್ಮ ಮಲೆಯಾಳಿ ಭಾಷೆಗೆ ಭಾಷಾಂತರವಾಗಿದೆ ಎಂದ ಅವರು 8 ಮಕ್ಕಳ ತಾಯಿಯಾಗಿದ್ದರೂ ಸಾಹಿತ್ಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದ ಇಂದಿರಾ ಜನಸಾಮಾನ್ಯರ ಮೆಚ್ಚುಗೆಯ ಲೇಖಕಿಯಾಗಿದ್ದರು ಎಂದರು.
ಉಪವಿಭಾಗಾಧಿಕಾರಿ ಡಾ. ವೆಂಕಟೇಶಯ್ಯ ಇಂದಿನ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಬರಹಗಾರರ ಬರವಣಿಗೆಯನ್ನು ಕಿತ್ತುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಷಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಬಿ.ಜಿ.ಶಾಂತಮ್ಮ, ಹಿರಿಯ ಸಾಹಿತಿ ಪ್ರೊ.ಮಲನ ಮೂರ್ತಿ, ಪ್ರಾಂಶುಪಾಲ ಪ್ರೊ.ಡಿ.ಎಸ್.ಮುನೀಂದ್ರಕುಮಾರ್, ಸ್ನಾತಕೋತ್ತರ ವಿಭಾಗದ ಡಾ. ಎ.ಬಿ.ಬಾಳಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಸಾಹಿತಿ ಪ್ರೊ. ಕಮಲಾನರಸಿಂಹ, ಲೇಖಕಿ ವಿಜಯಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

 ರಸಪ್ರಶ್ನೆ ಕಾರ್ಯಕ್ರಮ

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಫೆ.27ರಂದು ರಸಪ್ರಶ್ನೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮವನ್ನು ಡಿಡಿ ವಾಹಿನಿಯ ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ.ಸೋಮೇಶ್ವರ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸದಸ್ಯ ದ್ವಾರನಕುಂಟೆ ರಾಜಣ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಪ್ರಾಚಾರ್ಯ ಪ್ರೊ. ಡಿ.ಎಸ್.ಮುನೀಂದ್ರಕುಮಾರ್ ಭಾಗವಹಿಸಲಿದ್ದಾರೆ.

FacebookGoogle+WhatsAppGoogle GmailShare


ಸರ್ಕಾರದಿಂದ ಯೋಗಿನಾರಾಯಣ ಯತೀಂದ್ರ ಜಯಂತಿ ಆಚರಣೆಗೆ ಆಗ್ರಹ
Source:  ಸಂಜೆವಾಣಿಗೆ ಸ್ವಾಗತ
Monday, 19 February 2018 16:24

ಕೊರಟಗೆರೆ, ಫೆ. ೧೯- ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಹಾಗೂ ಯೋಗಿನಾರಾಯಣ ಯತೀಂದ್ರರ ಜಯಂತಿಯನ್ನು ಬಲಿಜ ಸಮುದಾಯದ ಪರವಾಗಿ ಆಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಆಚರಿಸಬೇಕು ಎಂದು ಪ.ಪಂ ಸದಸ್ಯ ಕೆ.ಎಲ್. ಆನಂದ್ ಒತ್ತಾಯಿಸಿದರು.

ಪಟ್ಟಣದ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಟ್ಟಡದಲ್ಲಿ ತಾಲ್ಲೂಕು ಬಲಿಜ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಶ್ರೀ ಕೃಷ್ಣದೇವರಾಯ ರವರ 547ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆ ಕಾಲದಲ್ಲಿ ಉಚ್ಛ್ರಾಯಕ್ಕೇರಿತು. ಕನ್ನಡ ರಾಜ್ಯ ರಮಾರಮಣ ಎಂದೂ, ಆಂಧ್ರದಲ್ಲಿ ಆಂಧ್ರಬೋಜ ಎಂದೂ ಸ್ವತಃ ಬರಹಗಾರನ್ನಾಗಿದ್ದ ಶ್ರೀ ಕೃಷ್ಣದೇವರಾಯನು ಆ ಸ್ಥಾನದ ಸಮಕಾಲೀಕ ಕವಿಗಳಿಂದ “ಉರುಕಳ್‌ವೈಭವನಿವಾಹನಿಧಾನ” ಎಂದು ಬಿರುದಾಂಕಿತನಾದ ಈತನ ಕಾಲದ ವೈಭವ ಇಂದಿಗೂ ಮನೆ ಮಾತಾಗಿದೆ. ಶ್ರೀ ಕೃಷ್ಣದೇವರಾಯರ ಜಯಂತಿಯನ್ನು ಇಂದು ಸರಳವಾಗಿ ಆಚರಿಸಿದ್ದು, ಮುಂಬರುವ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಆಚರಿಸಲಾಗುವುದು ಎಂದರು.

ಪ.ಪಂ. ನಾಮಿನಿ ಸದಸ್ಯ ಕೆ.ವಿ. ಪುರುಷೋತ್ತಮ್ ಮಾತನಾಡಿ, ಕ್ರಿಸ್ತ ಪೂರ್ವ 1500ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಆಳ್ವಿಕೆ ಮಾಡಿದ ತುಳುವ ವಂಶದ ಶ್ರೀ ಕೃಷ್ಣದೇವರಾಯರು ತೆಲುಗಿನ ಕಾಪು ಎಂದರೇ ಕನ್ನಡದ ಬಲಿಜ ಜನಾಂಗಕ್ಕೆ ಸೇರಿದವರು ಅಂದಿನಿಂದ ಜನಾಂಗವು ವ್ಯಾಪಾರ, ಒಕ್ಕಲುತನ ಹಾಗೂ ರೈತಾಪಿ ಜೀವನದ ಕಷ್ಟಕರ ಬದುಕನ್ನು ಮಾಡಿಕೊಂಡು ಬರುತ್ತಿದೆ. ಯಾರು ಏನೇ ಹೇಳಿದರೂ ಇತಿಹಾಸ ತಜ್ಞರು ಹಾಗೂ ದಾಖಲೆಗಳ ಪ್ರಕಾರ ಶ್ರೀ ಕೃಷ್ಣದೇವರಾಯರ ವಿಜಯನಗರದ ಅರಸರು ಬಲಿಜ ಸಮುದಾಯಕ್ಕೆ ಸೇರಿದವರು. ಮುಂದಿನ ದಿನಗಳಲ್ಲಿ ಅವರ ಜಯಂತಿ ಜನಾಂಗದ ಪರವಾಗಿ ಸರ್ಕಾರದ ಜಯಂತಿಯನ್ನು ನಡೆಸಬೇಕು ಎಂದರು.

ಜೆಡಿಎಸ್ ಮುಖಂಡ ತಿಮ್ಮರಾಜು ಮಾತನಾಡಿ, ಶ್ರೀಕೃಷ್ಣದೇವರಾಯ ಜಯಂತಿಯನ್ನು ರಾಜ್ಯಾದ್ಯಂತ ಆಚರಿಸಬೇಕಿದ್ದು, ಇಂದು ಅತಿ ಸರಳವಾಗಿ ಅವರ ಜಯಂತಿಯನ್ನು ಬಲಿಜ ಸಮುದಾಯದಿಂದ ಆಚರಿಸುತ್ತಿದ್ದೇವೆ. ಶ್ರೀ ಕೃಷ್ಣದೇವರಾಯ ಹಾಗೂ ಯೋಗಿನಾರಾಯಣ ಯತೀಂದ್ರರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯ ಮಯೂರ ಗೋವಿಂದರಾಜು, ಪ.ಪಂ ನಾಮಿನಿ ಸದಸ್ಯ ಕೆ.ಬಿ ಲೋಕೇಶ್, ಪತ್ರಕರ್ತರಾದ ಎನ್. ಪದ್ಮನಾಭ್, ಕೆ.ಆರ್. ಸಂಜಯ್, ನವೀನ್‍ಕುಮಾರ್, ಬೆನಕ ವೆಂಕಟೇಶ್, ದಯಾನಂದ್, ಟೊಂಪೋ ಗೋವಿಂದ್, ಅಭಿಲಾಷ್, ಸೋಮೇಶ್, ಕಿರಣ್‍ಕುಮಾರ್, ಶಿವಯ್ಯ, ಸಂದೀಪ್, ಅಕ್ಷಯ್, ಗೋಪಾಲ್, ಕವಿತಾ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

FacebookGoogle+WhatsAppGoogle GmailShare


<< < Prev 1 2 3 4 5 6 7 8 Next > >>