VicksWeb upgrade Location upload ads trending
VicksWeb ಭಾರತ
29ವಾರದ ಭ್ರೂಣ ಗರ್ಭ‍‍ಪಾತಕ್ಕೆಅನುಮತಿ ನೀಡಿದ ಕೋಲ್ಕತ್ತ ಹೈಕೋರ್ಟ್
Source:  ಸಂಜೆವಾಣಿಗೆ ಸ್ವಾಗತ
Monday, 18 February 2019 20:05

 

ಕೋಲ್ಕತ್ತ.ಫೆ.18- ನಲವತ್ತೆರಡು ವರ್ಷದ ಗರ್ಭಿಣಿಯೊಬ್ಬರಿಗೆ 29 ವಾರದ ಭ್ರೂಣದ ಗರ್ಭಪಾತ ಮಾಡಿಸಿಕೊಳ್ಳಲು ಕೋಲ್ಕತ್ತ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.

ಭ್ರೂಣ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದು, ಶಿಶು ಜನಿಸಿದಲ್ಲಿ ಮಾನಸಿಕ, ದೈಹಿಕ ಹಾಗೂ ಆರ್ಥಿಕ ಒತ್ತಡ ಉಂಟಾಗುತ್ತದೆ ಎಂದು ಮಹಿಳೆ ಗರ್ಭಪಾತಕ್ಕೆ ಮನವಿ ಸಲ್ಲಿಸಿದ್ದರು.

ಮನವಿ ಪರಿಗಣಿಸಿದ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಬಿ ಸೊಮದ್ದರ್ ನೇತೃತ್ವದ ನ್ಯಾಯಪೀಠ, ಜನಿಸದೆ ಇರುವ ಶಿಶುವಿನ ಜತೆಗೆ ತಾಯಿಗೆ ಸಹ ಘನತೆಯಿಂದ ಜೀವಿಸುವ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರ ನೇಮಿಸಿದ್ದ ವೈದ್ಯಕೀಯ ಸಮಿತಿ ನೀಡಿರುವ ವರದಿಯಲ್ಲಿ, ‘ಈ ಶಿಶು ಜನಿಸಿದಲ್ಲಿ ಅನ್ನನಾಳ, ಹೃದಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಹೆಚ್ಚಿದೆ’ ಎಂದು ಉಲ್ಲೇಖಿಸಲಾಗಿದೆ.

‘ಶಿಶು ಜನಿಸಿದಲ್ಲಿ ದೀರ್ಘಾವಧಿ ಚಿಕಿತ್ಸೆ ಹಾಗೂ ವಿಶೇಷ ಕಾಳಜಿ ಬೇಕಾಗುತ್ತದೆ. ಆದರೆ ಫಲಿತಾಂಶ ಅನಿಶ್ಚಿತ ಎಂದು ವರದಿಯಲ್ಲಿ ಹೇಳಲಾಗಿದೆ’ ಎಂದು ಮಹಿಳೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

 

ರಾಜ್ಯ ಸರ್ಕಾರ ಮಹಿಳೆಗೆ ಆರ್ಥಿಕ ಹಾಗೂ ವೈದ್ಯಕೀಯ ನೆರವು ನೀಡಲು ಮುಂದಾಗಿಲ್ಲ ಎನ್ನುವುದನ್ನು ಉಲ್ಲೇಖಿಸಿರುವ ನ್ಯಾಯಪೀಠ, ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಗೆ ಅವಕಾಶ ಕಲ್ಪಿಸಿದೆ.

ಗರ್ಭಪಾತ ಕಾಯ್ದೆ ಅನುಸಾರ 20 ವಾರದ ಅಥವಾ ನಂತರದ ಭ್ರೂಣ ತೆಗೆಸಲು ಹೈಕೋರ್ಟ್ ಅನುಮತಿ ಅವಶ್ಯಕ.

 

FacebookGoogle+WhatsAppGoogle GmailShare


ಕೇರಳದಲ್ಲಿ ಜೋಡಿ ಕೊಲೆ: ಇಬ್ಬರನ್ನು ವಶಕ್ಕೆ ಪಡೆದ ಎಸ್‍ಐಟಿ
Source:  ಸಂಜೆವಾಣಿಗೆ ಸ್ವಾಗತ
Monday, 18 February 2019 20:03

ಕಾಸರಗೋಡು. ಫೆ.18- ಕಳೆದ ಶನಿವಾರ ಇಲ್ಲಿಗೆ ಸಮೀಪದ ಪೆರಿಯಾದಲ್ಲಿ ನಡೆದಿದ್ದ ಇಬ್ಬರು ಯುವ ಕಾಂಗ್ರೆಸ್‍ ಕಾರ್ಯಕರ್ತರ ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ  ಇಬ್ಬರನ್ನು ವಶಕ್ಕೆ ಪಡೆದಿದೆ.

ಭೀಕರ ಕೊಲೆ ನಂತರ ದುಷ್ಕರ್ಮಿಗಳು ಗಡಿ ದಾಟಿರುವ ಸಾಧ್ಯತೆ ಹಿನ್ನೆಲೆ  ಕರ್ನಾಟಕದಲ್ಲೂ ತನಿಖೆ ಮುಂದುವರೆದಿದೆ  ಎಂದು ಪೊಲೀಸ್‍ಮೂಲಗಳು ತಿಳಿಸಿವೆ.

ಕೊಲೆಗೆ ಸಂಬಂಧಿಸಿ ಎಸ್ಐಟಿ ಎರಡು ಮೋಟರ್ ಬೈಕ್‍ಗಳನ್ನೂ ವಶಕ್ಕೆ ತೆಗೆದುಕೊಂಡಿದೆ.

ಜೋಡಿ ಕೊಲೆ ಪ್ರಕರಣದಲ್ಲಿ ಸಿಪಿಎಂ ಕಾರ್ಯಕರ್ತರ ಕೈವಾಡ ಇರುವ ಸಾಧ್ಯತೆ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

FacebookGoogle+WhatsAppGoogle GmailShare


ಐಸಿಜೆಯಲ್ಲಿ  ಜಾಧವ್‌ ವಿಚಾರಣೆ: ಪಾಕ್‌ ಜಡ್ಜ್ ಗೆ ಹೃದಯಾಘಾತ
Source:  ಸಂಜೆವಾಣಿಗೆ ಸ್ವಾಗತ
Monday, 18 February 2019 20:02

 

ಇಸ್ಲಾಮಾಬಾದ್‌.ಫೆ.18- ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ ಕೇಸಿನ ವಿಚಾರಣೆ ಇಂದು ‘ದ ಹೇಗ್‌ ‘ ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಸಾಗುತ್ತಿದ್ದಂತೆಯೇ ಪಾಕಿಸ್ಥಾನದ ತಾತ್ಕಾಲಿಕ ನ್ಯಾಯಾಧೀಶ, 69ರ ಹರೆಯದ ತಸಾದಕ್‌ ಹುಸೇನ್‌ ಗೀಲಾನಿ ಅವರಿಗೆ ಹೃದಯಾಘಾತವಾಯಿತು.

 

ಗೀಲಾನಿ ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ದು ತುರ್ತು ಚಿಕಿತ್ಸೆಯನ್ನು ನೀಡಲಾಯಿತು. ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಾಕ್‌ ಮಾಧ್ಯಮ ವರದಿ ತಿಳಿಸಿದೆ.

 

ಐಸಿಜೆಯಲ್ಲಿ ಜಾಧವ್‌ ಅವರ ನಾಲ್ಕು ದಿನಗಳ ಬಹಿರಂಗ ವಿಚಾರಣೆ ಇಂದು ಸೋಮವಾರದಿಂದ ಆರಂಭಗೊಂಡಿದೆ.

 

ಜಾಧವ್‌ ಅವರನ್ನು ಐಸಿಜೆಯಲ್ಲಿ ಪ್ರತಿನಿಧಿಸಿರುವ ಹಿರಿಯ ವಕೀಲ ಹರೀಶ್‌ ಸಾಳ್ವೆ, ಕುಲಭೂಷಣ್‌ ಜಾಧವ್‌ ಭಾರತೀಯ ಬೇಹುಗಾರನೆಂಬ ಆರೋಪ ಮೇಲೆ ಪಾಕಿಸ್ಥಾನ ಅವರನ್ನು ತಪ್ಪಾಗಿ ಬಂಧಿಸಿದೆ ಎಂದು ವಾದಿಸಿ, ಪಾಕ್‌ ಮಿಲಿಟರಿ ನ್ಯಾಯಾಲಯವನ್ನು ಖಂಡಿಸಿ, ಜಾಧವ್‌ ವಿರುದ್ಧದ ಪಾಕ್‌ ಆರೋಪಗಳನ್ನು ಖಂಡತುಂಡವಾಗಿ ಅಲ್ಲಗಳೆದರು.

ಇಂದು ಐಸಿಜೆಯಲ್ಲಿ ಒಂದು ತಾಸಿಗೂ ಹೆಚ್ಚಿನ ವಿಚಾರಣೆ ನಡೆದಿದ್ದು ನಾಳೆ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ

FacebookGoogle+WhatsAppGoogle GmailShare


ತಾಕತ್ತಿದ್ದರೆ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿ: ಮಂಡ್ಯದ ವ್ಯಕ್ತಿಯಿಂದ ವಾಟಾಳ್ ಗೆ ಸವಾಲು
Source:  ಸಂಜೆವಾಣಿಗೆ ಸ್ವಾಗತ
Monday, 18 February 2019 20:01

ಮಂಡ್ಯ,ಫೆ.18- ಕಾಶ್ಮೀರದ ಪುಲ್ವಾಮದಲ್ಲಿ ನಡೆದ ದಾಳಿ ಖಂಡಿಸಿ ಈ ಹಿಂದೆ ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಿಂಪಡೆದದ್ದು ಗೊತ್ತಿದೆ.ಇದೇ ಬೆನ್ನಲ್ಲೇ ಮಂಡ್ಯದ ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟು ವಾಟಾಳ್ ಗೆ ಸವಾಲೆಸೆದಿದ್ದಾರೆ.

ಮಂಡ್ಯದ ಪೇಟೆ ಬೀದಿ ನಿವಾಸಿ ಅಂಗಪ್ಪ ಎಂಬಾತ ಸಾಮಾಜಿಕ ಜಾಲತಾಣಗಲ್ಲಿ ವೀಡಿಯೋವೊಂದನ್ನು ಹರಿಬಿಟ್ಟಿದ್ದಾನೆ. “ನಿನಗೆ ತಾಕತ್ತಿದ್ದರೆ ಜಮ್ಮು-ಕಾಶ್ಮೀರಕ್ಕೆ ಹೋಗೋಣ ಬಾ. ಅದು ಬಿಟ್ಟು ಕರ್ನಾಟಕ ಬಂದ್ ಏನಕ್ಕೆ ಮಾಡುತ್ತೀಯಾ  ಬಂದ್ ಅವಶ್ಯಕತೆ ಇಲ್ಲ. ಏನಕ್ಕೆ ಬಂದ್ ಮಾಡುತ್ತೀರ  ನಾನೇ ನಿಮ್ಮ ಜೊತೆ ಬರುತ್ತೇನೆ ಜಮ್ಮು-ಕಾಶ್ಮೀರಕ್ಕೆ ಹೋಗೋಣ ಬಾ” ಎಂದು ವಾಟಾಳ್ ನಾಗರಾಜ್ ಗೆ ಸವಾಲೆಸಿದಿದ್ದಾರೆ.

“ನಿಮಗೆ ತಾಕತ್ತಿದ್ದರೆ ನಮ್ಮನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿ. ನಾವು ಭಾರತದ ಹಿಂದೂಗಳಾಗಿದ್ದು, ಪ್ರಾಣ ಕೊಡುವುದಕ್ಕೆ ಸಿದ್ಧರಿದ್ದೇವೆ. ಆದರೆ ನೀವು ಕರ್ನಾಟಕ ಬಂದ್ ಯಾಕೆ ಮಾಡುತ್ತೀರಿ. ವಾಟಾಳ್ ನಾಗರಾಜ್ ಅವರೇ, ಅಂದು ನೀವು ಟೋಪಿ ಹಾಕಿಕೊಂಡು ಕಾರಲ್ಲಿ ಬಂದು ಅಂತಿಮ ದರ್ಶನ ಪಡೆದು ಹೊರಟು ಹೋದ್ರಿ. ನಾವು ಪಾರ್ಥಿವ ಶರೀರದ ಜೊತೆ ನಡೆದುಕೊಂಡು ಹೋಗಿ ಅಂತಿಮ ದರ್ಶನ ಪಡೆದವರು.

ಟೋಪಿ ಹಾಕಿಕೊಂಡು ರಾಜಕೀಯ ಮಾಡುತ್ತೀರಿ. ಬಂದ್ ಬೇಡ, ಬೇಕಾದರೆ ಕಾಶ್ಮೀರದವರೆಗೂ ನಡೆದುಕೊಂಡು ಹೋಗೋಣ ಬನ್ನಿ. ನಿಮ್ಮ ಸಂಘಟನೆ ಹೋರಾಟಗಾರರನ್ನು ಕರೆತನ್ನಿ ಎಲ್ಲರೂ ಪಾಕಿಸ್ತಾನಕ್ಕೆ ಹೋಗೋಣ. ಅಲ್ಲಿ ಉಗ್ರರ ವಿರುದ್ಧ ಹೋರಾಡೋಣ” ಎಂದು ವೀಡಿಯೋದಲ್ಲಿ ವಾಟಾಳ್ ವಿರುದ್ಧ ತಮ್ಮ ಅಸಮಧಾನ ಹೊರಹಾಕಿದ್ದಾರೆ.

FacebookGoogle+WhatsAppGoogle GmailShare


ಪಾಕ್ ಮೇಲೆ ಬೆರಳು ಮಾಡಿ ತೋರಿಸ್ಬೇಡಿ ಎಂದಿದ್ದ ವಕ್ತಾರ ಪೊಲೀಸ್ ವಶಕ್ಕೆ
Source:  ಸಂಜೆವಾಣಿಗೆ ಸ್ವಾಗತ
Monday, 18 February 2019 20:00

ವಿಜಯಪುರ,ಫೆ.18- ಪುಲ್ವಾಮಾ ಉಗ್ರರ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಮೇಲೆ ಬೆರಳು ಮಾಡಿ ತೋರಿಸಬೇಡಿ ಎಂದಿದ್ದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರನ್ನ ವಿಜಯಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುಲ್ವಾಮಾ ಕೃತ್ಯ ಖಂಡಿಸಿ ಪತ್ರಿಕಾಗೋಷ್ಠಿ ಕರೆದಿದ್ದ ಪಾಟೀಲ ಗಣಿಹಾರ ಅವರು ಪಾಕಿಸ್ತಾನದ ಮೇಲೆ ಬೆರಳು ಮಾಡಿ ತೊರಿಸಬೇಡಿ ಎಂದಿದ್ದರು. ಇದಕ್ಕೆ ಜಿಲ್ಲೆಯಲ್ಲಿ ತೀವ್ರ ಖಂಡನೆಗಳು ವ್ಯಕ್ತವಾಗಿದ್ದವು..ಅಷ್ಟೇ ಅಲ್ಲದೇ ಅವರದೇ ಪಕ್ಷದ ವಕ್ತಾರನ ಹೇಳಿಕೆಗೆ ಗೃಹ ಸಚಿವರು ಯಾವ ಶಿಕ್ಷೆ ಕೊಡ್ತೀರಾ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಬಹಿರಂಗವಾಗಿ ಪ್ರಶ್ನಿಸಿದ್ದರು.

ಇದ್ರಿಂದ ಮುಜಗರಕ್ಕೀಡಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು, ಪಾಟೀಲ ಗಣಿಹಾರ ಅವರ ಮೇಲೆ ಕ್ರಮಕೈಗೊಳ್ಳಿ ಎಂದು ಪೊಲೀಸ್ ಇಲಾಖೆಗೆ ‌ಸೂಚಿಸಿದ್ದರು.

ಹಿನ್ನಲೆಯಲ್ಲಿ ಇಂದು ಸೋಮವಾರ ಡಿವೈಎಸ್ಪಿ ಅಶೋಕ್ ಅವರು ಗಣಿಹಾರನನ್ನು ವಶಕ್ಕೆ ಪಡೆದಿದ್ದು, ವಿಜಯಪುರದ ಜಲನಗರ‌ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

 

FacebookGoogle+WhatsAppGoogle GmailShare


ಸಿಎಂ ಹೆಲಿಕಾಪ್ಟರ್​ ಮಿಸ್​ ಲ್ಯಾಂಡಿಂಗ್
Source:  ಸಂಜೆವಾಣಿಗೆ ಸ್ವಾಗತ
Monday, 18 February 2019 20:00

.

ಮೈಸೂರು.ಫೆ.18- ಸಿಎಂ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿಗದಿಯಾದ ಹೆಲಿಪ್ಯಾಡ್ನಲ್ಲಿ ಇಳಿಯದೇ ಪಕ್ಕದ ಹೆಲಿಪ್ಯಾಡ್ನಲ್ಲಿ ಲ್ಯಾಂಡ್ ಆಗಿದೆ. ಹೀಗಾಗಿ ಅಧಿಕಾರಿಗಳು ಗಲಿಬಿಲಿಯಾದ ಘಟನೆ ಟಿ ನರಸೀಪುರದಲ್ಲಿ ನಡೆದಿದೆ.

 

ಇಂದು ಟಿ. ನರಸೀಪುರದ ಕುಂಭಮೇಳದ ಗಂಗಾರತಿಯಲ್ಲಿ ಭಾಗವಹಿಸಲು ಸಿಎಂ, ಟಿ ನರಸೀಪುರದ ಕಾಲೇಜಿಗೆ ಆಗಮಿಸಬೇಕಿತ್ತು. ಆದರೆ ಸಿಎಂ ಇದ್ದ ಹೆಲಿಕಾಪ್ಟರ್ ಕಾಲೇಜು ಮೈದಾನದ ಹೆಲಿಪ್ಯಾಡ್ನಲ್ಲಿ ನಿಗದಿಯಾದ ಸ್ಥಳದ ಹೆಲಿಪ್ಯಾಡ್ನಲ್ಲಿ ಇಳಿಯದೆ, ಪಕ್ಕದಲ್ಲಿ ಯಾವುದೇ ರೀತಿ ಸಿದ್ಧವಾಗದ ಹೆಲಿಪ್ಯಾಡ್ನಲ್ಲಿ ಇಳಿಯಿತು. ಕ್ಷಣ ಮಾತ್ರ ಎಲ್ಲಾ ಅಧಿಕಾರಿಗಳು ಗಲಿಬಿಲಿಗೊಂಡು ಓಡಿ ಹೋದರು.

 

ಆ ಸಂದರ್ಭದಲ್ಲಿ ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸರಿಯಾಗಿ ಲ್ಯಾಂಡ್ ಆಯ್ತು.  ಈ ವೇಳೆ ಗಲಿಬಿಲಿಗೊಂಡಿದ್ದ ಅಧಿಕಾರಿಗಳು ಕೊಂಚ ನಿರಾಳರಾದರು.

 

FacebookGoogle+WhatsAppGoogle GmailShare


ಪುಲ್ವಾಮ ದಾಳಿ-ವಿಶ್ವದಿಂದ ಬೇರ್ಪಟ್ಟ ಪಾಕಿಸ್ತಾನ
Source:  ಸಂಜೆವಾಣಿಗೆ ಸ್ವಾಗತ
Monday, 18 February 2019 19:57

ಶಿಮ್ಲಾ. ಫೆ 18- ಪುಲ್ವಾಮ ಉಗ್ರರ ದಾಳಿ ನಂತರ ಪಾಕಿಸ್ತಾನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಜನರಲ್‍ವಿ.ಕೆ.ಸಿಂಗ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮ ಉಗ್ರರ ದಾಳಿ ನಂತರ 40ಕ್ಕೂ ಹೆಚ್ಚು ದೇಶಗಳು ನೆರೆಯ ಪಾಕಿಸ್ತಾನ ವಿರುದ್ಧ ಖಂಡನಾ ಹೇಳಿಕೆಗಳನ್ನು ನೀಡಿವೆ. ಮುಂಬೈ ಉಗ್ರರ ದಾಳಿ ನಂತರ ಭಾರತ ನಿಲುವನ್ನು ಬೆಂಬಲಿಸಿದ್ದ ರಾಷ್ಟ್ರಗಳ ಸಂಖ್ಯೆಗಿಂತ ಇದೀಗ ಹೆಚ್ಚಿನ ಸಂಖ್ಯೆಯ ರಾಷ್ಟ್ರಗಳು ಬೆಂಬಲ ನೀಡುತ್ತಿವೆ. ಇದು ಭಾರತದ ವಿದೇಶಾಂಗ ಮತ್ತು ರಾಜತಾಂತ್ರಿಕ ನೀತಿಗೆ ದೊರೆತ ದೊಡ್ಡ ಜಯವಾಗಿದೆ ಎಂದು ಅವರು ಹೇಳಿದ್ದಾರೆ.

ತುಂಬಾ ಯೋಜಿತವಾಗಿ ಪುಲ್ವಾಮದಲ್ಲಿ ಸಿಆರ್ ಪಿಎಫ್‍ಬೆಂಗಾವಲು ಪಡೆ ಮೇಲೆ ದಾಳಿ ನಡೆದಿದ್ದು, ಸೂಕ್ತ ಸಮಯದಲ್ಲಿ ಭಾರತ ಪ್ರತೀಕಾರ ತೀರಿಸಿಕೊಳ್ಳಲಿದೆ. ಇದಕ್ಕಾಗಿ ಯುದ್ಧ, ಇಲ್ಲವೇ ಯುದ್ಧ ರೀತಿಯ ದಾಳಿಯನ್ನು ನಡೆಸಲು ಭಾರತ ಹಿಂದೆ ಸರಿಯುವುದಿಲ್ಲ. ಆತುರವಾಗಿ ಕ್ರಮ ತೆಗೆದುಕೊಳ್ಳುವುದಿಲ್ಲ. ಒಸಾಮ ಬಿನ್‍ಲಾಡೆನ್‍ಪಾಕಿಸ್ತಾನದಲ್ಲಿದ್ದಾನೆಂದು ಅಮೆರಿಕಕ್ಕೆ ಗೊತ್ತಿದ್ದರೂ ಒಂದೇ ದಿನದಲ್ಲಿ ಅವನನ್ನು ಮುಗಿಸಲು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಸ್ವಲ್ಪ ಕಾದು, ಸೇನಾ ಪಡೆಗಳನ್ನು ಬೆಂಬಲಿಸೋಣ ಎಂದು ಅವರು ಹೇಳಿದ್ದಾರೆ.

ಬೇಹುಗಾರಿಕೆ ವೈಫಲ್ಯ ಹಾಗೂ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಕುರಿತು ವಿಶ್ಲೇಷಿಸಲಾಗುವುದು ಎಂದು ಜ. ವಿ.ಕೆ.ಸಿಂಗ್‍ಪ್ರಶ್ನೆಯೊಂದಕ್ಕೆ ಉತ್ತರಿಸಿ ತಿಳಿಸಿದ್ದಾರೆ.

FacebookGoogle+WhatsAppGoogle GmailShare


ಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯ
Source:  Oneindia Kannada
Monday, 18 February 2019 19:51

ಬೆಂಗಳೂರು, ಫೆಬ್ರವರಿ 18: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೂರ್ ನಲ್ಲಿ ನಡೆದ ಉಗ್ರರ ದಾಳಿ ನಂತರ ಭಾರತದ ಹ್ಯಾಕರ್ ಗಳು ಪಾಕಿಸ್ತಾನ ವಿರುದ್ಧ ಸ್ವಯಂಪ್ರೇರಣೆಯಿಂದ ಸೈಬರ್ ವಾರ್ ನಡೆಸಿ ಹಲವು ಸರ್ಕಾರಿ ವೆಬ್ ತಾಣಗಳನ್ನು ಹ್ಯಾಕ್ ಮಾಡಿದ್ದು ಗೊತ್ತಿರಬಹುದು. ಈ ಕುರಿತಂತೆ ಉಂಟಾಗಿರುವ ಗೊಂದಲವನ್ನು ಎಥಿಕಲ್ ಹ್ಯಾಕರ್ ಅಂಶುಲ್ ಸಕ್ಸೇನಾ ಅವರು ಸತ್ಯಾಂಶ ಬಹಿರಂಗ

ಆರ್ ಬಿಐನಿಂದ ಕೇಂದ್ರ ಸರಕಾರಕ್ಕೆ 28 ಸಾವಿರ ಕೋಟಿ ಮಧ್ಯಂತರ ಲಾಭಾಂಶ
Source:  Oneindia Kannada
Monday, 18 February 2019 19:48

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸೋಮವಾರದಂದು ಮಧ್ಯಂತರ ಲಾಭಾಂಶವಾಗಿ ಕೇಂದ್ರ ಸರಕಾರಕ್ಕೆ 28 ಸಾವಿರ ಕೋಟಿ ಘೋಷಣೆ ಮಾಡಿದೆ. ಹಣಕಾಸು ಸಚಿವಾಲಯದ ಜತೆಗೆ ಬಜೆಟ್ ನಂತರ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. 2018-19ರಲ್ಲಿ ಒಟ್ಟಾರೆಯಾಗಿ ಸರಕಾರಕ್ಕೆ ವರ್ಗಾವಣೆ ಮಾಡಿರುವ ಮೊತ್ತ 68 ಸಾವಿರ ಕೋಟಿ ರುಪಾಯಿ ಆಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆಗೆ ಮಾತುಕತೆ

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಮುಜುಗರ ಉಂಟುಮಾಡಿದ ಭಾರತ
Source:  Oneindia Kannada
Monday, 18 February 2019 18:27

ಹೇಗ್, ಫೆಬ್ರವರಿ 18: ಭಯೋತ್ಪಾದನೆಗೆ ಪ್ರಚೋದನೆ ನೀಡುವ ಜೊತೆಯಲ್ಲಿ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹವಣಿಸುತ್ತಿರುವ ಪಾಕಿಸ್ತಾನಕ್ಕೆ ಸೋಮವಾರ ನೆದರ್ಲೆಂಡ್‌ನ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತೀವ್ರ ಮುಜುಗರವಾಗಿದೆ. ಕುಲಭೂಷಣ್ ಜಾಧವ್ ಅವರಿಗೆ ಗಲ್ಲುಶಿಕ್ಷೆ ವಿಧಿಸಿದ್ದ ಪಾಕಿಸ್ತಾನದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ದೀಪಕ್ ಮಿಟ್ಟಲ್ ಪಾಕಿಸ್ತಾನದ

<< < Prev 1 2 3 4 5 6 7 Next > >>