VicksWeb upgrade Location upload ads trending
VicksWeb ಭಾರತ
ಕಡಿಮೆ ವೆಚ�ಚದಲ�ಲಿ ವಿದೇಶ ಪ�ರಯಾಣಕ�ಕೊಂದ� ಕೈಪಿಡಿ
Source:  Vishva Kannada
Sunday, 15 December 2019 16:47

ಶ�ರೀನಿಧಿ ಹಂದೆಯವರ “ವಿದೇಶ ಪ�ರಯಾಣ, ಬಜೆಟ�‌ನಲ�ಲಿ� ಪ�ಸ�ತಕ

 

ಕನ�ನಡದಲ�ಲಿ ಪ�ರವಾಸ ಸಾಹಿತ�ಯ ವಿಪ�ಲವಾಗಿದೆ. ೧೯ನೆಯ ಶತಮಾನದಲ�ಲೇ ಪ�ರವಾಸಗಳ ಬಗ�ಗೆ ಪ�ಸ�ತಕಗಳ� ಕನ�ನಡದಲ�ಲಿ ಬಂದಿವೆ. ಪ�ಸ�ತಕಗಳಿಗೆ ಪ�ರಶಸ�ತಿ ನೀಡ�ವಾಗಲೂ ಪ�ರವಾಸ ಸಾಹಿತ�ಯ ಎಂಬ ಪ�ರತ�ಯೇಕ ವಿಭಾಗವನ�ನ� ಗಮನದಲ�ಲಿಟ�ಟ�ಕೊಳ�ಳಲಾಗ�ತ�ತಿದೆ. ಅವೆಲ�ಲಾ ಸರಿ. ಅದರೆ ಪ�ರವಾಸ ಮಾಡ�ವ�ದ� ಹೇಗೆ, ಅದರಲ�ಲೂ ಅತಿ ಕಡಿಮೆ ಖರ�ಚಿನಲ�ಲಿ ಪ�ರವಾಸ ಮಾಡ�ವ�ದ� ಹೇಗೆ, ಇನ�ನೂ ಸ�ಪಷ�ಟವಾಗಿ ಹೇಳಬೇಕಾದರೆ ಅತಿ ಕಡಿಮೆ ಖರ�ಚಿನಲ�ಲಿ ವಿದೇಶ ಪ�ರವಾಸ ಮಾಡ�ವ�ದ� ಹೇಗೆ ಎಂದ� ಯಾರಾದರೂ ಪ�ಸ�ತಕ ಬರೆದ�ದ� ನನಗೆ ತಿಳಿದಿಲ�ಲ. ಈ ಕೊರತೆಯನ�ನ� ಈಗ ಶ�ರೀನಿಧಿ ಹಂದೆ ತ�ಂಬಿಸಿದ�ದಾರೆ.VishvaDarshanaBudgetnalli-01

 

ಶ�ರೀನಿಧಿ ಹಂದೆ ಹೊಸ ತಲೆಮಾರಿನ ಲೇಖಕರ�. ಲೇಖಕರ� ಅಂದ ತಕ�ಷಣ ಪತ�ರಿಕೆಗಳಲ�ಲಿ ಲೇಖನ ಬರೆಯ�ವವರ�, ಪ�ಸ�ತಕ ಬರೆಯ�ವವರ� ಎಂದೆಲ�ಲಾ ಆಲೋಚನೆ ಬರ�ತ�ತದೆ ತಾನೆ? ಆದರೆ ಇವರ� ಹಾಗಲ�ಲ. ಇವರ ಲೇಖನಗಳೇನಿದ�ದರೂ ಅಂತರಜಾಲದಲ�ಲಿ ಪ�ರಕಟವಾದವ�. ಇ-ಲೋಕದಲ�ಲಿ ಇವರ ಹೆಸರ� ಸ�ಪರಿಚಿತ. ಪ�ರವಾಸದ ಬಗ�ಗೆ ಹಲವ� ವರ�ಷಗಳಿಂದ ಬ�ಲಾಗ� ನಡೆಸಿಕೊಂಡ� ಬರ�ತ�ತಿದ�ದಾರೆ. ಯಾವ�ದಾದರೊಂದ� ದೇಶ ಅಥವಾ ಅಲ�ಲಿಯ ನಗರಕ�ಕೆ ಪ�ರವಾಸ ಹೋಗ�ವ ಮೊದಲ� ಅಂತರಜಾಲದಲ�ಲಿ ಆ ನಗರದ ಬಗ�ಗೆ ಮಾಹಿತಿ ಹ�ಡ�ಕಿದರೆ ದೊರೆಯ�ವ ಜಾಲತಾಣಗಳಲ�ಲಿ ಶ�ರೀನಿಧಿ ಹಂದೆಯವರ ಜಾಲತಾಣವೂ ಇರ�ತ�ತದೆ. ಇವರ ಬಹ�ತೇಕ ಬ�ಲಾಗ�‌ಗಳ� ಒಂದ� ರೀತಿಯಲ�ಲಿ ಓದ�ಗ ಸ�ನೇಹಿ. ಓದ�ಗ �ನನ�ನ� ಹ�ಡ�ಕ�ತ�ತಿದ�ದಾನೋ ಅದ�ವೇ ಇವರ ಬ�ಲಾಗಿನಲ�ಲಿ ಕಂಡ� ಬರ�ತ�ತದೆ. ಹೋಗಬೇಕಾದ ನಗರದಲ�ಲಿ ಕಡಿಮೆ ಖರ�ಚಿನಲ�ಲಿ ವಸತಿ ಹೇಗೆ, ವೀಸಾ ಪಡೆಯ�ವ�ದ� ಹೇಗೆ, ಅದಕ�ಕೆ ಎಷ�ಟ� ಖರ�ಚಾಗ�ತ�ತದೆ, ಹೀಗೆ ಹಲವ� ಹಲವ� ಹತ�ತ� ಮಾಹಿತಿಗಳ� ಇವರ ಬ�ಲಾಗಿನಲ�ಲಿ ದೊರೆಯ�ತ�ತವೆ. ನಾನೂ ಕೆಲವೊಮ�ಮೆ ಇವರ ಬ�ಲಾಗಿನಿಂದ ಮಾಹಿತಿ ಪಡೆದಿದ�ದೇನೆ. ಉದಾಹರಣೆಗೆ ಶ�ರೀಲಂಕ ಪ�ರವಾಸ ಮಾಡಬೇಕಾದಾಗ.

 

ಈ ಎಲ�ಲ ಮಾಹಿತಿಗಳ� ಇವರ ಬ�ಲಾಗಿನಲ�ಲಿ ಇಂಗ�ಲಿಷ� ಭಾಷೆಯಲ�ಲಿವೆ. ಮೂಲತಃ ಉಡ�ಪಿ ಪಕ�ಕದವರಾದ ಶ�ರೀನಿಧಿ ಹಂದೆ ತಮ�ಮ ಮಾತೃಭಾಷೆಯಾದ ಕನ�ನಡದಲ�ಲೂ ಅಷ�ಟೇ ಚೆನ�ನಾಗಿ ಬರೆಯಬಲ�ಲವರ�. ಕಂಗ�ಲಿಷಿನಲ�ಲಿ ಬರೆದರೆ ನನಗೆ ನಖಶಿಖಾಂತ ಸಿಟ�ಟ� ಬರ�ತ�ತದೆ ಎಂದ� ಗೊತ�ತಿರ�ವ ಶ�ರೀನಿಧಿ ಹಂದೆ ನನ�ನ ಫೇಸ�‌ಬ�ಕ� ಪೋಸ�ಟಿಗೆ ಅಥವಾ ನನ�ನ ಬ�ಲಾಗಿಗೆ ಶ�ದ�ಧ ಕನ�ನಡದಲ�ಲೇ ಪ�ರತಿಕ�ರಿಯಿಸ�ತ�ತಾರೆ. ಕೆಲವೊಮ�ಮೆ ಕನ�ನಡದಲ�ಲೇ ಸ�ವಾರಸ�ಯಕರವಾದ ಪೋಸ�ಟ� ಹಾಕ�ತ�ತಿರ�ತ�ತಾರೆ. ಅಂತರಜಾಲದಲ�ಲಿ, ಫೇಸ�‌ಬ�ಕ�‌ನಲ�ಲಿ, ಬ�ಲಾಗ�ಗ� ಲೋಕದಲ�ಲಿ ಸಕ�ರಿಯರಾಗಿರ�ವವರಿಗೆ ಶ�ರೀನಿಧಿ ಹಂದೆ ಚಿರಪರಿಚಿತರ�. ಚೆನ�ನಾಗಿ ಕನ�ನಡ ಭಾಷೆಯಲ�ಲಿ ಬರೆಯಬಲ�ಲ ಇವರ� ತಮ�ಮ ಬ�ಲಾಗಿನಲ�ಲೇನೋ ಇಂಗ�ಲಿಷ� ಭಾಷೆಯಲ�ಲಿ ಮಾಹಿತಿ ನೀಡ�ತ�ತಿರ�ತ�ತಾರೆ. ಕನ�ನಡಿಗರಿಗೆ ಈ ಎಲ�ಲ ಮಾಹಿತಿ ಪಡೆಯ�ವ ಭಾಗ�ಯ �ಕಿಲ�ಲ ಎಂಬ ಪ�ರಶ�ನೆಗೆ ಉತ�ತರ ರೂಪವಾಗಿ ಈಗ ಈ ಪ�ಸ�ತಕ ಹೊರಬರ�ತ�ತಿದೆ.

 

ಕನ�ನಡದ ಇತರೆ ಪ�ರವಾಸ ಸಾಹಿತ�ಯಕ�ಕೂ ಈ ಪ�ಸ�ತಕಕ�ಕೂ ಒಂದ� ಪ�ರಮ�ಖ ವ�ಯತ�ಯಾಸವಿದೆ. ಇದ� ಪ�ರವಾಸಕಥನವಲ�ಲ. ಪ�ರವಾಸ ಮಾಡ�ವ�ದ� ಹೇಗೆ ಎಂದ� ವಿವರಿಸ�ವ ಒಂದ� ಪ�ಸ�ತಕ. ಕೈಪಿಡಿ ಎಂದೂ ಕರೆಯಬಹ�ದ�. ಇಂಗ�ಲಿಷ� ಭಾಷೆಯಲ�ಲಿ ಪ�ರಕಟವಾಗ�ವ do it yourself ಮಾದರಿಯ ಪ�ಸ�ತಕ ಎನ�ನಬಹ�ದ�. ನನಗೆ ತಿಳಿದಂತೆ ಕನ�ನಡದಲ�ಲಿ ಯಾರೂ ಇದ� ತನಕ ಇಂತಹ ಪ�ಸ�ತಕ ಬರೆದಿಲ�ಲ. ಪ�ರವಾಸ ಮಾಡ�ವ�ದ� ಹೇಗೆ ಎಂಬ�ದನ�ನ� ಮಾತ�ರವಲ�ಲ, ಅತಿ ಕಡಿಮೆ ಖರ�ಚಿನಲ�ಲಿ ಪ�ರವಾಸ ಮಾಡ�ವ�ದ� ಹೇಗೆ ಎಂಬ�ದನ�ನ� ಶ�ರೀನಿಧಿ ಹಂದೆಯವರ� ೩೯ ದೇಶ ಪ�ರವಾಸ ಮಾಡಿದ ತಮ�ಮದೇ ಅನ�ಭವದ ಆಧಾರದಲ�ಲಿ ವಿವರಿಸ�ತ�ತಾರೆ. ವೀಸಾ, ವಿಮಾನ ಟಿಕೆಟ�, ವಿದೇಶೀ ವಿನಿಮಯ, ವಸತಿ, ಆಹಾರ, ಇತ�ಯಾದಿ ಎಲ�ಲ ಅಗತ�ಯ ವಿಭಾಗಗಳನ�ನ� ಸರಳವಾದ ಮಾತಿನಲ�ಲಿ ಬಿಚ�ಚಿಡ�ತ�ತಾರೆ. ಪ�ರಕಾಂಡ ಪಂಡಿತರ� ಮಾಡ�ವಂತೆ ತಮ�ಮ ಪಾಂಡಿತ�ಯ ಪ�ರದರ�ಶನ ಇಲ�ಲಿಲ�ಲ. ಹೇಳಬೇಕಾದ ವಿಷಯವನ�ನ� ಸರಳವಾಗಿ ಸ�ಲಭವಾಗಿ ಮನದಟ�ಟ� ಮಾಡ�ವಂತೆ ಬರೆಯಲಾಗಿದೆ.

VishvaDarshanaBudgetnalli-02

ಪ�ಸ�ತಕದ ಸಾಫ�ಟ�‌ಕಾಪಿ ದೊರೆತ ತಕ�ಷಣ ನಾನ� ಮೊದಲ�  ಲಂಘನ ಮಾಡಿದ�ದ� ಆಹಾರ  ಎಂಬ ವಿಭಾಗಕ�ಕೆ. ಇದಕ�ಕೆ ಕಾರಣವಿದೆ. ಶ�ರೀನಿಧಿ ಹಂದೆಯವರ� ನನ�ನಂತೆ ಅಪ�ಪಟ ಸಸ�ಯಾಹಾರಿಗಳ�. ಭಾರತೀಯರ ಪ�ರಕಾರ ಸಸ�ಯಾಹಾರವೆಂದರೆ ಮೊಟ�ಟೆ ಮೀನ� ಎಲ�ಲ ಇಲ�ಲ. ಆದರೆ ಹಲವ� ವಿದೇಶೀಯರ ಪ�ರಕಾರ ಮೊಟ�ಟೆ ಮೀನ� ಎಲ�ಲ ಮಾಂಸಾಹಾರಗಳಲ�ಲ. ಆದ�ದರಿಂದ ವಿದೇಶ ಪ�ರಯಾಣ ಮಾಡ�ವಾಗ, ವಿಮಾನದಲ�ಲಿ, ರೆಸ�ಟಾರೆಂಟ�ಗಳಲ�ಲಿ ಅಪ�ಪಟ ಸಸ�ಯಾಹಾರ ಪಡೆಯಲ� ಸರ�ಕಸ� ಮಾಡಬೇಕಾಗ�ತ�ತದೆ. ನನಗೆ ಇದ� ಅನ�ಭವವಾಗಿದೆ. ಆ ಬಗ�ಗೆ ಒಂದ� ಲೇಖನವನ�ನೇ ಬರೆದಿದ�ದೆ. ಶ�ರೀನಿಧಿ ಹಂದೆ ಈ ಬಗ�ಗೆ �ನನ�ನ� ಬರೆದಿದ�ದಾರೆ ಎಂದ� ಓದ�ವ ಕ�ತೂಹಲ. ನಿರಾಸೆಯೇನೂ ಆಗಲಿಲ�ಲ. ಭಾರತೀಯರಿಗೆ, ಅದರಲ�ಲೂ ಸಸ�ಯಾಹಾರಿಗಳಿಗೆ, ವಿದೇಶ ಪ�ರಯಾಣ ಮಾಡ�ವಾಗ ಆಹಾರದ ಬಗ�ಗೆ �ನೇನ� ಎಚ�ಚರಿಕೆ ತೆಗೆದ�ಕೊಳ�ಳಬೇಕ�, ಸಸ�ಯಾಹಾರ ಹ�ಡ�ಕ�ವ�ದ�, ಪಡೆಯ�ವ�ದ� ಹೇಗೆ ಎಂದೆಲ�ಲ ವಿವರಿಸಿದ�ದಾರೆ. ಆದರೆ ನಮ�ಮೂರಿನ ಎಂಟಿಆರ� ಅಥವಾ ಮಯ�ಯಾಸ�‌ನವರ ready to eat ಗಳನ�ನ� ಇಲ�ಲಿಂದಲೇ ತೆಗೆದ�ಕೊಂಡ� ಹೋಗ�ವ ಬಗ�ಗೆ ಈ  ಪ�ಸ�ತಕದಲ�ಲಿ ಅವರ� ಸೇರಿಸಿಲ�ಲ. ಅದಕ�ಕೆ ಪ�ರಮ�ಖ ಕಾರಣ ಬಹ�ಶಃ ಇದ� ಅತಿ ಕಡಿಮೆ ಖರ�ಚಿನಲ�ಲಿ ಮಾಡ�ವ ಪ�ರಯಾಣಗಳ ಬಗೆಗೆ ವಿವರಿಸ�ವ ಪ�ಸ�ತಕ. ಅಂದರೆ ಸಾದ�ಯವಿದ�ದಷ�ಟ� ಚೆಕ�-ಇನ� ಲಗ�ಗೇಜ� ಇಲ�ಲದೆ ಕೇವಲ ಹ�ಯಾಂಡ�‌ಬ�ಯಾಗ� ಮಾತ�ರವನ�ನೇ ಹಿಡಿದ�ಕೊಂಡ� ಹೋಗ�ವ ಪ�ರಯಾಣ. ಅಗ ತ�ಂಬ ಆಹಾರ ತೆಗೆದ�ಕೊಂಡ� ಹೋಗಲ� ಆಗ�ವ�ದಿಲ�ಲ.

 

ಶ�ರೀನಿಧಿ ಹಂದೆಯವರ� ತಮ�ಮ ಎಲ�ಲಾ ಪ�ರವಾಸಗಳ ಬಗ�ಗೆ ಬ�ಲಾಗ� ಬರೆಯ�ವಾಗ ತಪ�ಪದೆ ಒಂದ� ವಿಷಯ ಸೇರಿಸಿರ�ತ�ತಾರೆ. ಅದೆಂದರೆ ತಾವ� ಭೇಟಿ ನೀಡಿದ ದೇಶ, ನಗರದಲ�ಲಿ ಎಳನೀರ� ದೊರೆಯ�ತ�ತದೆಯೇ, ದೊರೆಯ�ವ�ದಿದ�ದರೆ ಅದರ ಬೆಲೆ ಎಷ�ಟ�, ಎಂದ�. ನಾವಂತೂ ಫೇಸ�‌ಬ�ಕ�‌ನಲ�ಲಿ ಅವರನ�ನ� ಎಳನೀರಿನ ಬ�ರ�ಯಾಂಡ� ಅಂಬಾಸಿಡರ� ಎಂದ� ಗೇಲಿ ಮಾಡ�ತ�ತೇವೆ. ಈ ಬಗ�ಗೆ ಅವರ ಪ�ಸ�ತಕದಲ�ಲಿ ಕೇವಲ ಒಂದ� ಪ�ಯಾರಾ ಮಾತ�ರ ಬರೆದಿದ�ದಾರೆ. ಹಾಗೆ ನೋಡಿದರೆ ತಮ�ಮ ಅನ�ಭವಗಳ ಬಗ�ಗೆ ಚಿಕ�ಕದಾಗಿ ಒಂದ� ಅಧ�ಯಾಯ ಮಾತ�ರ ಇದೆ. ಬಹ�ಶಃ ಈ ಅನ�ಭವಗಳನ�ನೇ ವಿಸ�ತರಿಸಿ ಇನ�ನೊಂದ� ಅಥವಾ ಹಲವ� ಪ�ಸ�ತಕಗಳನ�ನ� ಮ�ಂದಕ�ಕೆ ಬರೆಯಬಹ�ದೇನೋ? ಹಾಗೆ ಮಾಡಿದರೆ ಅದ� ಕನ�ನಡಕ�ಕೆ ಉತ�ತಮ ಕೊಡ�ಗೆಯಾಗಬಹ�ದ�. ಉತ�ತಮ ಬರೆವಣಿಗೆ ಇರ�ವ ಶ�ರೀನಿಧಿ ಹಂದೆಯವರಿಂದ ನಾವ� ಇದನ�ನ� ನಿರೀಕ�ಷಿಸಲೂ ಬಹ�ದ�.

– ಡಾ. ಯà³�. ಬಿ. ಪವನಜ

ಅಮೆ�ಾನ� ಜಾಲಮಳಿಗೆಯಲ�ಲಿ ಪ�ಸ�ತಕ ಕೊಳ�ಳಲ� ಇಲ�ಲಿ ಕ�ಲಿಕ� ಮಾಡಿ.


ಮೂಕಜ�ಜಿಯ ಕನಸ�ಗಳ� ಚಲನಚಿತ�ರ
Source:  Vishva Kannada
Saturday, 02 March 2019 10:16

– ಸà³�ಶà³�ರà³�ತ ದೊಡà³�ಡೇರಿ

ಕಾದಂಬರಿ ಆಧಾರಿತ ಸಿನೆಮಾಗಳನ�ನ� ನೋಡಲ� ಹೋಗಲ� ಹಿಂಜರಿಕೆಯಾಗ�ತ�ತದೆ. ಅದೂ ನಾವ� ಇಷ�ಟ ಪಟ�ಟ� ಓದಿದ ಕಾದಂಬರಿ/ಕೃತಿಯಾಗಿದ�ದರೆ, ಸಿನೆಮಾದಲ�ಲಿ ಎಲ�ಲಿ ಅದನ�ನ� ಹಾಳ� ಮಾಡಿಬಿಟ�ಟಿರ�ತ�ತಾರೋ ಎಂಬ ಭಯ. ಓದ�ವಾಗ ನಮಗೆ ಆದ ನವಿರ� ಅನ�ಭವ, ಕಲ�ಪಿಸಿಕೊಂಡ ಚಿತ�ರಗಳ�, ಊಹಿಸಿಕೊಂಡ ಪಾತ�ರಗಳ ಮ�ಖಗಳ� ಇಲ�ಲಿ ಬೇರೆಯೇ ಆಗಿ, ಓದಿನ ನೆನಪಿನ ಸ�ಖ ಅಳಿಸಿಹೋಗ�ವ ಅಳ�ಕ� ಬಹಳ ಸಲ ಕಾಡ�ತ�ತದೆ.

ಆದರೆ ಪಿ. ಶೇಷಾದ�ರಿಯವರ ಹಿಂದಿನ ಸಿನೆಮಾಗಳನ�ನ� ನೋಡಿದವರ� ಅಷ�ಟೆಲ�ಲಾ ಹಿಂಜರಿಯಬೇಕಿಲ�ಲ. ಅವರ ಮೇಲೆ ಈಗಾಗಲೇ ಒಂದ� ನಂಬಿಕೆ ಮೂಡಿರ�ತ�ತೆ. ಆ ನಂಬಿಕೆಯನ�ನಿಟ�ಟ�ಕೊಂಡೇ ಹೋಗಿದ�ದ� ‘ಮೂಕಜ�ಜಿಯ ಕನಸ�ಗಳ�’ ಸಿನೆಮಾಗೆ.  ಬೆಂಗಳೂರ� ಅಂತರ�ರಾಷ�ಟ�ರೀಯ ಚಲನಚಿತ�ರೋತ�ಸವ-2019ರಲ�ಲಿ ಇದರ ಮೊದಲ ಪ�ರದರ�ಶನಗಳ� ಇದ�ದವ�.  ನಿರ�ದೇಶಕರೂ-ಕಲಾವಿದರೂ ಜತೆಗೇ ಇದ�ದರ�.

ಕಾದಂಬರಿಯನ�ನ� ತೆರೆಗೆ ತರ�ವಲ�ಲಿ ಶೇಷಾದ�ರಿಯವರ� ವಹಿಸಿರ�ವ ಶ�ರಮ ಮತ�ತ� ಶ�ರದ�ಧೆ ಸಿನೆಮಾದಲ�ಲಿ ಎದ�ದ� ಕಾಣ�ತ�ತದೆ. ಪ�ರತಿ ಫ�ರೇಮಿನಲ�ಲೂ ಅವರ ಕ�ಸ�ರಿ ಕೆಲಸವಿದೆ. ಅವರೇ ಹೇಳಿಕೊಂಡಂತೆ ಇದರ ಚಿತ�ರಕತೆ ಬರೆಯಲ� ಅವರ� ನಾಲ�ಕೈದ� ವರ�ಷಗಳನ�ನ� ವ�ಯಯಿಸಿದ�ದಾರೆ. ‘ಮೂಕಜ�ಜಿಯ ಕನಸ�ಗಳ�’ ಕೃತಿಯೇ ಹಾಗಿದೆ. ಶಿವರಾಮ ಕಾರಂತರಿಗೆ ಜ�ಞಾನಪೀಠ ತಂದ�ಕೊಟ�ಟ ಈ ಕೃತಿ, ನಮ�ಮ ದೇಶದ ಅತ�ಯಂತ ಸೂಕ�ಷ�ಮ ಪ�ರಶ�ನೆಗಳಾದ ದೇವರ�, ಧರ�ಮ, ಜಾತಿ, ಆಚರಣೆಗಳ�, ಸಂಬಂಧಗಳ�, ಮದ�ವೆ –ಇತ�ಯಾದಿ ವಿಷಯಗಳನ�ನ� ಸ�ಥೂಲವಾಗಿ ತಾಕ�ತ�ತದೆ. ಮೂಕಜ�ಜಿಯೆಂಬ ಮ�ದ�ಕಿಯ ಬಾಯಿಯಿಂದ ಈ ಎಲ�ಲವನ�ನೂ ಹೇಳಿಸ�ತ�ತದೆ. ಈ ಮೂಕಜ�ಜಿ ದಾರ�ಶನಿಕಳೋ, ಮಾಟಗಾತಿಯೋ, ಪ�ರಾಜ�ಞಳೋ, ಭ�ರಮಿತೆಯೋ –ತಿಳಿಯ�ವ�ದಿಲ�ಲ.  ಆದರೆ ಭಾಗಶಃ ವಿಷಯಗಳಲ�ಲಿ ಮೂಕಜ�ಜಿ ಹೇಳ�ತ�ತಿರ�ವ�ದ� ಸರಿ ಅನ�ನಿಸ�ತ�ತದೆ.  ಅವಳ ಮೊಮ�ಮಗ ಸ�ಬ�ರಾಯ ಕೇಳ�ವ ಪ�ರಶ�ನೆಗಳ� ಒಂದಲ�ಲಾ ಒಂದ� ದಿನ ನಮ�ಮನ�ನೂ ಕಾಡಿದ ಪ�ರಶ�ನೆಗಳೇ. ಇಲ�ಲಿ ಮೂಕಜ�ಜಿ ಯಾವ ಪ�ರಶ�ನೆಗೂ ನೇರವಾಗಿ ಉತ�ತರ ಕೊಡ�ವ�ದಿಲ�ಲ. ಆಕೆಗೂ ಅವ�ಗಳ ಬಗ�ಗೆ ನೂರ� ಪ�ರತಿಶತ ಆತ�ಮವಿಶ�ವಾಸವಿದ�ದಂತಿಲ�ಲ. ಮತ�ತೆ ಅದ� ಹೇಗೆ ಅವಳ� ಇಷ�ಟೆಲ�ಲಾ ತಿಳಿದ�ಕೊಂಡಿದ�ದಾಳೆ ಅಂತ ಕೇಳಿದರೆ, ಅವಳ� ಹೇಳ�ತ�ತಾಳೆ: ‘ಈ ಅಶ�ವತ�ಥ ಮರ ನೋಡ�.. ನೂರಾರ� ವರ�ಷ ಆಗಿದೆ ಇದಕ�ಕೆ. ಅದ� �ನೆಲ�ಲ ನೋಡಿರಬಹ�ದ�, �ನೆಲ�ಲ ತಿಳಿದಿರಬಹ�ದ� ಅದಕ�ಕೆ. ಆದ�ರೆ ಅದ� ಮಾತಾಡಲ�ಲ, ನಾನ� ಮಾತಾಡ�ತೀನಿ ಅಷ�ಟೇ’.  ಹೀಗೆ ಅವಳ ಉತ�ತರಗಳೆಲ�ಲ ಒಗಟ�ಗಳೇ. ಅದನ�ನ� ಬಿಡಿಸ�ವ ಯತ�ನ ನಾವ� ಮಾಡಬೇಕ�.

ಮೂಕಜ�ಜಿಯ ಈ ವಿಚಿತ�ರ ಸ�ವಭಾವ, ವರ�ಚಸ�ಸ� ಮತ�ತ� ವರ�ತನೆಗಳನ�ನ� ಸಿನೆಮಾದಲ�ಲಿ ಯಥಾವತ�ತ� ಕಾಣಿಸ�ವಲ�ಲಿ ಶೇಷಾದ�ರಿ ಗೆದ�ದಿದ�ದಾರೆ.  ದೃಶ�ಯದಿಂದ ದೃಶ�ಯಕ�ಕೆ ಬೇರೆಯದೇ ಕಥೆ ಹೇಳ�ವ ಈ ಸಿನೆಮಾದಲ�ಲಿ, ನಾಗಿಯ ಕತೆಗೆ ಮಾತ�ರ ಒಂದ� ತಾರ�ಕಿಕ ಅಂತ�ಯ ಇದೆ. ಇನ�ನ�ಳಿದ ಕಥೆಗಳ ಮ�ಂದ�ವರಿಕೆಯನ�ನ� ನಾವೇ ಕಲ�ಪಿಸಿಕೊಳ�ಳಬೇಕ�. ಕಾರಂತರ ಕಾದಂಬರಿಗೆ ಶೇಷಾದ�ರಿ ನ�ಯಾಯ ಒದಗಿಸಿದ�ದಾರೆ ಅಂತ ಒಂದೇ ಮಾತಲ�ಲಿ ಹೇಳಬಹ�ದಾದರೂ, ಕಾದಂಬರಿಯನ�ನ� ಓದದವರಿಗೂ ಸಿನೆಮಾ ಅರ�ಥವಾಗ�ತ�ತದೆ ಮತ�ತ� ಬಹ�ಶಃ ಇಷ�ಟವಾಗ�ತ�ತದೆ. 1968ರಲ�ಲಿ ಕಾರಂತರ� ಬರೆದ ಈ ಕಾದಂಬರಿ ಮತ�ತ� ಕಥಾವಸ�ತ� ಈಗಲೂ ಪ�ರಸ�ತ�ತವಾಗ�ತ�ತದೆ ಎಂಬ�ದ� ಸಿನೆಮಾ ನೋಡಿದಾಗ ತಿಳಿಯ�ತ�ತದೆ. ಭಾಸ�ಕರ� ಅವರ ಛಾಯಾಗ�ರಹಣದಲ�ಲಿ ಮೂಕಜ�ಜಿಯ ಕೆನ�ನೆಯ ಪ�ರತಿ ಸ�ಕ�ಕೂ, ಅಶ�ವತ�ಥಮರದ ಎಲೆಗಳ ಹಚ�ಛಹಸಿರೂ, ಭೂಮಿಯೊಡಲಿಂದ ಹೆಕ�ಕಿದ ವಸ�ತ�ಗಳ ಮಾಟವೂ, ಮೂಕಾಂಬಿಕೆಗೆತ�ತಿದ ಮಂಗಳಾರತಿಯ ಸ�ಳಿಯೂ ಅತ�ಯಂತ ಸ�ಪಷ�ಟವಾಗಿ -ಆಪ�ಯಾಯಮಾನವಾಗಿ ಕಾಣ�ತ�ತದೆ. ಪ�ರವೀಣ� ಗೋಡ�ಕಿಂಡಿಯವರ ಹಿನ�ನೆಲೆ ಸಂಗೀತ ಚಿತ�ರಕಥೆಗೆ ಪೂರಕವಾಗಿದೆ. ವಿಭಿನ�ನ ದೃಶ�ಯಗಳನ�ನ� ಸಂಕಲನ ಮಾಡಿ ಒಟ�ಟಂದ ಕೊಟ�ಟ ಬಿ.ಎಸ�. ಕೆಂಪರಾಜ�ರವರಿಗೂ ಚಪ�ಪಾಳೆ ತಟ�ಟಲೇಬೇಕ�.

ಇನ�ನ� ಚಿತ�ರದ ಜೀವಾಳವಾದ ಪಾತ�ರಗಳ�. ಬಿ. ಜಯಶ�ರೀ ಇಲ�ಲಿ ಮೂಕಜ�ಜಿಯ ಪಾತ�ರವನ�ನ� ಮಾಡಿಲ�ಲ; ಮೂಕಜ�ಜಿಯೇ ಆಗಿದ�ದಾರೆ. ಅವರ� ವಸ�ತ�ಗಳನ�ನ� ಸವರ�ತ�ತಾ ಕಾಲದೊಂದಿಗೆ ಹಿಂದೋಡ�ವ�ದ�, ಪ�ರಶ�ನೆಗಳಿಗೆ ಕೊಡ�ವ ಮೊನಚ� ಉತ�ತರಗಳ�, ಹಳೆಯ ನೆನಪಾದಾಗ ಅರಳ�ವ ಮ�ಖ, ಸದಾ �ನನೋ ಮಥಿಸ�ತ�ತಾ ಅಡಕೆಯ ಹೋಳ�ಗಳನ�ನ� ಕ�ಟ�ಟ�ವ�ದ�, ಆ ಅಶ�ವತ�ಥ ಮರಕ�ಕೆ ಎಷ�ಟೋ ವರ�ಷಗಳಿಂದ ಒರಗಿಕೊಂಡೇ ಇದ�ದಾರೇನೋ ಅನಿಸ�ವ ಭಂಗಿ –ಎಲ�ಲದರಲ�ಲೂ ಜಯಶ�ರೀ ಮೂಕಜ�ಜಿಯಾಗಿ ಮ�ಳ�’ಗೆದ�ದಿದ�ದಾರೆ’. ಮೊಮ�ಮಗ ಸ�ಬ�ರಾಯನ ಕ�ತೂಹಲಗಳ�-ಗೊಂದಲಗಳ� ನಮ�ಮವೂ ಆಗ�ತ�ತವೆ. ನಾಗಿಯ ಸಿಟ�ಟ� ಮತ�ತ� ತಳಮಳಗಳ� ನಮಗೂ ತಾಕ�ತ�ತವೆ.  ಸ�ಬ�ರಾಯನ ಹೆಂಡತಿ, ಅವನ ಪ�ಟ�ಟ ಮಕ�ಕಳ�, ಜನಾರ�ಧನ, ರಾಮದಾಸ –ಯಾರೂ ಅಭಿನಯ ಮತ�ತ� ಸಂಭಾಷಣೆಯಲ�ಲಿ ಎಡವಿಲ�ಲ.  ತಿಪ�ಪಜ�ಜಿಯ ಪಾತ�ರದಲ�ಲಿ ಸ�ವಲ�ಪ ಹೊತ�ತ� ಮಾತ�ರ ಬರ�ವ ಹಿರಿಯ ನಟಿ ರಾಮೇಶ�ವರಿ ಕಣ�ಣಂಚಲ�ಲಿ ನೀರ� ತರಿಸ�ತ�ತಾರೆ. ಸಿನೆಮಾದ ಮತ�ತೊಂದ� ಮ�ಖ�ಯ ಪಾತ�ರ ಪ�ರಹ�ಲಾದ ಆಚಾರ�ಯ ಅವರ ಶಾಡೋಪ�ಲೇ. ಹೇಳಲಾಗದ ಎಷ�ಟೊಂದ� ಕಥೆಗಳನ�ನ� ಅವರ ನೆರಳ�-ಬೆಳಕಿನ ಆಟ ಹೇಳ�ತ�ತದೆ.

‘ಮೂಕಜ�ಜಿಯ ಕಥೆಗಳ�’ ಒಂದೇ ಸಲಕ�ಕೆ ಅರ�ಥವಾಗಿಬಿಡ�ವ ಕೃತಿಯಲ�ಲ. ಅಲ�ಲಿ ಚರ�ಚಿಸಲ�ಪಟ�ಟಿರ�ವ ವಿಷಯ ಮತ�ತ� ವಸ�ತ� ನಾವ� ಬಹಳ ಕಾಲ ಯೋಚಿಸಬಹ�ದಾದಂತಹ�ದ�. ಮತ�ತೆ ಮತ�ತೆ ಯೋಚಿಸಿ ಅರಿತ�ಕೊಳ�ಳಬೇಕಾದ�ದ�. ಮತ�ತ� ಎಷ�ಟ� ತಿಳಿದ�ಕೊಂಡೆ ಎನಿಸಿದರೂ ಅಪೂರ�ಣ ಎನಿಸ�ವಂತಹ�ದ�. ಹೀಗಾಗಿ, ಇಂತಹ ಕ�ಲಿಷ�ಟ ಕೃತಿಯನ�ನಿಟ�ಟ�ಕೊಂಡ� ಸಿನೆಮಾ ಮಾಡಿದ ಶೇಷಾದ�ರಿ ನಿಜಕ�ಕೂ ಅಭಿನಂದನೀಯರ�.

150-IMG_4272 IMG_3873 IMG_3934 IMG_4003 Mookajji-Poster-small IMG_20190224_160715 IMG_20190224_165219

ಇದನà³�ನೂ ನೋಡಿ – ಕನà³�ನಡ ವಿಕಿಪೀಡಿಯದಲà³�ಲಿ ಮೂಕಜà³�ಜಿಯ ಕನಸà³�ಗಳà³� ಬಗà³�ಗೆ.


ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ
Source:  Vishva Kannada
Wednesday, 05 December 2018 10:41

– ಡಾ. ಯು. ಬಿ. ಪವನಜ

ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ ನೋಡೋಣ. ನೀವು ಹೇಳಬಹುದಾದ ಉದಾಹರಣೆಗಳು -www.google.com, www.facebook.com, www.twitter.com… ಕನ್ನಡದ ಜಾಲತಾಣಗಳ ಉದಾಹರಣೆ ನೀಡಿ ಎಂದರೆ – www.udayavani.com, www.vishvakannada.com, www.ejnana.com, kanaja.in ಇತ್ಯಾದಿ ನೀಡಬಹುದು. ಇಲ್ಲೊಂದು ವಿಷಯ ಗಮನಿಸಿದಿರಾ? ಕನ್ನಡ ಜಾಲತಾಣಗಳಿಗೂ ಅವುಗಳ ವಿಳಾಸ ಇಂಗ್ಲಿಶಿನಲ್ಲೇ ಇವೆ ಎಂದು. ಇದು ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡಿದ್ದೀರಾ? ಅಥವಾ ಅದು ಇರುವುದೇ ಹಾಗೆ, ಬೇರೆ ರೀತಿ ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೀರಾ? ಅದು ಈಗ ಇರುವುದು ಹಾಗೆ ಎಂದರೆ ಸರಿ. ಆದರೆ ಬೇರೆ ರೀತಿ ಸಾಧ್ಯವೇ ಇಲ್ಲ ಎಂದರೆ ಅದು ತಪ್ಪು. ಅಂದರೆ ಕನ್ನಡದ ಜಾಲತಾಣಗಳಿಗೆ ಕನ್ನಡದಲ್ಲೇ ವಿಳಾಸ ನಮೂದಿಸಬಹುದೇ ಎಂಬುದು ನಿಮ್ಮ ಪ್ರಶ್ನೆಯಾದರೆ ಅದರ ಉತ್ತರ ಅದು ಸದ್ಯದಲ್ಲೇ ಸಾಧ್ಯ ಎಂದು.

ಅದರ ಬಗ್ಗೆ ತಿಳಿಯುವ ಮೊದಲು ಸ್ವಲ್ಪ ಪೀಠಿಕೆ ಹಾಕೋಣ. ಅಂತರಜಾಲ ಅಂದರೆ ಇಂಟರ್‌ನೆಟ್‌ಎಂಬುದರ ಒಂದು ಪ್ರಮುಖ ಅಂಗ ವಿಶ್ವವ್ಯಾಪಿ ಜಾಲ ಅರ್ಥಾತ್ ವರ್ಲ್ಡ್ ವೈಡ್ ವೆಬ್. ಇದು ಕೋಟ್ಯನುಕೋಟಿ ಜಾಲತಾಣಗಳ ಮತ್ತು ಜಾಲಪುಟಗಳ (ವೆಬ್‌ಪೇಜ್) ಸಂಗ್ರಹ. ಪ್ರತಿ ಜಾಲತಾಣಕ್ಕೂ ಒಂದು ವಿಳಾಸ ಇರುತ್ತದೆ. ಅವುಗಳ ಉದಾಹರಣೆ ಮೊದಲ ಪ್ಯಾರಾದಲ್ಲಿದೆ. www.udayavani.com ಎಂಬ ಈ ಜಾಲತಾಣ ವಿಳಾಸಕ್ಕೆ ಡೊಮೈನ್ ನೇಮ್ (domain name) ಎನ್ನುತ್ತಾರೆ. ದಶಕಗಳ ಕಾಲ ಈ ಡೊಮೈನ್ ನೇಮ್ ಇಂಗ್ಲಿಶಿನಲ್ಲೇ ಇತ್ತು. ಅಷ್ಟು ಮಾತ್ರವಲ್ಲ, ಅದು ಅಮೆರಿಕ ಸರಕಾರದ ಅಧೀನ ಸಂಸ್ಥೆಯ ಉಸ್ತುವಾರಿಯಲ್ಲಿತ್ತು. ನಿಧಾನವಾಗಿ ಅದನ್ನು ಜಾಗತಿಕ ಸಂಸ್ಥೆಯೊಂದಕ್ಕೆ ಅದು ವರ್ಗಾಯಿಸಿತು. ಇದುವೇ ಐಕಾನ್. ಇದರ ಪೂರ್ತಿ ಹೆಸರು ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (Internet Corporation for Assigned Names and Numbers, ICANN) ಎಂದು. ಇದೊಂದು ಸರಕಾರೇತರ, ಲಾಭ ನಷ್ಟಗಳಿಲ್ಲದ ಸಂಸ್ಥೆ. ಇದನ್ನು ಸಮುದಾಯದ ಜನರೇ ನಡೆಸುವುದು. ಇದಕ್ಕೆ ಯಾರು ಬೇಕಾದರೂ ಕೊಡುಗೆ ನೀಡಬಹುದು.

ಪ್ರಪಂಚದಲ್ಲಿರುವ ಸುಮಾರು 6000ಕ್ಕೂ ಅಧಿಕ ಭಾಷೆಗಳಲ್ಲಿ ಇಂಗ್ಲಿಶ್ ಕೂಡ ಒಂದು. ಅಂದ ಮೇಲೆ ಅಂತರಜಾಲ ಮತ್ತು ಅದರಲ್ಲಿ ಅಡಕವಾಗಿರುವ ವಿಶ್ವವ್ಯಾಪಿ ಜಾಲದ ಎಲ್ಲ ವ್ಯವಹಾರಗಳು ಇಂಗ್ಲಿಶಿನಲ್ಲೇ ಯಾಕಿರಬೇಕು? ಇರಬೇಕಾಗಿಲ್ಲ ಎಂಬುದೇ ಉತ್ತರ. ಜಾಲತಾಣಗಳು ಇಂಗ್ಲಿಶ್ ಹೊರತಾಗಿ ಹಲವು ಭಾಷೆಗಳಲ್ಲಿ ಲಭ್ಯವಾಗತೊಡಗಿ ಹಲವು ದಶಕಗಳೇ ಕಳೆದಿವೆ. ಆದರೂ ಅವುಗಳ ವಿಳಾಸ ಮಾತ್ರ ಇನ್ನೂ ಬಹುತೇಕ ಇಂಗ್ಲಿಶಿನಲ್ಲೇ ಇವೆ. ಅವುಗಳೂ ಇಂಗ್ಲಿಶಿನ ಹೊರತಾಗಿ ಇತರೆ ಭಾಷೆಗಳಲ್ಲೂ ಲಭ್ಯವಾಗಬೇಕು ತಾನೆ? ಹೌದು. ಐಕಾನ್ ಈ ಬಗ್ಗೆ ಕೆಲಸ ಮಾಡುತ್ತಿದೆ. ಅದು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸ (ಡೊಮೈನ್ ನೇಮ್) ತಯಾರಿಸಲು ಮತ್ತು ಅಳವಡಿಸಲು ಬೇಕಾದ ಶಿಷ್ಟತೆಯನ್ನು ರೂಪಿಸುತ್ತಿದೆ. ಈಗಾಲೆ ಹಲವು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸಗಳನ್ನು ಬಳಸಬಹುದು. ಈ ರೀತಿಯ ಜಾಲತಾಣ ವಿಳಾಸಗಳಿಗೆ ಅಂತಾರಾಷ್ಟ್ರೀಯ ಜಾಲತಾಣ ವಿಳಾಸ (Internationalized Domain Name, IDN) ಎನ್ನುತ್ತಾರೆ. ಹಾಗಿದ್ದರೆ ಅದರಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳೂ ಇರಬೇಕು ತಾನೆ? ಉತ್ತರ ಹೌದು ಮತ್ತು ಇಲ್ಲ ಎಂದು. ಅದು ಹೇಗೆ ಎಂದು ಮುಂದೆ ನೋಡೋಣ.

ಈ ಜಾಲತಾಣ ವಿಳಾಸಗಳಲ್ಲಿ ಮೂರು ಭಾಗವಿರುವುದನ್ನು ಗಮನಿಸರಬಹುದು. www.udayavani.com ಎಂಬಲ್ಲಿ .com ಎಂಬುದು ಕಮರ್ಶಿಯಲ್ ಎಂಬುದರ ಹ್ರಸ್ವ ರೂಪ. ಈಗ www.kanaja.in ಎಂಬುದನ್ನು ಗಮನಿಸಿ. ಇಲ್ಲಿ .in ಎಂಬುದು India ಅರ್ಥಾತ್ ಭಾರತ ಎಂಬುದು ಹ್ರಸ್ವ ರೂಪ. ಡೊಮೈನ್ ನೇಮ್‌ಗಳ ಈ ಭಾಗಕ್ಕೆ ಟಾಪ್ ಲೆವೆಲ್ ಡೊಮೈನ್ (Top Level Domain, TLD) ಎನ್ನುತ್ತಾರೆ. ಈ ಭಾಗದ .in ಗೆ ಪರ್ಯಾಯವಾದ .ಭಾರತ ಎಂಬುದು ಸದ್ಯಕ್ಕೆ ಕೆಲವು ಭಾರತೀಯ ಲಿಪಿಗಳಲ್ಲಿ ಲಭ್ಯ. ಅವುಗಳು – ದೇವನಾಗರಿ, ಬಾಂಗ್ಲಾ, ಗುಜರಾತಿ, ತೆಲುಗು, ತಮಿಳು, ಗುರುಮುಖಿ (ಪಂಜಾಬಿ) ಮತ್ತು ಉರ್ದು. ಅಂದರೆ ಇಲ್ಲೂ ಕನ್ನಡ ಸದ್ಯಕ್ಕೆ ಇಲ್ಲ. 2019ರ ಮಾರ್ಚ್ ಹೊತ್ತಿಗೆ ಇಲ್ಲಿ ಕನ್ನಡ ಬರುತ್ತದೆ. ಅಂದರೆ ಆಗ ನಾವು ಕಣಜ.ಭಾರತ, ಉದಯವಾಣಿ.ಭಾರತ, ಪವನಜ.ಭಾರತ, ವಿಶ್ವಕನ್ನಡ.ಭಾರತ ಇತ್ಯಾದಿ ಜಾಲತಾಣ ವಿಳಾಸಗಳನ್ನು ಪಡೆಯಬಹುದು. ಈ ಡೊಮೈನ್‌ಗಳ ಬೆಲೆ ತುಂಬ ಇಲ್ಲ. ವರ್ಷಕ್ಕೆ ಸುಮಾರು ರೂ.500 ಆಗಬಹುದಷ್ಟೆ.

ಇಷ್ಟೇ ಆದರೆ ಕನ್ನಡದಲ್ಲಿ ಜಾಲತಾಣ ವಿಳಾಸ ಆದಂತೆಯೇ? ಇಲ್ಲ. udayavani.com ಇರುವಂತೆ ಉದಯವಾಣಿ.ಸಂಸ್ಥೆ ಅಥವಾ ಉದಯವಾಣಿ.ಪತ್ರಿಕೆ ಎಂದು ಪಡೆದಾಗ ಮಾತ್ರ ಅದು ಸಂಪೂರ್ಣ ಕನ್ನಡದಲ್ಲೇ ಜಾಲತಾಣ ವಿಳಾಸ ಎನ್ನಬಹುದು. ಅದು ಸಾಧ್ಯವೇ ಇಲ್ಲವೇ ಎಂದು ಕೇಳಿದರೆ ಸಾಧ್ಯವಿದೆ ಎಂಬುದೇ ಉತ್ತರ. ಯಾವಾಗ ಎಂದು ಕೇಳಿದರೆ ಬಹುಶಃ 2019ರ ಮಾರ್ಚ್ ನಂತರ ಎನ್ನಬಹುದು. ಅದು ಯಾಕೆ ನಿಧಾನ? ಯಾಕೆಂದರೆ ಈ ರೀತಿ ಜಾಲತಾಣ ವಿಳಾಸ ತಯಾರಿಸಬೇಕಾದಾಗ ಯಾವ ಅಕ್ಷರಗಳನ್ನು ಬಳಸಬಹುದು, ಯಾವ ಅಕ್ಷರಗಳನ್ನು ಬಳಸಬಾರದು, ಯಾವ ಅಕ್ಷರದ ನಂತರ ಯಾವ ಅಕ್ಷರ ಬಳಸಬಹುದು ಮತ್ತು ಬಳಸಬಾರದು, ಇತ್ಯಾದಿ ನಿಯಮಗಳನ್ನು ಮೊದಲು ರೂಪಿಸುವ ಕೆಲಸ ಆಗಬೇಕು. ಸಂತಸದ ಸಂಗತಿಯೆಂದರೆ ಈ ನಿಯಮ ತಯಾರಾಗಿದೆ. ಐಕಾನ್‌ನಲ್ಲಿ ನಿಯೊಬ್ರಾಹ್ಮಿ ಜನರೇಶನ್ ಪ್ಯಾನೆಲ್ ಎಂಬ ತಂಡ ಬ್ರಾಹ್ಮಿ ಲಿಪಿಯಿಂದ ಉಗಮಿಸಿದ ಎಲ್ಲ ಲಿಪಿಗಳಲ್ಲಿ ಡೊಮೈನ್ ನೇಮ್‌ತಯಾರಿಸಲು ಬೇಕಾದ ನಿಯಮಗಳನ್ನು ರೂಪಿಸುತ್ತಿದೆ. ಅದರಲ್ಲಿ ಕನ್ನಡವೂ ಸೇರಿದೆ. ಪ್ರಥಮ ಹಂತದ ಭಾಷೆ/ಲಿಪಿಗಳಲ್ಲಿ ಕನ್ನಡವೂ ಸೇರಿದೆ. ಈ ನಿಯಮ ಜಾರಿಗೆ ಬಂದಾಗ ಟಾಪ್ ಲೆವೆಲ್ ಡೊಮೈನ್ (ಟಿಎಲ್‌ಡಿ) ಕನ್ನಡ ಲಿಪಿಯಲ್ಲೇ ಪಡೆದುಕೊಳ್ಳಬಹುದು. ಆಗ .ಪತ್ರಿಕೆ, .ಸುದ್ದಿ, .ಸಂಸ್ಥೆ, .ದೂರದರ್ಶನ, .ಕನ್ನಡ, ಇತ್ಯಾದಿ ಟಿಎಲ್‌ಡಿಗಳನ್ನು ಪಡೆದುಕೊಳ್ಳಬಹುದು. ಅಂದರೆ ಉದಯವಾಣಿ.ಪತ್ರಿಕೆ, ಕಸಾಪ.ಸಂಸ್ಥೆ, ಚಂದನ.ದೂರದರ್ಶನ, ಇತ್ಯಾದಿ ಜಾಲತಾಣ ವಿಳಾಸಗಳನ್ನು (ಡೊಮೈನ್ ನೇಮ್) ಪಡೆಯಬಹುದು.

ಇಲ್ಲೊಂದು ಸಣ್ಣ ಸಮಸ್ಯೆಯಿದೆ. ಅದೆಂದರೆ ಈ ಟಾಪ್ ಲೆವೆಲ್ ಡೊಮೈನ್‌ನ ಬೆಲೆ. ಸದ್ಯಕ್ಕೆ ಅದು 1,85,000 ಅಮೆರಿಕನ್ ಡಾಲರ್ ಇದೆ. ಅಂದರೆ ಸುಮಾರು 1 ಕೋಟಿ 36 ಲಕ್ಷ ರೂ! ಯಾವ ಭಾರತೀಯ ಇಷ್ಟು ಹಣ ನೀಡಿ ಸ್ವಂತದ ಡೊಮೈನ್ ನೇಮ್ ತೆಗೆದುಕೊಳ್ಳುತ್ತಾನೆ? ಶ್ರೀಮಂತ ಸಂಸ್ಥೆಗಳೂ ಇಷ್ಟು ಹಣ ಖರ್ಚು ಮಾಡಲು ಹಿಂದೆ ಮುಂದೆ ಯೋಚನೆ ಮಾಡಬಹುದು. ಆದರೆ ಪರಿಸ್ಥಿತಿ ಅಷ್ಟು ಶೋಚನೀಯವಾಗಿಲ್ಲ. ಐಕಾನ್ ಒಂದು ಜನರೇ ನಡೆಸುವ ಸರಕಾರೇತರ ಸಂಸ್ಥೆ. ಇದರಲ್ಲಿ ಭಾರತೀಯರೂ ಸದಸ್ಯರಾಗಿದ್ದಾರೆ. ಅವರೆಲ್ಲ ಒತ್ತಡ ಹಾಕಿ ಈ ಹಣವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ. ಸಾಧ್ಯತೆಯೇನು ಬಂತು? ಹಾಗೆ ಮಾಡದಿದ್ದಲ್ಲಿ ಐಕಾನ್‌ನವರ ಶ್ರಮವೆಲ್ಲ ವ್ಯರ್ಥ. ಯಾರೂ ಭಾರತೀಯ ಭಾಷೆಗಳಲ್ಲಿ ಟಿಎಲ್‌ಡಿ ಕೊಂಡುಕೊಳ್ಳದಿದ್ದರೆ ಶ್ರಮಕ್ಕೇನು ಫಲ? ಹಾಗೆ ಆಗಲಾರದು ಎಂದುಕೊಂಡಿದ್ದೇನೆ.

(ಉದಯವಾಣಿಯಲ್ಲಿ ನವಂಬರ್ ೧, ೨೦೧೮ರಂದು ಪ್ರಕಟವಾದ ಲೇಖನ)


ಗ್ಯಾಜೆಟ್ ಲೋಕ ೩೫೬ (ನವಂಬರ್ ೨೪, ೨೦೧೮) ರಿಯಲ್‌ಮಿ ಸಿ1
Source:  Vishva Kannada
Saturday, 24 November 2018 16:23

ರಿಯಲ್‌ಮಿ ಸಿ1

ಕಡಿಮೆ ಬೆಲೆಗೆ ಉತ್ತಮ ಫೋನ್

ಒಪ್ಪೊ ಕಂಪೆನಿಯ ಸಬ್-ಬ್ರ್ಯಾಂಡ್ ಆಗಿ ಬಂದ ರಿಯಲ್‌ಮಿ ಈಗ ಸ್ವಂತ ಕಂಪೆನಿಯಾಗಿದೆ. ರಿಯಲ್‌ಮಿಯವರು ಅತಿ ಕಡಿಮೆ ಹಣಕ್ಕೆ ಉತ್ತಮ ಗುಣವೈಶಿಷ್ಟ್ಯಗಳ ಫೋನ್ ತಯಾರಿಸಿ ಶಿಯೋಮಿಯವರ ಜೊತೆ ನೇರ ಸ್ಪರ್ಧೆಗೆ ಇಳಿದಿದ್ದಾರೆ. ರಿಯಲ್‌ಮಿ1 ಮತ್ತು ರಿಯಲ್‌ಮಿ 2 ಪ್ರೊ ಎಂಬ ಎರಡು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ಈ ಹಿಂದೆ ನೀಡಲಾಗಿತ್ತು. ನೀಡುವ ಹಣಕ್ಕೆ ನಿಜಕ್ಕೂ ಉತ್ತಮ ಉತ್ಪನ್ನಗಳು ಎಂದು ಅವುಗಳ ಬಗ್ಗೆ ಬರೆಯಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವುದು ರಿಯಲ್‌ಮಿ ಸಿ1 (RealMe 1) ಎಂಬ ಕಡಿಮೆ ಬೆಲೆಯ ಫೋನನ್ನು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್ 8 x 1.8 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 450)
ಗ್ರಾಫಿಕ್ಸ್ ಪ್ರೋಸೆಸರ್ Adreno 506
ಮೆಮೊರಿ 2 + 16 ಗಿಗಾಬೈಟ್
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಪ್ರತ್ಯೇಕ ಜಾಗ, ಹೈಬ್ರಿಡ್ ಅಲ್ಲ)
ಪರದೆ 6.2 ಇಂಚು ಗಾತ್ರದ 1520 x 720 ಪಿಕ್ಸೆಲ್ ಐಪಿಎಸ್
ಕ್ಯಾಮರ 13 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

5 ಮೆಗಾಪಿಕ್ಸೆಲ್ ಸ್ವಂತೀ

ಸಿಮ್ 2 ನ್ಯಾನೊ
ಬ್ಯಾಟರಿ 4230 mAh
ಗಾತ್ರ 156.2 x 75.6 x 8.2 ಮಿ.ಮೀ.
ತೂಕ 168 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇಲ್ಲ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇದೆ
ಎನ್‌ಎಫ್‌ಸಿ ಇಲ್ಲ
4 ಜಿ ವಿಓಎಲ್‌ಟಿಇ (4G VoLTE) ಇದೆ
ಇಯರ್‌ಫೋನ್ ‌ಇಲ್ಲ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 8.1 + ಕಲರ್ ಓಎಸ್ 5.1
ಬೆಲೆ  ₹8,990 (₹7,999 ಫ್ಲಿಪ್‌ಕಾರ್ಟ್)

ರಚನೆ ಮತ್ತು ವಿನ್ಯಾಸ

ಈ ಫೋನಿನ ರಚನೆ ಮತ್ತು ವಿನ್ಯಾಸವೂ ಇತರೆ ರಿಯಲ್‌ಮಿ ಫೋನ್‌ಗಳಂತೆ ಅತ್ಯುತ್ತಮವಾಗಿದೆ. ಕಡಿಮೆ ಬೆಲೆಗೆ ಇಷ್ಟು ಉತ್ತಮ ರಚನೆ ಮತ್ತು ವಿನ್ಯಾಸದ ಫೋನ್ ಸದ್ಯಕ್ಕೆ ಬೇರೆ ಯಾವುದೂ ಮಾರುಕಟ್ಟೆಯಲ್ಲಿ ಇಲ್ಲ ಎಂದೇ ಹೇಳಬಹುದು. ರಿಯಲ್‌ಮಿ ಪ್ರತ್ಯೇಕ ಕಂಪೆನಿಯಾದರೂ ಇನ್ನೂ ಒಪ್ಪೋದ ಫ್ಯಾಕ್ಟರಿಯಲ್ಲೇ ಅವರ ಫೋನ್‌ಗಳ ತಯಾರಾಗುತ್ತಿವೆ. ಈ ಫೋನಿನ ಜೊತೆ ಅವರು ನೀಡುತ್ತಿರುವ ಚಾರ್ಜರ್‌ನಲ್ಲಿ ಒಪ್ಪೊ ಎಂದೇ ಬರೆದಿದೆ. ಮೊದಲ ನೋಟಕ್ಕೇ ನೀವು ಇದಕ್ಕೆ ಮಾರುಹೋಗುತ್ತೀರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಬಲ ಭಾಗದಲ್ಲಿ ಆನ್/ಆಫ್ ಸ್ವಿಚ್ ಇದೆ. ಎಡ ಭಾಗದಲ್ಲಿ ವಾಲ್ಯೂಮ್ ಬಟನ್ ಮತ್ತು ಸಿಮ್ ಹಾಗೂ ಮೆಮೊರಿ ಕಾರ್ಡ್ ಹಾಕುವ ಟ್ರೇ ಇವೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಮತ್ತು 3.5 ಮಿ. ಮೀ. ಇಯರ್‌ಫೋನ್ ಕಿಂಡಿಗಳಿವೆ.  ಹಿಂದುಗಡೆ ಬಲಮೂಲೆಯಲ್ಲಿ ಕ್ಯಾಮರಗಳು ಮತ್ತು ಪಕ್ಕದಲ್ಲಿ ಫ್ಲಾಶ್ ಇವೆ. ಇದರ ಒಂದು ಪ್ರಮುಖ ಕೊರತೆಯೆಂದರೆ ಇದರಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ ಎಂಬುದು. ಹಿಂಭಾಗದ ಕವಚದ ವಿನ್ಯಾಸ ಸುಂದರವಾಗಿದೆ. ಕವಚ ತುಂಬ ನಯವಾಗಿದೆ. ಕೈಯಿಂದ ಜಾರಿ ಬೀಳಬಾರದು ಎಂದಿದ್ದರೆ ಅಧಿಕ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ. ಮುಂಭಾಗದ ಪರದೆಯ ಮೇಲೂ ಅವರೇ ಒಂದು ಸ್ಕ್ರೀನ್ ಪ್ರೊಟೆಕ್ಟರ್ ಅಂಟಿಸಿದ್ದಾರೆ. ಎರಡು ಬಣ್ಣಗಳಲ್ಲಿ ಲಭ್ಯ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸದಲ್ಲಿ ಇದು ಅತ್ಯುತ್ತಮ ಎಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು.

RealMeC1 Phone (1) RealMeC1 Phone (2) RealMeC1 Phone (3)
RealMeC1 Phone (4) RealMeC1 Phone (5) RealMeC1 Phone (6)

ಕೆಲಸದ ವೇಗ

ರಿಯಲ್‌ಮಿ ಸಿ1 ಫೋನಿನಲ್ಲಿ ಬಳಸಿರುವುದು ಸ್ನಾಪ್‌ಡ್ರಾಗನ್ 450 ಪ್ರೋಸೆಸರ್. ಅಂದರೆ ಇದು ಕಡಿಮೆ ಶಕ್ತಿಯ ಪ್ರೋಸೆಸರ್. ಕಡಿಮೆ ಬೆಲೆಯ ಫೋನ್ ಅಂದ ಮೇಲೆ ಕಡಿಮೆ ಬೆಲೆಯ ಪ್ರೋಸೆಸರ್ ಇರುವುದರಲ್ಲಿ ಆಶ್ಚರ್ಯವಿಲ್ಲ. ಅದು ಸಹಜ ತಾನೆ? ಹಾಗೆಂದು ಹೇಳಿ ಇದರ ಕೆಲಸದ ವೇಗ ತುಂಬ ಕಡಿಮೆಯೇನಿಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 73,888 ಇದೆ. ಅಂದರೆ ಇದು ಮಧ್ಯಮ ಕಡಿಮೆ ವೇಗದ್ದು ಎನ್ನಬಹುದು. ಬಳಸುವಾಗ ಇದು ವೇದ್ಯವಾಗುತ್ತದೆ. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಆಡಬಹುದು. ಆದರೆ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಇದರಲ್ಲಿ ತೃಪ್ತಿದಾಯಕವಾಗಿ ಆಡವುದು ಸ್ವಲ್ಪ ಕಷ್ಟ. ಅತಿ ವೇಗದ ಫೋನ್ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ. ಆದರೂ ಇದರಲ್ಲಿರುವುದು ಕೇವಲ 2 ಗಿಗಾಬೈಟ್ ಮೆಮೊರಿ ಎಂಬುದನ್ನು ಗಮನಿಸಿದರೆ ಇದು ನಿಜಕ್ಕೂ ನೀಡುವ ಹಣಕ್ಕೆ ಉತ್ತಮ ಫೋನ್ ಎಂದೇ ಹೇಳಬಹುದು.

 

ಈ ಫೋನಿನಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ. ಆದರೆ ಮುಖವನ್ನು ಗುರುತಿಸುವ ಹಾಗೂ ಅದನ್ನೇ ಪ್ರವೇಶಕ್ಕೆ ಅಂಗೀಕಾರವಾಗಿ (face recognition & unlock) ಮಾಡಿಟ್ಟುಕೊಳ್ಳುವ ಸವಲತ್ತಿದೆ. ಈ ಸವಲತ್ತು ಮಾತ್ರ ಅಷ್ಟೇನೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿಲ್ಲ.

 

ಪರದೆ ಹಾಗೂ ಆಡಿಯೋ

ಈ ಫೋನಿನ ಪರದೆಯಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ರೆಸೊಲೂಶನ್ ತುಂಬ ಏನಿಲ್ಲ. ಹೈಡೆಫಿನಿಶನ್ ವಿಡಿಯೋ ಪ್ಲೇ ಆಗುತ್ತದೆ. ವಿಡಿಯೋ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಆದರೆ 4k ವಿಡಿಯೋ ಪ್ಲೇ ಆಗುವುದಿಲ್ಲ. ಈ ಫೋನಿನ ಆಡಿಯೋ ಇಂಜಿನ್ ಚೆನ್ನಾಗಿದೆ. ಫೋನಿನ ಬೆಲೆಗೆ ಹೋಲಿಸಿದರೆ ಆಡಿಯೋ ಚೆನ್ನಾಗಿದೆ ಎಂದೇ ಹೇಳಬಹುದು. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ ಚೆನ್ನಾಗಿದೆ. ಉತ್ತಮ ರೇಡಿಯೋ ಬೇಕು ಎನ್ನುವವರು ಈ ಫೋನನ್ನು ಖಂಡಿತ ಕೊಳ್ಳಬಹುದು.

 

ಕ್ಯಾಮರ

ಈ ಫೋನಿನಲ್ಲಿ ಹೆಸರಿಗೆ ಎರಡು ಪ್ರಾಥಮಿಕ ಕ್ಯಾಮರಗಳಿವೆ. ಅವುಗಳ ರೆಸೊಲೂಶನ್ 13 ಮತ್ತು 2 ಮೆಗಾಪಿಕ್ಸೆಲ್. ಕ್ಯಾಮರದ ಫಲಿತಾಂಶ ಅಂತಹ ಹೇಳಿಕೊಳ್ಳವ ಹಾಗೇನೂ ಇಲ್ಲ. ಸಂಪೂರ್ಣ ಕಳಪೆಯೂ ಅಲ್ಲ. ಉತ್ತಮ ಬೆಳಕಿನ ಸಂದರ್ಭಗಳಲ್ಲಿ ಉತ್ತಮ ಫೋಟೋ ಮೂಡಿಬರುತ್ತದೆ. ಹತ್ತಿರದ ವಸ್ತುಗಳ ಫೋಟೋ ಚೆನ್ನಾಗಿ ಬರುತ್ತದೆ. ಪ್ರಕೃತಿ ದೃಶ್ಯಗಳ ಮತ್ತು ಎಚ್‌ಡಿಆರ್ ಫೋಟೋಗಳು ಅಷ್ಟಕ್ಕಷ್ಟೆ. ಅತಿ ಕಡಿಮೆ ಬೆಳಕಿನಲ್ಲಂತೂ ಫೋಟೋ ನಿರಾಶಾದಾಯಕವಾಗಿದೆ. ವಿಡಿಯೋ ಚಿತ್ರೀಕರಣವೂ ಅಷ್ಟಕ್ಕಷ್ಟೆ. ನೀವು ಉತ್ತಮ ಛಾಯಾಗ್ರಾಹಕರಾಗಿದ್ದಲ್ಲಿ ಹಾಗೂ ಉತ್ತಮ ಕ್ಯಾಮರ ಫೋನ್ ಬೇಕು ಎಂಬುದು ನಿಮ್ಮ ಇರಾದೆಯಾಗಿದ್ದಲ್ಲಿ ಈ ಫೋನ್ ನಿಮಗಲ್ಲ. ಹಾಗೆಂದು ಹೇಳಿ ತುಂಬ ಕಳಪೆ ಕ್ಯಾಮರದ ಫೋನೇನೂ ಇದಲ್ಲ. ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮರಕ್ಕೆ ಅಲ್ಲಿಂದಲ್ಲಿಗೆ ಪಾಸ್ ಮಾರ್ಕು ನೀಡಬಹುದು.

ಬ್ಯಾಟರಿ

ತುಂಬ ಶಕ್ತಿಯ ಬ್ಯಾಟರಿ ಇರುವುದು ಈ ಫೋನಿನ ಒಂದು ಪ್ರಮುಖ ಹೆಗ್ಗಳಿಕೆ ಎನ್ನಬಹುದು. 4230 mAh ಎಂಬುದು ಒಂದೂವರೆ – ಎರಡು ದಿನಗಳಿಗೆ ಧಾರಾಳ ಸಾಕು. ಆದರೆ ರಿಯಲ್‌ಮಿಯವರು ವೇಗವಾಗಿ ಚಾರ್ಜ್ ಮಾಡುವ ಸವಲತ್ತನ್ನು ನೀಡಿಲ್ಲ.

 

ತೀರ್ಮಾನ

ಯಾವುದೇ ಉತ್ಪನ್ನ ಚೆನ್ನಾಗಿದೆಯೋ ಇಲ್ಲವೋ ಎನ್ನುವುದಕ್ಕಿಂತಲೂ ನಾವು ನೀಡುವ ಹಣಕ್ಕೆ ಅದು ತಕ್ಕುದಾಗಿದೆಯೇ ಎಂಬುದೇ ಪ್ರಾಮುಖ್ಯವಾಗಿದೆ. ಈ ಫೋನ್ ನೀಡುವ ಹಣಕ್ಕೆ ತಕ್ಕುದಾಗಿದೆ ಎಂದು ಹೇಳಬಹುದು.

ಡಾ| ಯು.ಬಿ. ಪವನಜ

gadgetloka @ gmail . com


ಗ್ಯಾಜೆಟ್ ಲೋಕ ೩೫೫ (ನವಂಬರ್ ೨೦, ೨೦೧೮) ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1
Source:  Vishva Kannada
Tuesday, 20 November 2018 16:50

ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1

 

ದೊಡ್ಡ ಬ್ಯಾಟರಿ, ಚಿಕ್ಕ ಗಾತ್ರ ಹಾಗೂ ಕಡಿಮೆ ತೂಕ

 

ತೈವಾನ್ ದೇಶದ ಏಸುಸ್ ಕಂಪೆನಿ ಭಾರತದ ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಗಮನಾರ್ಹ ಹೆಸರು. ಈ ಕಂಪೆನಿಯ ಹಲವು ಉತ್ಪನ್ನಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಏಸುಸ್ ಇತ್ತೀಚೆಗೆ ಕೆಲವು ಆಯ್ದ ಕ್ಷೇತ್ರಗಳಲ್ಲಿ ಈಗಾಗಲೇ ಸ್ಥಾಪಿತರಾದವರನ್ನು ಗುರಿಯಾಗಿಟ್ಟುಕೊಂಡು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಪ್ರಾರಂಭಿಸಿದೆ. ಮೇಲ್ದರ್ಜೆಯ ಫೋನ್‌ಗಳಲ್ಲಿ ವನ್‌ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಙೆನ್‌ಫೋನ್ ೫ ಝಡ್ ಅನ್ನು ತಯಾರಿಸಿದೆ. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಶಿಯೋಮಿಗೆ ಪ್ರತಿಸ್ಪರ್ಧಿಯಾಗಲು ಹೊರಟಿದೆ. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಹುಮಂದಿ ನೋಡುವುದು ಬ್ಯಾಟರಿ ಎಷ್ಟು ಸಮಯ ಬರುತ್ತದೆ ಎಂದು. ಅಂತಹವರಿಗಾಗಿಯೇ ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 ಎಂಬ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈಗ ಸ್ವಲ್ಪ ಕಡಿಮೆ ಬೆಲೆಯ ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1 (Asus Zenfone Max M1) ಫೋನನ್ನು ತಂದಿದೆ. ಇದರ ವಿಮರ್ಶೆಯನ್ನು ನೋಡೋಣ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್ 8 x 1.4 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 430)
ಗ್ರಾಫಿಕ್ಸ್ ಪ್ರೋಸೆಸರ್ Adreno 505
ಮೆಮೊರಿ 3 + 32 ಗಿಗಾಬೈಟ್
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಪ್ರತ್ಯೇಕ ಜಾಗ, ಹೈಬ್ರಿಡ್ ಅಲ್ಲ)
ಪರದೆ 5.5 ಇಂಚು ಗಾತ್ರದ 1440 x 720 ಪಿಕ್ಸೆಲ್ ಐಪಿಎಸ್
ಕ್ಯಾಮರ 13 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

8 ಮೆಗಾಪಿಕ್ಸೆಲ್ ಸ್ವಂತೀ

ಸಿಮ್ 2 ನ್ಯಾನೊ
ಬ್ಯಾಟರಿ 4000 mAh
ಗಾತ್ರ 147.3 x 70.9 x 8.7 ಮಿ.ಮೀ.
ತೂಕ 150 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇದೆ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇದೆ
ಎನ್‌ಎಫ್‌ಸಿ ಇಲ್ಲ
4 ಜಿ ವಿಓಎಲ್‌ಟಿಇ (4G VoLTE) ಇದೆ
ಇಯರ್‌ಫೋನ್ ‌ಇಲ್ಲ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 8.0
ಬೆಲೆ  ₹7,499

ರಚನೆ ಮತ್ತು ವಿನ್ಯಾಸ

ಏಸುಸ್‌ನವರ ಫೋನ್‌ಗಳು ತುಂಬ ದೊಡ್ಡದಾಗಿರುತ್ತಿದ್ದವು. ಅಂದರೆ ಅವುಗಳ ಪರದೆ ಮತ್ತು ದೇಹದ ಗಾತ್ರಗಳ ಅನುಪಾತ 70-75% ಗಳಷ್ಟು ಮಾತ್ರ ಇರುತ್ತಿದ್ದವು. ಅದು ಸುಮಾರು ಎರಡು ವರ್ಷಗಳ ಹಿಂದಿನ ಮಾತು. ಆದರೆ ಏಸುಸ್‌ನವರು ತುಂಬ ಕಲಿತಿದ್ದಾರೆ. ಇತ್ತೀಚೆಗೆ ಬರುತ್ತಿರುವ ಏಸುಸ್ ಫೊನ್‌ಗಳು ಉತ್ತಮವಾದ ಪರದೆ-ದೇಹ ಅನುಪಾತವನ್ನು ಒಳಗೊಂಡಿವೆ. ಈ ಫೋನ್‌ನ ದೇಹ ಪ್ಲಾಸ್ಟಿಕ್ಕಿನದು. ಹಿಂಭಾಗ ಬಹಮಟ್ಟಿಗೆ ಚಿನ್ನದ ಬಣ್ಣದ್ದು. ಇದರಲ್ಲಿರುವುದು ತುಂಬ ಶಕ್ತಿಯ ಬ್ಯಾಟರಿ. ಆದರೂ ಈ ಫೋನಿನ ತೂಕ ಕೇವಲ 150 ಗ್ರಾಂ. ತುಂಬ ದೊಡ್ಡ ಬ್ಯಾಟರಿ ಇದ್ದೂ ಕಡಿಮೆ ತೂಕದ ಫೋನ್ ಎಂಬುದು ಈ ಫೋನಿನ ಪ್ರಧಾನ ಹೆಗ್ಗಳಿಕೆ ಎನ್ನಬಹುದು.

ಇದು ಅಂಚುರಹಿತ (bezelless) ಫೋನ್. ಆದರೆ ಪರದೆಯ ಕಚ್ಚು (notch) ಇಲ್ಲ. ಬೆರಳಚ್ಚು ಸ್ಕ್ಯಾನರ್ ಹಿಂದುಗಡೆ ಇದೆ. ಪ್ರಾಥಮಿಕ ಕ್ಯಾಮರ ಹಿಂದುಗಡೆ ಬಲಗಡೆ ಮೂಲೆಯಲ್ಲಿ ಇದೆ. ಅದರ ಕೆಳಗೆ ಫ್ಲಾಶ್ ಇದೆ. ಹಿಂಭಾಗದಲ್ಲಿ ಮಧ್ಯಭಾಗದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಫೋನ್ ಹಿಡಿದಾಗ ತೋರುಬೆರಳು ಸಹಜವಾಗಿ ಈ ಸ್ಕ್ಯಾನರ್ ಮೇಲೆ ಹೋಗುತ್ತದೆ. ಹಿಂಬದಿಯ ಕವಚ ಸ್ವಲ್ಪ ದೊರಗು ಎನ್ನಬಹುದು. ನಯವಾಗಿಯಂತೂ ಇಲ್ಲ. ಯುಎಸ್‌ಬಿ ಕಿಂಡಿ ಕೆಳಗಡೆ ಇದೆ. ಇದು ಯುಎಸ್‌ಬಿ-ಸಿ ಅಲ್ಲ. 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮೇಲುಗಡೆ ಇದೆ. ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಗಡೆ, ಸಿಮ್ ಮತ್ತು ಮೆಮೊರಿ ಹಾಕುವ ಟ್ರೇ ಎಡಗಡೆ ಇವೆ. ಕಪ್ಪು ಮತ್ತು ಚಿನ್ನ ಎರಡು ಬಣ್ಣಗಳಲ್ಲಿ ಲಭ್ಯ.

ಕೆಲಸದ ವೇಗ

ಏಸುಸ್‌ನವರ ಫೋನ್‌ಗಳ ಬಗ್ಗೆ ಇದ್ದ ಇನ್ನೊಂದು ಆರೋಪವೆಂದರೆ ಹಲವು ಅನವಶ್ಯಕ ಕಿರುತಂತ್ರಾಂಶಗಳನ್ನು (ಆಪ್‌) ಮೊದಲೇ ಸೇರಿಸಿ ನೀಡುತ್ತಿದ್ದುದು. ಆದರೆ ಇತ್ತೀಚೆಗಿನ ಫೋನ್‌ಗಳಲ್ಲಿ ಈ ತೊಂದರೆ ಇಲ್ಲ. ಈ ಫೋನ್‌ನಲ್ಲೂ ಅಷ್ಟೆ. ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 ಫೋನಿನಲ್ಲಿದ್ದುದು ಶುದ್ಧ ಆಂಡ್ರೋಯಿಡ್. ಆದರೆ ಇದರಲ್ಲಿರುವುದು ಶುದ್ಧ ಆಂಡ್ರೋಯಿಡ್ ಅಲ್ಲ. ಇದು ಇನ್ನೂ ಆಂಡ್ರೋಯಿಡ್ 8.0ಯಲ್ಲೇ ಇದೆ. ಆಂಡ್ರೋಯಿಡ್ 9.0 ಕ್ಕೆ ಯಾವಾಗ ನವೀಕರಣ ನೀಡುತ್ತಾರೆ ಎಂಬುದು ಗೊತ್ತಿಲ್ಲ.

ಇದರಲ್ಲಿರುವುದು ಕಡಿಮೆ ದರ್ಜೆಯ ಪ್ರೋಸೆಸರ್. ಇದರ ಅಂಟುಟು ಬೆಂಚ್‌ಮಾರ್ಕ್ 54010 ಇದೆ. ಅಂದರೆ ಇದು ಕಡಿಮೆ ವೇಗದ ಫೋನ್ ಎನ್ನಬಹುದು. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಒಂದು ಮಟ್ಟಿಗೆ ತೃಪ್ತಿದಾಯಕವಗಿ ಆಡಬಹುದು. ಆದರೆ ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಆಡಲು ಈ ಫೋನ್ ಹೇಳಿದ್ದಲ್ಲ. ಫೋನ್ ಪ್ರಾರಂಭಿಸಿದಾಗ ಸ್ವಲ್ಪ ನಿಧಾನವಾಗಿ ತೆರೆದುಕೊಳ್ಳುತ್ತದೆ. ಕೆಲವು ಕಿರುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವಾಗ ಕೆಲವು ಸಲ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ.

ಪರದೆ ಹಾಗೂ ಆಡಿಯೋ

ವಿಡಿಯೋ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಇದು ಹೈಡೆಫಿನಿಶನ್ ವಿಡಿಯೋ ಪ್ಲೇ ಮಾಡುತ್ತದೆ. ಆದರೆ 4k ವಿಡಿಯೋ ಪ್ಲೇ ಸರಿಯಾಗಿ ಆಗುವುದಿಲ್ಲ. ತಡೆತಡೆದು ಪ್ಲೇ ಮಾಡುತ್ತದೆ. ಈ ಫೋನಿನ ಆಡಿಯೋ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಅತಿ ಕಡಿಮೆ ಕಂಪನಾಂಕದ (bass) ಮತ್ತು ಅತಿ ಹೆಚ್ಚು ಕಂಪನಾಂಕದ (treble) ಧ್ವನಿಯ ಪುನರುತ್ಪತ್ತಿ ಸ್ವಲ್ಪ ಕಡಿಮೆ ಗುಣಮಟ್ಟದಲ್ಲಿದೆ. ಮಾನವ ಧ್ವನಿಯ ಪುನರುತ್ಪತ್ತಿ ಚೆನ್ನಾಗಿದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ ಚೆನ್ನಾಗಿದೆ. ಮನೆಯೊಳಗೆ ಎಲ್ಲ ಕೇಂದ್ರಗಳು ಸರಿಯಾಗಿ ಕೇಳಿಬರುತ್ತವೆ. ಸ್ಪೀಕರಿನ ಧ್ವನಿಯೂ ಪರವಾಗಿಲ್ಲ.

ಕ್ಯಾಮರ

ಇದರಲ್ಲಿರುವುದು 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮರ. ಕ್ಯಾಮರದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಜೊತೆಗೆ ಕ್ಯಾಮರದ ಕಿರುತಂತ್ರಾಂಶ (ಆಪ್) ಕೂಡ ಅಷ್ಟಕ್ಕಷ್ಟೆ. ಮ್ಯಾನ್ಯುವಲ್ ಆಯ್ಕೆ ಇಲ್ಲ. ಓಪನ್ ಕ್ಯಾಮರ ಕಿರುತಂತ್ರಾಂಶ ಹಾಕಿಕೊಂಡರೂ ಕ್ಯಾಮರದ ಯಂತ್ರಾಂಶದ ಬೆಂಬಲವಿಲ್ಲದ ಕಾರಣ ಮ್ಯಾನ್ಯುವಲ್ ಆಯ್ಕೆ ಬರುವುದಿಲ್ಲ. ಚೆನ್ನಾಗಿ ಬೆಳಕಿದ್ದಾಗ, ಹತ್ತಿರದ ವಸ್ತುಗಳನ್ನು ಉದಾಹರಣೆಗೆ ಹೂವುಗಳ ಫೋಟೋ, ಚೆನ್ನಾಗಿ ತೆಗೆಯುತ್ತದೆ. ಪ್ರಕೃತಿ ದೃಶ್ಯಗಳ ಫೋಟೋ ಚೆನ್ನಾಗಿ ಮೂಡಿಬರುತ್ತದೆ. ಅತಿ ಕಡಿಮೆ ಬೆಳಕಿನಲ್ಲಿ ಫೋಟೋ ಚೆನ್ನಾಗಿ ಮೂಡಿಬರುವುದಿಲ್ಲ. ವಿಡಿಯೋ ಚಿತ್ರೀಕರಣ ಅಷ್ಟಕ್ಕಷ್ಟೆ. ಯಾಕೆಂದರೆ ಇದರಲ್ಲಿ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಈ ಫೋನಿನ ಬೆಲೆಗೆ ಹೋಲಿಸಿದರೆ ಕ್ಯಾಮರ ತೃಪ್ತಿದಾಯಕ ಎಂದೇ ಹೇಳಬಹುದು.

P_20181026_174204

ಬ್ಯಾಟರಿ

ಈ ಫೋನಿನ ಪ್ರಮುಖ ಹೆಚ್ಚುಗಾರಿಕೆಯಿರುವುದು ಇದರ ಬ್ಯಾಟರಿಯಲ್ಲಿ. 4000 mAh ಎಂದರೆ ಶಕ್ತಿಶಾಲಿ ಎನ್ನಬಹುದು. ಅವರದೇ ಚಾರ್ಜರ್ ಮತ್ತು ಕೇಬಲ್ ಬಳಸಿದರೆ ಸುಮಾರು ಎರಡೂವರೆ ಗಂಟಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಈ ಫೋನಿನಿಂದ ಇನ್ನೊಂದು ಸಾಧನಕ್ಕೆ ಯುಎಸ್‌ಬಿ ಓಟಿಜಿ ಕೇಬಲ್ ಬಳಸಿ ಚಾರ್ಜ್ ಮಾಡುವ ಸವಲತ್ತನ್ನೂ ನೀಡಿದ್ದಾರೆ.

ಅಂತಿಮ ತೀರ್ಮಾನ

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿದಾಯಕ ಫೋನ್ ಎನ್ನಬಹುದು.

-ಡಾ| ಯು.ಬಿ. ಪವನಜ
gadgetloka @ gmail . com


ಗ್ಯಾಜೆಟ್ ಲೋಕ ೩೫೪ (ನವಂಬರ್ ೧೪, ೨೦೧೮) – ರಿಯಲ್‌ಮಿ 2 ಪ್ರೊ
Source:  Vishva Kannada
Wednesday, 14 November 2018 16:39

ರಿಯಲ್‌ಮಿ 2 ಪ್ರೊ

ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್

 

ರಿಯಲ್‌ಮಿ ಎಂಬುದು ಒಪ್ಪೊ ಕಂಪೆನಿಯದೇ ಸಬ್‌ಬ್ರ್ಯಾಂಡ್. ಸ್ವಲ್ಪ ಜಾಸ್ತಿ ಬೆಲೆಯ ಫೋನ್‌ಗಳನ್ನು ಒಪ್ಪೊ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ₹ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ರಿಯಲ್‌ಮಿ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಹಲವು ಕಂಪೆನಿಗಳು ಇದೇ ರೀತಿ ಎರಡು ಹೆಸರಿನಲ್ಲಿ ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಉದಾಹರಣೆಗೆ ಹುವಾವೇ ಮತ್ತು ಹೋನರ್. ಒಪ್ಪೊ ಮತ್ತು ರಿಯಲ್‌ಮಿ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿವೆ. ರಿಯಲ್‌ಮಿ 1 ಫೊನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ಮಾಡಲಾಗಿತ್ತು. ಈ ಸಲ ರಿಯಲ್‌ಮಿ 2 ಪ್ರೊ (Realme 2 Pro) ಫೋನಿನ ವಿಮರ್ಶೆ.

 

ಗುಣವೈಶಿಷ್ಟ್ಯಗಳು

 

ಪ್ರೋಸೆಸರ್ 8 x 1.95 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 660)
ಗ್ರಾಫಿಕ್ಸ್ ಪ್ರೋಸೆಸರ್ Adreno 512
ಮೆಮೊರಿ 8 + 128 ಗಿಗಾಬೈಟ್
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಪ್ರತ್ಯೇಕ, ಹೈಬ್ರಿಡ್ ಅಲ್ಲ)
ಪರದೆ 6.3 ಇಂಚು ಗಾತ್ರದ 1080 x 2340 ಪಿಕ್ಸೆಲ್, 408 PPI
ಕ್ಯಾಮರ 16 + 2  ಮೆಗಾಪಿಕ್ಸೆಲ್ ಎರಡು ಪ್ರಾಥಮಿಕ + ಫ್ಲಾಶ್

16 ಮೆಗಾಪಿಕ್ಸೆಲ್ ಸ್ವಂತೀ

ಸಿಮ್ 2 ನ್ಯಾನೊ
ಬ್ಯಾಟರಿ 3500 mAh
ಗಾತ್ರ 156.7 x 74 x 8.5 ಮಿ.ಮೀ.
ತೂಕ 174 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇದೆ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇಲ್ಲ
ಎನ್‌ಎಫ್‌ಸಿ ಇಲ್ಲ
4 ಜಿ ವಿಓಎಲ್‌ಟಿಇ (4G VoLTE) ಇದೆ
ಇಯರ್‌ಫೋನ್ ‌ಇಲ್ಲ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 8.1.0 + ಕಲರ್ ಓಎಸ್ 5.2
ಬೆಲೆ ₹17,990 (ಅಮೆಝಾನ್), 3 ಬಣ್ಣಗಳಲ್ಲಿ ಲಭ್ಯ

 

ರಚನೆ ಮತ್ತು ವಿನ್ಯಾಸ

ಈ ಫೋನ್ 4+64, 6+64 ಮತ್ತು 8+128 ಗಿಗಾಬೈಟ್ ಮಾದರಿಗಳಲ್ಲಿ ಲಭ್ಯ. ಬ್ಲೂ ಓಶಿಯನ್, ಬ್ಲ್ಯಾಕ್ ಸೀ ಮತ್ತು ಐಸ್ ಲೇಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯ. ರಿಯಲ್‌ಮಿ 1 ಫೋನಿನಂತೆ ಇದರ ರಚನೆ ಮತ್ತು ವಿನ್ಯಾಸ ಕೂಡ ಅತ್ಯುತ್ತಮವಾಗಿದೆ. ಅದರಲ್ಲೂ ನೀಲಿ ಬಣ್ಣದ ಫೋನ್‌ ಅನ್ನು ನೀವು ನೋಡಿದರೆ ನೀವು ಇದಕ್ಕೆ ಮರುಳಾಗುತ್ತೀರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಬಲ ಭಾಗದಲ್ಲಿ ಆನ್/ಆಫ್ ಸ್ವಿಚ್ ಇದೆ. ಎಡಭಾಗದಲ್ಲಿ ವಾಲ್ಯೂಮ್ ಸ್ವಿಚ್ ಮತ್ತು ಸಿಮ್ ಹಾಗೂ ಮೆಮೊರಿ ಕಾರ್ಡ್ ಹಾಕುವ ಟ್ರೇ ಇವೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಮತ್ತು 3.5 ಮಿ. ಮೀ. ಇಯರ್‌ಫೋನ್ ಕಿಂಡಿಗಳಿವೆ.  ಹಿಂದುಗಡೆ ಬಲಮೂಲೆಯಲ್ಲಿ ಕ್ಯಾಮರ ಮತ್ತು ಪಕ್ಕದಲ್ಲಿ ಫ್ಲಾಶ್ ಇವೆ. ಹಿಂಭಾಗದ ಮಧ್ಯಭಾಗದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚದ ವಿನ್ಯಾಸ ನೋಡಲು ಸುಂದರವಾಗಿದೆ. ಕವಚ ತುಂಬ ನಯವಾಗಿದೆ. ಕೈಯಿಂದ ಜಾರಿ ಬೀಳಬಾರದು ಎಂದಿದ್ದರೆ ಅಧಿಕ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ.

20180926_113031 20180926_113102 20180926_113129

 

ಕೆಲಸದ ವೇಗ

ಇದರಲ್ಲಿ ಬಳಸಿರುವುದು ಸ್ನ್ಯಾಪ್‌ಡ್ರಾಗನ್ 660 ಪ್ರೋಸೆಸರ್. ಇದನ್ನು ಸಾಮನ್ಯವಾಗಿ ಮಧ್ಯಮ ದರ್ಜೆಯ ಫೋನ್‌ಗಳಲ್ಲಿ ಬಳಸುತ್ತಾರೆ. ಈ ಫೋನಿನ ಅಂಟುಟು ಬೆಂಚ್‌ಮಾರ್ಕ್ 1,32,635 ಇದೆ. ಅಂದರೆ ಇದು ಒಂದು ಮಟ್ಟಿಗೆ ವೇಗದ ಫೋನ್ ಎನ್ನಬಹುದು. ಬಳಸುವಾಗ ಇದು ವೇದ್ಯವಾಗುತ್ತದೆ. ಮೂರು ಆಯಾಮದ ಆಟಗಳನ್ನು ಕೂಡ ತೃಪ್ತಿದಾಯಕವಾಗಿ ಆಡಬಹುದು. ಹಲವು ತಂತ್ರಾಂಶಗಳನ್ನು ಏಕಕಾಲಕ್ಕೆ ತೆರೆದರೂ ಇದು  ತಡೆತಡೆದು ಕೆಲಸ ಮಾಡುವುದಿಲ್ಲ. ವಿಮಾನ ಹಾರಾಟದಂತಹ ಪ್ರತ್ಯನುಕರಣೆಯ (simulation) ಆಟಗಳನ್ನು ಆಡುವ ಅನುಭವ ಉತ್ತಮವಾಗಿದೆ.

 

ಈ ಫೋನಿನ ಪರದೆ ಚೆನ್ನಾಗಿದೆ. ಇದು 1080 x 2340 ಪಿಕ್ಸೆಲ್ ರೆಸೊಲೂಶನ್‌ನ ಪರದೆ. ಅಂದರೆ ಹೈಡೆಫಿನಿಶನ್‌ಗಿಂತ ಹೆಚ್ಚು. ಅಂತೆಯೇ ವಿಡಿಯೋ ವೀಕ್ಷಣೆಯ ಅನುಭವ ಉತ್ತಮವಾಗಿದೆ. ಹೈಡೆಫಿನಿಶನ್ ಮತ್ತು ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೋ ವೀಕ್ಷಣೆ ಮಾಡಬಹುದು. ಇವರು ಡ್ಯೂಡ್ರಾಪ್ ವಿನ್ಯಾಸವನ್ನು ಬಳಸಿದ್ದಾರೆ. ಅಂದರೆ ಅಂಚುರಹಿತ (bezelless) ಪರದೆಯಲ್ಲಿ ಪರದೆಯ ಕಚ್ಚು (notch) ಕೂಡ ಇದೆ ಮಾತ್ರವಲ್ಲ ಈ ಕಚ್ಚು ಅತಿ ಚಿಕ್ಕದಾಗಿದ್ದು ನೀರಿನ ಹನಿಯಂತೆ ಇದೆ. ಈ ಫೋನಿನ ಆಡಿಯೋ ಇಂಜಿನ್ ನಿಜಕ್ಕೂ ಚೆನ್ನಾಗಿದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು.

ಕ್ಯಾಮರ

ಈ ರಿಯಲ್‌ಮಿ 2 ಪ್ರೊ ಫೋನಿನಲ್ಲಿರುವುದು  16 ಮೆಗಾಪಿಕ್ಸೆಲ್‌ ಮತ್ತು 2 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮರಗಳು. ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮರದ ಗುಣಮಟ್ಟ ನಿಜಕ್ಕೂ ಚೆನ್ನಾಗಿದೆ ಎನ್ನಬಹುದು. ಕ್ಯಾಮರದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಆಯ್ಕೆ ಕೂಡ ಇದೆ. ಬಹುತೇಕ ಸಂದರ್ಭಗಳಲ್ಲಿ ಉತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಫೋಟೋ ತೆಗೆಯುತ್ತದೆ. ನನಗಂತೂ ಇದರ ಮ್ಯಾಣ್ಯುವಲ್ ಮೋಡ್ ತುಂಬ ಇಷ್ಟವಾಯಿತು. ನಿಮ್ಮಲ್ಲಿ ಒಬ್ಬ ಪರಿಣತ ಫೋಟೋಗ್ರಾಫರ್ ಇದ್ದಲ್ಲಿ ಈ ಫೋನ್ ತೆಗೆದುಕೊಂಡು ನೀವು ಒಂದು ಮಟ್ಟಿಗೆ ಉತ್ತಮ ಫೋಟೋ ತೆಗೆಯಬಹುದು. ಬಣ್ಣಗಳೂ ಸರಿಯಾಗಿಯೇ ಮೂಡಿ ಬರುತ್ತವೆ. ನೀಡುವ ಹಣಕ್ಕೆ ಉತ್ತಮ ಕ್ಯಾಮರ ಫೋನ್‌ಬೇಕು ಎನ್ನುವವರಿಗೆ ಇದು ಆಗಬಹುದು.

ಬ್ಯಾಟರಿಯ ಶಕ್ತಿ 3500 mAh ಎಂದರೆ ಸಾಕಷ್ಟಾಯಿತು. ಒಂದು ಒಂದೂವರೆ ದಿನಕ್ಕೆ ಧಾರಾಳ ಸಾಕು. ಪೂರ್ತಿ ಚಾರ್ಜ್ ಆಗಲು ಸುಮಾರು ಎರಡೂವರೆ ಗಂಟೆ ಬೇಕು.

ಅಂತಿಮ ತೀರ್ಮಾನ

ಈ ಫೋನಿನ ಹೆಚ್ಚುಗಾರಿಕೆಯಿರುವುದು ಕಡಿಮೆ ಬೆಲೆಗೆ 8+128 ಗಿಗಾಬೈಟ್ ಮೆಮೊರಿ, ಉತ್ತಮ ವೇಗ, ತೃಪ್ತಿ ನೀಡುವ ಕ್ಯಾಮರ ಮತ್ತು ಉತ್ತಮ ವಿನ್ಯಾಸ. ಒಟ್ಟಿನಲ್ಲಿ ಹೇಳುವುದಾದರೆ ನಿಜಕ್ಕೂ ನೀಡುವ ಹಣಕ್ಕೆ ಅತ್ಯುತ್ತಮ ಖರೀದಿ ಎನ್ನಬಹುದು.

 

-ಡಾ| ಯು.ಬಿ. ಪವನಜ

 


ಗ್ಯಾಜೆಟ್ ಲೋಕ ೩೫೩ (ನವಂಬರ್ ೦೩, ೨೦೧೮) – ಹುವಾವೇ ನೋವಾ 3
Source:  Vishva Kannada
Saturday, 03 November 2018 12:23

ಹುವಾವೇ ನೋವಾ 3

ಉತ್ತಮ ವಿನ್ಯಾಸ ಮತ್ತು ಕ್ಯಾಮರ ಇರುವ ಫೋನ್

ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು ಹುವಾವೇ (Huawei). ಹುವಾವೇಯವರದೇ ಇನ್ನೊಂದು ಬ್ರ್ಯಾಂಡ್ ಹೋನರ್ (ಆನರ್?). ಈ ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ನೀಡಲಾಗಿತ್ತು. ಹುವಾವೇ ಕಂಪೆನಿಯು ಸ್ವಲ್ಪ ಮೇಲ್ದರ್ಜೆಯ ಫೋನ್‌ಗಳನ್ನು ತಯಾರಿಸುತ್ತಿದೆ. ಇತ್ತೀಚೆಗಷ್ಟೆ ಅವರು ಭಾರತದಲ್ಲೂ ತಮ್ಮ ಫೋನ್‌ಗಳನ್ನು ಮಾರಾಟ ಮಾಡಲು ಪ್ರಾರಂಬಿಸಿದ್ದಾರೆ. ಈ ಸಲ ನಾವು ವಿಮರ್ಶಿಸುತ್ತಿರುವ ಗ್ಯಾಜೆಟ್ ಹುವಾವೇ ನೋವಾ 3 (Huawei Nova 3)

ಗುಣವೈಶಿಷ್ಟ್ಯಗಳು

ಪ್ರೋಸೆಸರ್ 4 x 2.36 ಗಿಗಾಹರ್ಟ್ಸ್ + 4 x 1.8 ಗಿಗಾಹರ್ಟ್ಸ್ ಪ್ರೋಸೆಸರ್ (Kirin 970)
ಗ್ರಾಫಿಕ್ಸ್ ಪ್ರೋಸೆಸರ್ Mali-G72 MP12
ಮೆಮೊರಿ 6 + 128 ಗಿಗಾಬೈಟ್
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಹೈಬ್ರಿಡ್)
ಪರದೆ 6.3 ಇಂಚು ಗಾತ್ರದ 1080 x 2340 ಪಿಕ್ಸೆಲ್, 409 PPI
ಕ್ಯಾಮರ 16 + 24  ಮೆಗಾಪಿಕ್ಸೆಲ್ ಎರಡು ಪ್ರಾಥಮಿಕ + ಫ್ಲಾಶ್

24 ಮೆಗಾಪಿಕ್ಸೆಲ್ ಸ್ವಂತೀ

ಸಿಮ್ 2 ನ್ಯಾನೊ ಅಥವಾ 1 ನ್ಯಾನೊ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್
ಬ್ಯಾಟರಿ 3750 mAh
ಗಾತ್ರ 157.00 x 73.70 x 7.30 ಮಿ.ಮೀ.
ತೂಕ 166 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇದೆ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇಲ್ಲ
ಎನ್‌ಎಫ್‌ಸಿ ಇಲ್ಲ
4 ಜಿ ವಿಓಎಲ್‌ಟಿಇ (4G VoLTE) ಇದೆ
ಇಯರ್‌ಫೋನ್ ‌ಇದೆ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 8.1.0 + EMUI 8.2
ಬೆಲೆ ₹34,999 (ನಿಗದಿತ), ₹29,999 (ಅಮೆಝಾನ್)
5 ಬಣ್ಣಗಳಲ್ಲಿ ಲಭ್ಯ

 

ರಚನೆ ಮತ್ತು ವಿನ್ಯಾಸ

ಇದರ ರಚನೆ ಮತ್ತು ವಿನ್ಯಾಸ ನಿಜಕ್ಕೂ ಸುಂದರವಾಗಿದೆ. ಇದರ ಹಿಂಭಾಗ ಮತ್ತು ಇತ್ತೀಚೆಗೆ ಮಾರುಕಟ್ಟೆಗೆ ಬಂದ ಹೋನರ್ 8ಎಕ್ಸ್ ಫೋನ್‌ನ ಹಿಂಭಾಗ ಬಹುತೇಕ ಒಂದೇ ರೀತಿ ಇವೆ. ಈ ಫೋನಿನಲ್ಲಿ ಹುವಾವೇ ಎಂದು ಬರೆದ ಜಾಗದಲ್ಲಿ ಆ ಫೋನಿನಲ್ಲಿ ಹೋನರ್ ಎಂದು ಬರೆದಿದ್ದಾರೆ. ಇದು 6.3 ಇಂಚು ಗಾತ್ರದ ಪರದೆಯನ್ನು ಒಳಗೊಂಡಿದೆ. ದಪ್ಪವೂ ಕಡಿಮೆ ಇದೆ. 5.0 – 5.5 ಇಂಚು ಗಾತ್ರದ ಪರದೆ ಸಾಲದು ಎನ್ನುವವರಿಗೆ ಇದು ಉತ್ತಮ ಆಯ್ಕೆ. ಇತ್ತೀಚೆಗೆ ಬರುತ್ತಿರುವ ಬಹುತೇಕ ಮೇಲ್ದರ್ಜೆ ಫೋನ್‌ಗಳಂತೆ ಇದು ಕೂಡ ಅಂಚುರಹಿತ (bezelless) ಫೋನ್. ಅಂದರೆ ಇದರ ಪರದೆ ಮತ್ತು ದೇಹದ ಗಾತ್ರಗಳ ಅನುಪಾತ ಉತ್ತಮವಾಗಿದೆ ಎಂದು ಅರ್ಥ. ಜೊತೆಗೆ ಪರದೆಯ ಕಚ್ಚು (notch) ಕೂಡ ಇದೆ. ಇದನ್ನು ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ. ಇದರ ಹಿಂಭಾಗ ತುಂಬ ನುಣುಪಾಗಿದೆ. ಬದಿಗಳಲ್ಲಿ ವಕ್ರವಾಗಿದ್ದು ತಲೆದಿಂಬಿನಂತಿದೆ. ಗಾತ್ರ ದೊಡ್ಡದಾಗಿರುವುದರಿಂದ ಮತ್ತು ದೇಹ ಸ್ವಲ್ಪ ನುಣುಪಾಗಿರುವುದುರಿಂದ ಕೈಯಿಂದ ಜಾರಿ ಬೀಳುವ ಭಯವಿದೆ. ಹಾಗೆ ಬೀಳಬಾರದು ಎಂದು ಅವರೇ ಒಂದು ಅಧಿಕ ಪ್ಲಾಸ್ಟಿಕ್ ಕವಚ ನೀಡಿದ್ದಾರೆ. ಆದರೆ ಈ ಕವಚದ ತಯಾರಿಯಲ್ಲಿ ಸ್ವಲ್ಪ ದೋಷವಿದೆ. ಅದನ್ನು ಹಾಕಿದಾಗ ಕಾಲುಭಾಗ ಫ್ಲಾಶ್ ಮುಚ್ಚಿಹೋಗುತ್ತದೆ.

 

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಯುಎಸ್‌ಬಿ-ಸಿ ನಮೂನೆಯ ಕಿಂಡಿಗಳಿವೆ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೋಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಅಥವಾ ಎರಡು ನ್ಯಾನೋ ಸಿಮ್ ಹಾಕಲು ಬಳಸಲಾಗುತ್ತದೆ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಇದನ್ನು ಬಳಸಲು ನೀವು ಯುಎಸ್‌ಬಿ-ಸಿ ನಮೂನೆಯ ಓಟಿಜಿ ಕೇಬಲ್ ಅಥವಾ ಅಡಾಪ್ಟರ್ ಕೊಳ್ಳಬೇಕು. ಫ್ರೇಂನ ಕೆಳಭಾಗದಲ್ಲಿ ಒಂದು ಗ್ರಿಲ್‌ ಇದ್ದು ಸ್ಪೀಕರ್ ಅದರೊಳಗಿದೆ. ಹಿಂಭಾಗದ ಮೂಲೆಯಲ್ಲಿ ಕ್ಯಾಮೆರ ಇದೆ. ಹಿಂಭಾಗದ ಮಧ್ಯದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ನನ್ನ ಪ್ರಕಾರ ಇದು ಬೆರಳಚ್ಚು ಸ್ಕ್ಯಾನರ್‌ಗೆ ಉತ್ತಮ ಜಾಗ. ಕೈಯಲ್ಲಿ ಫೋನ್ ಹಿಡಿದಾಗ ಸಹಜವಾಗಿ ತೋರುಬೆರಳು ಈ ಸ್ಕ್ಯಾನರ್ ಮೇಲೆ ಬರುತ್ತದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು. ಈ ಫೋನ್ ಐದು ಬಣ್ಣಗಳಲ್ಲಿ ಲಭ್ಯ. ಒಂದು ಸುಂದರ ಫೋನ್ ಬೇಕು ಎಂದು ನೀವು ಹುಡುಕಾಡುತ್ತಿದ್ದರೆ ಈ ಫೋನನ್ನು ನೀವು ಕೊಳ್ಳಬಹುದು.

20181103_113704 20181103_113607 20181103_113531
20181103_113849 20181103_113948

ಕೆಲಸದ ವೇಗ

ಕೆಲಸದ ವೇಗ ಚೆನ್ನಾಗಿದೆ. ಇದರಲ್ಲಿ ಬಳಸಿರುವುದು ಹುವಾವೇಯವರದೇ ಕಿರಿನ್ ಪ್ರೋಸೆಸರ್. ಈ ಪ್ರೋಸೆಸರ್ ಅನ್ನು ಹುವಾವೇ ಮತ್ತು ಹೋನರ್ ಫೋನ್‌ಗಳು ಮಾತ್ರ ಬಳಸುತ್ತಿವೆ. ಇದರ ಅಂಟುಟು ಬೆಂಚ್‌ಮಾರ್ಕ್ 2,06,904 ಇದೆ. ಅಂದರೆ ಇದು ಉತ್ತಮ ವೇಗದ ಫೋನ್. ಎಲ್ಲ ನಮೂನೆಯ ಆಟಗಳನ್ನು ಆಡುವ ಅನುಭವ ತೃಪ್ತಿದಾಯಕವಾಗಿದೆ. ಮೂರು ಆಯಾಮಗಳ ಆಟಗಳನ್ನು ಆಡುವ ಅನುಭವವೂ ಚೆನ್ನಾಗಿದೆ. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಇದರ ಆಡಿಯೋ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿದ್ದಾರೆ. ಈ ಇಯರ್‌ಫೋನಿನ ವಿನ್ಯಾಸ ಸ್ವಲ್ಪ ವಿಚಿತ್ರವಾಗಿದೆ. ಅದಕ್ಕೆ ಕುಶನ್ ಹಾಕಲು ಸಾಧ್ಯವಿಲ್ಲ. ಕಿವಿ ಕಾಲುವೆಯೊಳಗೆ ಹೋಗುವುದಿಲ್ಲ. ಅದರ ಗುಣಮ್ಟ ಮಾತ್ರ ತೃಪತಿದಾಯಕವಾಗಿಲ್ಲ. ಅತಿ ಕಡಿಮೆ (bass) ಮತ್ತು ಅತಿ ಹೆಚ್ಚಿನ (treble) ಕಂಪನಾಂಕದ ಧ್ವನಿಯ ಪುನರುತ್ಪತ್ತಿ ತೃಪ್ತಿದಾಯಕವಗಿಲ್ಲ.  ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಸಂಗೀತವನ್ನು ಆಲಿಸಬಹುದು. ಆದರೂ ನೀಡುವ ಬೆಲೆಗ ಹೋಲಿಸಿದರೆ ಇನ್ನೂ ಉತ್ತಮ ಆಡಿಯೋ ಇಂಜಿನ್ ನೀಡಬಹುದಿತ್ತು ಎಂಬುದು ನನ್ನ ಅಭಿಪ್ರಾಯ.

 

ಕ್ಯಾಮರ

ಇದರಲ್ಲಿ 16 ಮತ್ತು 24 ಮೆಗಾಪಿಕ್ಸೆಲ್‌ಗಳ ಎರಡು ಪ್ರಾಥಮಿಕ ಕ್ಯಾಮರಗಳಿವೆ. ಈ ಕ್ಯಾಮರದ ಕಿರುತಂತ್ರಾಂಶದಲ್ಲಿ (ಆಪ್) ಕೃತಕ ಬುದ್ಧಿಮತ್ತೆ (Artificial Intelligence) ಅಳವಡಿಸಿದ್ದಾರೆ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳು ಈ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಫೋನ್ ಕೂಡ ಅವುಗಳ ಸಾಲಿಗೆ ಸೇರುತ್ತದೆ.  ಕ್ಯಾಮರದ ಕಿರುತಂತ್ರಾಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಕೂಡ ಇದೆ. ಫೋಟೋಗಳು ನಿಜಕ್ಕೂ ಚೆನ್ನಾಗಿಯೇ ಮೂಡಿಬರುತ್ತವೆ. ಹೋನರ್ ಮತ್ತು ಹುವಾವೇಯವರ ಫೋನ್‌ಗಳು ಕ್ಯಾಮರದ ವಿಷಯದಲ್ಲಿ ಬಹುತೇಕ ಒಂದೇ ರೀತಿ ಇವೆ. ಹೋನರ್ ಫೋನ್‌ಗಳ ಕ್ಯಾಮರದಂತೆ ಇದರ ಕ್ಯಾಮರ ಕೂಡ ಬಣ್ಣಗಳನ್ನು ಸ್ವಲ್ಪ ಜಾಸ್ತಿಯೇ ಗಾಢವಾಗಿ ಮೂಡಿಸುವುದು. ಸ್ವಂತೀಯಲ್ಲಿ ನಿಮ್ಮನ್ನು ಸ್ವಲ್ಪ ಜಾಸ್ತಿಯೇ ಸುಂದರವಾಗಿ ಮಾಡುತ್ತದೆ!

 

davdavrhdr

oznor oznor dav oznor
oznor oznor cof dav
dav dav ptr ozedf

ಬೆರಳಚ್ಚು ಸ್ಕ್ಯಾನರ್ ಚೆನ್ನಾಗಿಯೇ ಕೆಲಸ ಮಾಡುತ್ತದೆ. ಮುಖವನ್ನು ಗುರುತುಹಿಡಿಯುವ ಸವಲತ್ತು ಕೂಡ ತೃಪ್ತಿದಾಯಕವಾಗಿ ಹಾಗೂ ವೇಗವಾಗಿ ಕೆಲಸ ಮಾಡುತ್ತದೆ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಆಗುತ್ತದೆ.

 

 

ಅಂತಿಮ ತೀರ್ಮಾನ

ಉತ್ತಮ ರಚನೆ, ಮತ್ತು ವಿನ್ಯಾಸವಿರುವ, ನೋಡಲು ಸುಂದರವಾದ ಫೋನ್. ಶಕ್ತಿಶಾಲಿಯಾದ ಪ್ರೋಸೆಸರ್ , 6+128 ಗಿಗಾಬೈಟ್ ಮೆಮೊರಿ ಇದೆ. ಉತ್ತಮ ಕ್ಯಾಮರ ಇದೆ. ಒಟ್ಟಿನಲ್ಲಿ  ನೀಡುವ ಬೆಲೆಗೆ ತಕ್ಕ ಫೋನ್ ಎನ್ನಬಹುದು.


ವಿಕಿಪೀಡಿಯ ಲೇಖನ ಬರಹ
Source:  Vishva Kannada
Monday, 02 July 2018 16:48

-ಡಾ. ವಿಶ್ವನಾಥ ಬದಿಕಾನ

ವಿಕಿಪೀಡಿಯ ಎಂದರೇನು

ಆಧುನಿಕ ಬದುಕಿನ ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿನ ಅದ್ಭುತ ಆವಿಷ್ಕಾರಗಳಲ್ಲೊಂದಾದ ಮಾಹಿತಿ ತಂತ್ರಜ್ಞಾನದ ಒಂದು ವಿನೂತನ ಪರಿಕಲ್ಪನೆ ‘ವಿಕಿಪೀಡಿಯ’.  ವಿಕಿಪೀಡಿಯ (Wikipedia)ವು ವೆಬ್ ಆಧಾರಿತ ಅಂತರಜಾಲದ (Internet) ಮೂಲಕ ಬರೆಯುವ ಉಚಿತ, ಸಹಕಾರಿ, ಬಹುಭಾಷಾ ಸ್ವತಂತ್ರ ವಿಶ್ವಕೋಶ.  ಇದೊಂದು ವಿಶ್ವಕೋಶ ಜಾಲತಾಣ (Encyclopaedia Website) ವಾಗಿದ್ದು www.wikipedia.org ಅಂತರಜಾಲದ ಮೂಲಕ ಮಾಹಿತಿ ಸೇರಿಸಬಹುದು ಅಥವಾ ಹುಡುಕಬಹುದು.  ವಿಕಿಪೀಡಿಯವು ಅಂತರಜಾಲದ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು, ಪ್ರಪಂಚದ ಲಕ್ಷಾಂತರ ಮಂದಿ ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ ಸಹಯೋಗಿ ಮನೋಭಾವದಿಂದ ಸಂಪಾದಿಸಿದ್ದಾಗಿದೆ.  ವಿಕಿಪೀಡಿಯವು ಮಾಹಿತಿಗಳ ಜ್ಞಾನಕೋಶ.  ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಇರುವಂತೆ ನೋಡಿಕೊಳ್ಳುವ ಯೋಜನೆಗಳಲ್ಲಿ ವಿಕಿಪೀಡಿಯ ಕೂಡ ಒಂದು.  ವಾಸ್ತವ ಜಗತ್ತಿನಲ್ಲೂ ಸಮುದಾಯವೊಂದನ್ನು ಕಟ್ಟಿ, ಅದರಲ್ಲೂ ಸ್ವತಂತ್ರತೆಯ ಅಂಶವನ್ನು ಎತ್ತಿ ಹಿಡಿದಿರುವ ವಿಕಿಪೀಡಿಯ ವಿಶ್ವದ ಭಾಷೆಗಳನ್ನು ತನ್ನ ಒಡಲಲ್ಲಿರಿಸಿಕೊಂಡಿದೆ.  ಜಗತ್ತಿನ ಎಲ್ಲಾ ವಿಚಾರಗಳನ್ನು ಆಯಾ ಭಾಷೆಗಳಲ್ಲಿ ಬರೆದು ಪ್ರಪಂಚಜ್ಞಾನವಾಗಿ ರೂಪಿಸಲು ವಿಕಿಪೀಡಿಯದಲ್ಲಿ ಸಾಧ್ಯವಿದೆ.  ನಮ್ಮ ಸ್ಥಳೀಯ ವಿಚಾರಗಳಾದ ಸಂಸ್ಕೃತಿ, ಚರಿತ್ರೆ, ವಿಜ್ಞಾನ, ಪ್ರಕೃತಿ, ಪರಿಸರ, ಸಮಾಜ, ಜಾನಪದ, ಸ್ಥಳನಾಮ, ಧರ್ಮ, ವ್ಯಕ್ತಿಪರಿಚಯ, ಕಲೆ, ನೃತ್ಯ ಇತ್ಯಾದಿ ಮಾಹಿತಿಗಳನ್ನು ವಿಕಿಪೀಡಿಯದಲ್ಲಿ ಬರೆಯುವುದರಿಂದ ಅವುಗಳು ನಾಳೆಯ ಜ್ಞಾನಗಳಾಗಿ ಮಾರ್ಪಡುವಂತೆ ಇಂದಿನವರು ಪ್ರಯತ್ನಿಸಬಹುದಾದ ಆನ್‌ಲೈನ್ ಮಾಹಿತಿ ಕೋಶ.

 

ವಿಕಿಪೀಡಿಯ ಪದದ ನಿಷ್ಪತ್ತಿ

ವಿಕಿಪೀಡಿಯವು ವಿಕಿ ಮತ್ತು ಪೀಡಿಯ ಎಂಬ ಎರಡು ಪದಗಳ ಸಂಮಿಶ್ರವಾಗಿದೆ.  ವಿಕಿ ಪದವು ಹವಾಯಿ ಭಾಷೆಯಿಂದ ಬಂದಿದೆ.  ಹವಾಯಿ ಭಾಷೆಯ ‘ವಿಕಿ’ ಪದಕ್ಕೆ ಶೀಘ್ರ , ವೇಗ, ತ್ವರಿತಗತಿ ಎಂಬರ್ಥವಿದೆ.  ಇಂಗ್ಲಿಷಿನಲ್ಲಿ Encyclopaedia  ಪದಕ್ಕೆ ವಿಶ್ವಕೋಶ ಎಂದರ್ಥ.  ಹವಾಯಿ ಭಾಷೆಯ ವಿಕಿ ಮತ್ತು ಎನ್‌ಸೈಕ್ಲೋಪೀಡಿಯದ ಪೀಡಿಯ ಈ ಎರಡೂ ಪದಗಳನ್ನು ಸಂಯೋಜಿಸಿ ವಿಕಿಪೀಡಿಯ (Wikipedia) ಎಂಬ ಗಣಕೀಕೃತ ವಿಶ್ವಕೋಶದ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ.  ಕನ್ನಡದಲ್ಲಿ ವಿಕಿಪೀಡಿಯವನ್ನು ‘ತ್ವರಿತ ವಿಶ್ವಕೋಶ’ವೆಂದೂ ಹೆಸರಿಸಿದ್ದಾರೆ.

 

ವಿಕಿಪೀಡಿಯದ ಹುಟ್ಟು

ವಿಕಿಪೀಡಿಯವನ್ನು ಅಮೆರಿಕದಲ್ಲಿರುವ ವಿಕಿಮೀಡಿಯ ಫೌಂಡೇಶನ್ ನಡೆಸುತ್ತಿದೆ. ಇದು ಅಮೇರಿಕ ದೇಶದ ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿ ಆಡಳಿತ ಕಚೇರಿಯನ್ನು ಹೊಂದಿದ್ದು ಒಂದು ಲಾಭರಹಿತ ಹಾಗು ದಾನಶೀಲ ಸಾಮಾಜಿಕ ಸಂಘಟನೆಯಾಗಿದೆ.  ವಿಕಿಪೀಡಿಯದ ಸೇವೆಯು ಉಚಿತವಾಗಿದ್ದು ಅಂತರಜಾಲ ಹೊಂದಿರುವ ಯಾವುದೇ ವ್ಯಕ್ತಿಯೂ ಈ ಸಾಮಾಜಿಕ ಜಾಲತಾಣದಲ್ಲಿ ಕೊಡುಗೆಯನ್ನು ನೀಡಬಹುದು.  ಪ್ರಪಂಚದ ಅತಿ ಪ್ರಸಿದ್ಧ ಜಾಲತಾಣಗಳ ಸಾಲಿನಲ್ಲಿ ವಿಕಿಪೀಡಿಯವು ಐದನೇ ಸ್ಥಾನವನ್ನು ಪಡೆದಿದೆ.

ನ್ಯುಪೀಡಿಯ (http://www.new-pedia.com/) ಎಂಬ ಇನ್ನೊಂದು ವಿಶ್ವಕೋಶ ಯೋಜನೆಯಿಂದ ವಿಕಿಪೀಡಿಯ ವಿಶ್ವಕೋಶವು ಮೂಡಿ ಬಂದಿದೆ.  ಜನವರಿ ೧೫, ೨೦೦೧ರಲ್ಲಿ ಜಿಮ್ಮಿ ವೇಲ್ಸ್ (Jimmy Wales)  ಮತ್ತು ಲ್ಯಾರಿ ಸ್ಯಾಂಗರ್ (Larry Sanger)  ಎಂಬರು ವಿಕಿಪೀಡಿಯವನ್ನು ಪ್ರಾರಂಭಿಸಿದರು.  ಜಿಮ್ಮಿ ವೇಲ್ಸ್ ಅವರು ವಿಕಿಪೀಡಿಯದ ಸಂಸ್ಥಾಪಕರಾಗಿದ್ದು, ಹಂಟಿಸ್‌ವಿಲ್ಲೆ ಅಲಬಾಮಾ (Huntsville, Alabama) ಎಂಬ ನಗರದವರು. ಲ್ಯಾರಿ ಸ್ಯಾಂಗರ್ ಅವರು ಅಮೇರಿಕದಲ್ಲಿ ಅಂತರಜಾಲ ಯೋಜನೆಯನ್ನು ಅಭಿವೃದ್ಧಿ ಪಡಿಸುವ ವಿಕಿಪೀಡಿಯದ ಸಹ ಸಂಸ್ಥಾಪಕ.

ವಿಕಿಪೀಡಿಯದ ಬೆಳವಣಿಗೆ

ಕ್ರಿ.ಶ. ೨೦೦೧ರಲ್ಲಿ ಹುಟ್ಟಿಕೊಂಡ ಈ ವಿಶ್ವಕೋಶವು ಅತ್ಯಂತ ಶೀಘ್ರವಾಗಿ ಬೆಳವಣಿಗೆ ಹೊಂದಿ ಇಂದು ಅತ್ಯಂತ ಬೃಹತ್ತಾದ ಮತ್ತು ಅಸಂಖ್ಯಾತ ಆಕರಗಳನ್ನು ಹೊಂದಿರುವ ಅಂತರಜಾಲ ತಾಣವಾಗಿ ಅಭಿವೃದ್ಧಿ ಹೊಂದಿದೆ.    ವಿಕಿಪೀಡಿಯದಲ್ಲಿ ಪ್ರಪಂಚದ ೨೯೬ ಭಾಷೆಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ.  ಇನ್ನೂ ೨೮೫ ಭಾಷೆಗಳಲ್ಲಿ ವಿಕಿಪೀಡಿಯವು ಲೈವ್ ಆಗಲು ಕಾಯುತ್ತಿವೆ.    ಜಗತ್ತಿನ ಎಲ್ಲಾ ಭಾಷೆಯ ವಿಕಿಪೀಡಿಯಗಳು ಇಂಗ್ಲಿಷ್ ಭಾಷೆಯನ್ನು ಅವಲಂಬಿಸಿ ಬೆಳೆಯುತ್ತಿವೆ.  ಈ ತಾಣವನ್ನು ಪ್ರತಿ ತಿಂಗಳು ಸುಮಾರು ೪೦೦ ದಶಲಕ್ಷ ಮಂದಿ ಸಂದರ್ಶಿಸುತ್ತಾರೆಂದು ಹೇಳಲಾಗಿದೆ.  ಪ್ರಪಂಚದ ಎಲ್ಲಾ ಭಾಷಾಕ್ಷೇತ್ರಗಳಲ್ಲಿ ಸುಮಾರು ೮೨ ಸಾವಿರ ಮಂದಿ ೧೭ ದಶಲಕ್ಷ ಲೇಖನಗಳನ್ನು ಈ ಸಾಮಾಜಿಕ ಜಾಲತಾಣಕ್ಕೆ ಕಳುಹಿಸುತ್ತಾರೆ. ಈಗ ಭಾರತದಲ್ಲಿ ೨೩ ಭಾಷೆಗಳಲ್ಲಿ ವಿಕಿಪೀಡಿಯ ಕೆಲಸ ನಡೆಯುತ್ತಿದೆ.  ಇತ್ತೀಚೆಗೆ ಆಗಸ್ಟ್ ೫, ೨೦೧೬ರಂದು ತುಳು ವಿಕಿಪೀಡಿಯ (tcy.wikipedia.org) ಜೀವಂತಗೊಂಡಿದೆ.

ವಿಕಿಪೀಡಿಯವನ್ನು ಉಪಯೋಗಿಸುವವರು ಯಾರು?

ವಿಕಿಪೀಡಿಯವನ್ನು ಉಪಯೋಗಿಸುವವರನ್ನು ಎರಡು ವರ್ಗವಾಗಿ ವಿಂಗಡಿಸಿಕೊಳ್ಳಬಹುದು.

ವಿಕಿಪೀಡಿಯವನ್ನು ನೋಡುವವರು ಮತ್ತು ಓದುವವರು

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ವಿಕಿಪೀಡಿಯವನ್ನು ನೋಡುತ್ತಾರೆ.  ಓದುತ್ತಾರೆ.  ಈಗಿನ ಶಿಕ್ಷಣಕ್ರಮದಲ್ಲಿ ಪ್ರಬಂಧ ರಚಿಸುವುದು ಅಂಕ ಪಡೆಯುವ ಚಟುವಟಿಯಾಗಿದ್ದು, ವಿದ್ಯಾರ್ಥಿಗಳು ತರಗತಿ ಪ್ರಬಂಧ (ಅಸೈನ್‌ಮೆಂಟ್) ತಯಾರಿಗಾಗಿ ವಿಕಿಪೀಡಿಯವನ್ನು ಅವಲಂಭಿಸುತ್ತಾರೆ.  ಬರೆದಂತಹ ಪ್ರಬಂಧಗಳಿಗೆ ವಿಕಿಪೀಡಿಯವನ್ನೇ ಉಲ್ಲೇಖವಾಗಿ ನೀಡುತ್ತಾರೆ.

ಯಾವುದೇ ತಾಣದಲ್ಲೂ ವಿಕಿಪೀಡಿಯ ಜಾಲವು ಮೊದಲಿಗೆ ಕಾಣಿಸಿಕೊಳ್ಳುತ್ತದೆ.  ಬೇರೆ ಜಾಲತಾಣಗಳ ಜೊತೆಗೆ ವಿಕಿಪೀಡಿಯವನ್ನು ನೋಡುವವರು ಬಹಳಷ್ಟು ಮಂದಿ ಇದ್ದಾರೆ.  ಇವರು ಮಾಹಿತಿಗಾಗಿ ಅಂತರಜಾಲವನ್ನು ನೋಡುತ್ತಾರೆ.

ಐಎಎಸ್, ಕೆಎಎಸ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ವಿಕಿಪೀಡಿಯವನ್ನು ವೀಕ್ಷಿಸುತ್ತಾರೆ.

.       ವಿಕಿಪೀಡಿಯವನ್ನು ಸಂಪಾದಿಸುವವರು.

ಅಕ್ಷರಜ್ಞಾನವಿರುವ ಯಾರೂ ವಿಕಿಪೀಡಿಯವನ್ನು ಸಂಪಾದಿಸಬಹುದು.  ಶಾಲಾ-ಕಾಲೇಜುಗಳಲ್ಲಿ ಓದುವವರು, ಅಧ್ಯಾಪಕರು, ಉದ್ಯೋಗದಲ್ಲಿರುವವರು, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಚರಿತ್ರೆ ಇತ್ಯಾದಿ ವಿಷಯಗಳಲ್ಲಿ ಪರಿಣತರು ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವವರು ವಿಕಿಪೀಡಿಯವನ್ನು ಸಂಪಾದಿಸುವರು.

 

ವಿಕಿಪೀಡಿಯದ ವೈಶಿಷ್ಟ್ಯವೇನು?

ವಿಕಿಪೀಡಿಯವು ಮುಕ್ತ ವಿಶ್ವಕೋಶವಾಗಿದ್ದು, ಇಂಟರ್‌ನೆಟ್ ಸಂಪರ್ಕ ಹೊಂದಿರುವ ಯಾರು ಬೇಕಾದರೂ ವಿಶ್ವದ ಯಾವುದೇ ಮೂಲೆಯಿಂದ ಯಾವುದೇ ಭಾಷೆಯ ವಿಕಿಪೀಡಿಯದಲ್ಲಿ ಯಾವುದೇ ವಿಷಯದ ಲೇಖನಗಳ ಸಂಪಾದನೆಗೆ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ.  ಸಂಪಾದಕರು ಲೇಖನಗಳನ್ನು ಸಂಪಾದಿಸಬಹುದು, ಪರಿಷ್ಕರಿಸಬಹುದು ಹಾಗೂ ಹೊಸ ಮಾಹಿತಿ ಲೇಖನಗಳನ್ನು ಸೇರಿಸಬಹುದು. ಹೀಗೆ ಸಂಪಾದಿಸುವುದರಿಂದ ಇಂದು ಜಗತ್ತಿನ ಹಲವು ವಿಷಯಗಳ ಮಾಹಿತಿಯ ಲೇಖನಗಳು ಅಂತರಜಾಲದಲ್ಲಿ ಲಭ್ಯವಾಗುತ್ತಿವೆ.  ವಿಕಿಪೀಡಿಯದಲ್ಲಿ ಲೇಖನ ಬರೆಯುವವರು ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಬೇಕು.

ಲಾಗಿನ್ ಆಗುವುದು : ಲಾಗಿನ್ ಆಗಿ ಮಾಹಿತಿ ಭರಿತ ವಿಶ್ವಕೋಶ ಮಾದರಿಯ ಲೇಖನಗಳನ್ನು ವಿಕಿಪೀಡಿಯದಲ್ಲಿ ಬರೆಯುವುದು ಉಪಯುಕ್ತ.  ಆದರೆ ನೆನಪಿಡಿ ವಿಕಿಪೀಡಿಯ ಒಂದು ವಿಶ್ವಕೋಶವಾದುದರಿಂದ ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಗಿರಬೇಕು.

ಚಿತ್ರ ಸೇರಿಸುವುದು : ಪ್ರತಿಯೊಂದು ಲೇಖನಕ್ಕೂ ಕನಿಷ್ಟಪಕ್ಷ ಒಂದು ಚಿತ್ರವನ್ನು ನೀಡಬೇಕು.  ಈ ಸ್ವಂತ ತೆಗೆದ ಚಿತ್ರವನ್ನು ವಿಕಿಮಿಡಿಯ ಕಾಮನ್ಸ್ (https://commons.wikimedia.org) ಮೂಲಕ ಸೇರಿಸಬೇಕು.  ಗೂಗಲ್‌ನಿಂದ ಅಥವಾ ಇತರ ಜಾಲತಾಣಗಳಿಂದ ಚಿತ್ರಗಳನ್ನು ಪಡೆದು ಅವನ್ನು ಸೇರಿಸುವಂತಿಲ್ಲ.

 

3)      ಆಂತರಿಕ ಕೊಂಡಿ ನೀಡುವುದು : ವಿಕಿಪೀಡಿಯದಲ್ಲಿನ ಲೇಖನಗಳು ಒಂದಕ್ಕೊಂದು ಕೊಂಡಿ (Hyperlink) ಯಾಗಿದ್ದು, ಅವು ಪರಸ್ಪರ ಉಲ್ಲೇಖಗಳೊಂದಿಗೆ ಪ್ರತಿಯೊಂದು ಲೇಖನವು ಕಡಿಮೆ ಪಕ್ಷ ೫ ಕೊಂಡಿಯನ್ನು ಹೊಂದಿರುತ್ತವೆ.  ಈ ಕೊಂಡಿ ಪದವನ್ನು ಒತ್ತಿದಾಗ ಪ್ರತ್ಯೇಕ ಪುಟವನ್ನು ತೆರೆದುಕೊಳ್ಳುತ್ತದೆ.

 

4)      ಬಾಹ್ಯ ಕೊಂಡಿ ನೀಡುವುದು : ಪ್ರತಿಯೊಂದು ಲೇಖನದ ಅಂತ್ಯದಲ್ಲೂ ಹಲವಾರು ಬಾಹ್ಯ ಕೊಂಡಿಗಳಿರುತ್ತವೆ.  ಅವುಗಳು ಇತರ ಕುತೂಹಲಕಾರಿ ಲೇಖನಗಳು ಅಥವಾ ಸೂಕ್ತ ಬಾಹ್ಯ ಜಾಲತಾಣಗಳು, ಪುಟಗಳೂ, ಆಕರ ವಿಷಯಗಳು ಅಥವಾ ನಿರ್ದಿಷ್ಟ ಜ್ಞಾನಕ್ಷೇತ್ರದ ವ್ಯವಸ್ಥಿತ ವಿಭಾಗಗಳ ಬಗ್ಗೆ ಮಾಹಿತಿಯನ್ನು ನೀಡಬಲ್ಲವು.  ಯಾವುದಾದರೂ ಕೆಲವು ನಿರ್ದಿಷ್ಟ ಬೆಸುಗೆಗಳು ಅಲಭ್ಯವಾಗಿದ್ದಲ್ಲಿ ಅವುಗಳನ್ನು ಸೇರಿಸಲು ಸಹ ಬಾಹ್ಯ ಬೆಸುಗೆಯಲ್ಲಿ ಅವಕಾಶವಿದೆ.

5)      ಉಲ್ಲೇಖ ನೀಡುವುದು : ಪ್ರತಿಯೊಂದು ಲೇಖನಕ್ಕೂ ಉಲ್ಲೇಖವನ್ನು (Reference) ಸೂಚಿಸುವ ಇಂಟರ್‌ನೆಟ್‌ನ ಅತಿ ದೊಡ್ಡ ಮತ್ತು ಪ್ರಸಿದ್ದ ಜಾಲತಾಣ ವಿಕಿಪೀಡಿಯ.  ಒಂದು ಲೇಖನದಲ್ಲಿ ಬರೆದಿರುವ ಮಾಹಿತಿಗೆ ಉಲ್ಲೇಖಗಳನ್ನು ಕೊಡುವುದು ಕಡ್ಡಾಯವಾಗಿತ್ತದೆ.

6)      ಇತಿಹಾಸ ಪುಟ : ವಿಕಿಪೀಡಿಯದಲ್ಲಿ ಬರೆದ ಯಾವುದೇ ಲೇಖನದ ಲೇಖಕರ ಹೆಸರು ಇತಿಹಾಸ ಪುಟದಲ್ಲಿ ದಾಖಲಾಗಿರುತ್ತದೆ.  ಇದರಿಂದ ಯಾವುದೇ ಲೇಖನದ ಹಿಂದಿನ ಮತ್ತು ನಂತರದ ಆವೃತ್ತಿಯ ಬದಲಾವಣೆಗಳನ್ನು ನೋಡಬಹುದು.  ಹಾಗೂ ಅವಶ್ಯವಿಲ್ಲದ ಬದಲಾವಣೆಗಳನ್ನು ತೆಗೆದುಹಾಕಬಹುದು.

7)      ಚರ್ಚಾಪುಟ : ವಿಕಿಪೀಡಿಯದಲ್ಲಿ ಹಲವು ಸಂಪಾದಕರ ಕೆಲಸಗಳನ್ನು ಸರಿಯಾಗಿ ರಚಿಸಲು ಸಹಕಾರಿಯಾಗಿ ‘ಚರ್ಚೆ’ ಪುಟಗಳಿವೆ.  ಇದೊಂದು ವಿಕಿಪೀಡಿಯ ಸಂವಾದ ವ್ಯವಸ್ಥೆಯಾಗಿದ್ದು, ಲೇಖನದ ಬಗೆಗೆ ಭಿನ್ನಾಭಿಪ್ರಾಯಗಳಿದ್ದರೆ ಚರ್ಚಾ ಪುಟದಲ್ಲಿ ಸಂಪಾದಕರು ಅಭಿಪ್ರಾಯ ತಿಳಿಸಬಹುದು.

8)      ಸದಸ್ಯರ ಪುಟ : ವಿಕಿಪೀಡಿಯಕ್ಕೆ ಲಾಗಿನ್ ಆದ ಕೂಡಲೇ ಪುಟದ ಮೇಲ್ಭಾಗದಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುತ್ತದೆ.  ಆ ಹೆಸರನ್ನು ಒತ್ತಿದ್ದಾಗ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮನ್ನು ನೀವೇ ಪರಿಚಯಿಸಿಕೊಳ್ಳಿ.  ಸಾಧ್ಯವಾದರೆ ನಿಮ್ಮ ವೈಯಕ್ತಿಕ ಮಾಹಿತಿ (ರೆಸ್ಯೂಮ್) ತಯಾರಿಸಬಹುದು.  ಫೋಟೋ ಹಾಕಬಹುದು.

9)      ಲೇಖನಗಳ ವರ್ಗೀಕರಣ : ವಿಕಿಪೀಡಿಯ ಲೇಖನ ಬರೆದಾದ ನಂತರ ವರ್ಗೀಕರಿಸಿಕೊಳ್ಳಬೇಕು.  ಒಂದೇ ಮಾಹಿತಿಯ ಹಲವು ಲೇಖನಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗದಿದ್ದರೂ ವರ್ಗೀಕರಣದಲ್ಲಿ ಅವುಗಳ ಪತ್ತೆಯಾಗುತ್ತದೆ.  ಉದಾ: ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಇತ್ಯಾದಿ ಲೇಖನಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರು ಎಂಬುದಾಗಿ ವರ್ಗೀಕರಣ ಮಾಡುವುದು.

10)     ಸ್ವಪರಿಚಯ : ವ್ಯಕ್ತಿಪರಿಚಯಿಸುವಾಗ ಸಾಧಕರನ್ನು ಮಾಹಿತಿ ಲೇಖನವಾಗಿ ಬರೆಯಬೇಕು.  ಉದಾ: ಕವಿಪರಿಚಯ ಮಾಡುವಾಗ ಅನುಸರಿಸುವ ಕ್ರಮವನ್ನು ಇಲ್ಲೂ ಮಾಡಬಹುದು.  ಕವಿ-ಕವಿಕಾಲ,ದೇಶ-ಆಸಕ್ತಿಯ ಕ್ಷೇತ್ರ-ಸಾಧನೆಗಳು-ಪ್ರಶಸ್ತಿಗಳು-ಉಲ್ಲೇಖಗಳು ಇತ್ಯಾದಿ ಅಂಶಗಳು ಇರಬೇಕು.  ಹಾಗಾಗಿ ಲೇಖಕರು ತಮ್ಮನ್ನು ತಾವೇ ಲೇಖನವಾಗಿ ಬರೆಯುವಂತಿಲ್ಲ.  ತಮ್ಮ ಪರಿಚಯವನ್ನು ತಾವೇ ಸದಸ್ಯರ ಪುಟದಲ್ಲಿ ಮಾತ್ರ ನೀಡಬಹುದು.

11)     ಗಮನಾರ್ಹತೆ ಅಂಶ : ವಿಕಿಪೀಡಿಯ ಲೇಖನಗಳು ಗಮನಾರ್ಹ ವಿಷಯಗಳ ಬಗ್ಗೆ ಇರಬೇಕು.  ಅಂದರೆ ವಿಷಯಗಳು ವಿಶ್ವದ ಗಮನ ಸೆಳೆಯುವಂತಿರಬೇಕು.  ಗಮನಾರ್ಹ ಪ್ರಸಾರವ್ಯಾಪ್ತಿ ಇರಬೇಕು.

12)     ನಿಷ್ಪಕ್ಷಪಾತ ದೃಷ್ಟಿಕೋ : ಲೇಖನಗಳು ಯಾವುದೇ ಪಕ್ಷ, ಸಿದ್ಧಾಂತವನ್ನು ಬೆಂಬಲಿಸಬಾರದು.  ಆದರೆ ಎರಡು ಪಕ್ಷಗಳ ವಾದವನ್ನೂ ವಿವರಿಸಬೇಕು.  ವೈಯಕ್ತಿಕ ಅಭಿಪ್ರಾಯಗಳಿರಬಾರದು.  ತಟಸ್ಥ ಭಾಷೆ ಬಳಸಬೇಕು.

13)     ಕೃತಿಚೌರ್ಯ : ಬೇರೆಯವರ ಕೆಲಸವನ್ನು ತನ್ನದೆಂದು ಹಕ್ಕು ಸಾಧಿಸಲು ವಿಕಿಪೀಡಿಯನ್ನರು ಬಯಸುವುದಿಲ್ಲ.  ಎಲ್ಲಿ ಸಾಧ್ಯವೋ ಅಲ್ಲಿ ಮೂಲಕ್ಕೆ ಮನ್ನಣೆ ಕೊಡಬೇಕು.  ಮೂಲಕ್ಕೆ ಸಂಬಂಧಿಸಿದ ಉಲ್ಲೇಖವನ್ನು ನೀಡಬೇಕು.  ಉದಾ: ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳು, ಅಂತರಜಾಲ ಪುಟಗಳು, ಶೈಕ್ಷಣಿಕ ಪ್ರಕಟಣೆಗಳು ಇತ್ಯಾದಿ. ಕೃತಿಚೌರ್ಯದಿಂದ ಮೂಲ ಬರಹಗಾರನಿಗೆ ಮೋಸಮಾಡಿದಂತಾಗುತ್ತದೆ.  ಕಾನೂನು ರೀತ್ಯಾ ಅಪರಾಧವೂ ಆಗುತ್ತದೆ.

14)     ವಿಕಿಪೀಡಿಯದಲ್ಲಿ ಏನು ಬೇಕು? ಏನು ಬೇಡ?  :

ಬೇಕು – ವಿಶ್ವಕೋಶದ ಶೈಲಿಯ ಲೇಖನಗಳು ಬೇಕು. ಲೇಖನದ ವಿಷಯ ಪ್ರಪಂಚಕ್ಕೆಲ್ಲ ಉಪಯುಕ್ತವಾಗುವಂತಿರಬೇಕು. ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಸಾಹಿತ್ಯ ಇತ್ಯಾದಿ ಅಗತ್ಯವಾಗಿ ಇರಬೇಕು.

ಬೇಡ – ಯಾವುದೇ ಬ್ಲಾಗ್ ಮಾದರಿಯ ಪ್ರಬಂಧಗಳು, ಲೇಖನಗಳು, ವಿಮರ್ಶಾ ಬರಹಗಳು, ವೈಯಕ್ತಿಕ ಅಭಿಪ್ರಾಯಗಳು, ಜಾಹೀರಾತು ಮಾದರಿ ಲೇಖನಗಳು, ಕಥೆ, ಕವನ, ಕಾದಂಬರಿ, ಮಹಾಕಾವ್ಯ, ಜನಪದ ಕತೆ, ಗಾದೆ, ಒಗಟು, ಲಾವಣಿ, ಪಾಡ್ದನ, ಹೊಗಳಿಕೆ-ತೆಗಳಿಕೆ ಭಾಷೆ, ನಿಮ್ಮ ಬಗ್ಗೆ ಬರೆಯುವುದು, ಲೇಖನದಲ್ಲಿ ನಿಮ್ಮ ಹೆಸರು ಬರೆಯುವುದು ಮುಂತಾದವನ್ನು ವಿಕಿಪೀಡಿಯದಲ್ಲಿ ಸೇರಿಸುವಂತಿಲ್ಲ.

15)     ಉಪಯುಕ್ತತೆ : ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗೆಗೆ ಮಾತ್ರ ಇರಲಿ.  ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಭಾಷೆ, ಸಾಹಿತ್ಯ, ಚರಿತ್ರೆ ವಿಷಯಗಳ ಲೇಖನಗಳನ್ನು ಅತೀಅಗತ್ಯವಾಗಿ ಸೇರಿಸುವ ಕೆಲಸ ಆಗಬೇಕಿದೆ.  ಹೀಗೆ ಸೇರಿಸುವಾಗ ಇದೇ ವಿಷಯದಲ್ಲಿ ಬೇರೆ ಶೀರ್ಷಿಕೆಯಲ್ಲಿ ಲೇಖನಗಳಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ವಿಕಿಪೀಡಿಯ ಮಾಹಿತಿಗಳು ವಿಶ್ವಾಸಾರ್ಹವೇ?

ವಿಕಿಪೀಡಿಯದಲ್ಲಿನ ದಾಖಲೆಗಳು ಮತ್ತು ಮಾಹಿತಿಗಳು ಅವು ಸ್ವಯಂ ಪರಿಪೂರ್ಣವೆಂದು ಭಾವಿಸಬಾರದು.  ಅವುಗಳನ್ನು ನಿರಂತರವಾಗಿ ಪರಿಷ್ಕರಣೆ ಹಾಗೂ ಸುಧಾರಣೆಗೆ ಒಳಪಡಿಸಲಾಗುತ್ತಿರುತ್ತದೆ.  ಇದರಿಂದ ಕ್ರಮೇಣ ಅವುಗಳ ದರ್ಜೆ ಮತ್ತೆ ಗುಣಮಟ್ಟಗಳ ಮೌಲ್ಯವರ್ಧನೆಗೆ ಸಹಾಯವಾಗುತ್ತದೆ.  ವಿಕಿಪೀಡಿಯದ ಎಲ್ಲ ಮಾಹಿತಿಗಳೂ ಲೇಖನ ತಯಾರಿಯ ಪ್ರಾರಂಭದಲ್ಲಿಯೇ ಗುಣಮಟ್ಟದ ಮಾಹಿತಿಯೆಂದು ಬಳಕೆದಾರರು ಭಾವಿಸಬಾರದು.  ಕೆಲವು ಲೇಕನಗಳಲ್ಲಿ ಬರೆದ ವಾಕ್ಯಗಳು ಚರ್ಚಾಸ್ಪದ ವಿಷಯಗಳಾಗಿರುವ ಸಾಧ್ಯತೆಗಳಿವೆ.  ಕೆಲವು ವಾಕ್ಯಗಳು ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿನಿಧಿಸಬಹುದು.   ವಾದ ವಿವಾದಗಳು ಮತ್ತು ಚರ್ಚೆಗಳಿಂದ ಕೂಡಿದ ಸುದೀರ್ಘ ವೈಚಾರಿಕ ಪ್ರಕ್ರಿಯೆಯ ನಂತರವೇ ಒಂದು ಒಮ್ಮತದ ಮತ್ತು ಅಲಿಪ್ತ ದೃಷ್ಟಿಕೋನವನ್ನು ನಿರ್ಧರಿಸಲಾಗುವುದು.  ಅಲ್ಲದೆ ತಜ್ಞ ಪರಿಷ್ಕರಣಕಾರರು ಯಾವುದೇ ಒಂದು ಲೇಖನದ ವಿಷಯ ಅಥವಾ ವಿಧಾನಗಳ ಬಗೆಗೆ ಅಭಿಪ್ರಾಯ ಭೇದವನ್ನು ತೋರಿದರೆ ಅಂತಹ ಸಂದರ್ಭಗಳಲ್ಲಿ ಅವರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರಿಗೆ ನೆರವಾಗಲು ವಿಕಿಪೀಡಿಯ ಹಲವಾರು ಆಂತರಿಕ ವಿವಾದ ನಿವಾರಣಾ ಪ್ರಕ್ರಿಯೆಗಳನ್ನು ವ್ಯವಸ್ಥೆಗೊಳಿಸಿದೆ. ವಿಕಿಪೀಡಿಯಕ್ಕೆ ತಕ್ಕುದಲ್ಲದ ಲೇಖನಗಳನ್ನು ನಿರ್ವಾಹಕರು ಅಳಿಸುವ ಹಾಕುವ ಪ್ರಕ್ರಿಯೆಯೂ ವಿಕಿಪೀಡಿಯದಲ್ಲಿದೆ.

 

ವಿಕಿಪೀಡಿಯ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬಹುದೇ?

ವಿಕಿಪೀಡಿಯದಲ್ಲಿನ ಲೇಖನಗಳೂ ಕೆಲವು ಆದರ್ಶ ಲಕ್ಷಣಗಳನ್ನು ಹೊಂದಿರುತ್ತವೆ.  ಅವು ಉತ್ತಮ ಶಬ್ದ ಸಂಪತ್ತಿನಿಂದ ಕೂಡಿದ್ದು ಸಮತೋಲಿತ, ತಟಸ್ಥ ಹಾಗೂ ಮಾಹಿತಿಕೋಶ ದರ್ಜೆಯ ಮಾಹಿತಿಯನ್ನು ಹೊಂದರುತ್ತವೆ.  ಅಲ್ಲದೆ ಅವು ವ್ಯಾಪಕ ಪುರಾವೆಗಳನ್ನು ಒದಗಿಸಲು ಸಮರ್ಥವಾದ ದಾಖಲೆಗಳಾಗಿರುತ್ತವೆ.

ವಿಕಿಪೀಡಿಯದಲ್ಲಿ ಕಂಡು ಬರುವ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬೇಕಾದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ.  ಏಕೆಂದರೆ ಇಲ್ಲಿನ ಹಲವಾರು ಲೇಖನಗಳ ಮಾಹಿತಿಗಳು ಸ್ವಾಭಾವಿಕವಾಗಿ ತಮ್ಮ ಪ್ರಬುದ್ಧತೆ ಮತ್ತು ಬೌದ್ಧಿಕ ದರ್ಜೆಗಳಲ್ಲಿ ಗಣನೀಯ ಪ್ರಮಾಣದ ಏರುಪೇರುಗಳನ್ನು ತೋರಿಸಬಹುದು.  ಸಂಶೋಧಕರು ಈ ಬಗ್ಗೆ ಜಾಗೃತರಾಗುವಂತೆ ನೆರವಾಗಲು ಹಲವಾರು ಮಾರ್ಗಸೂಚಿಗಳು ಮತ್ತು ಸೂಚನಾ ಪುಟಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ವಿಕಿಪೀಡಿಯದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಪರಿಷ್ಕರಿಸಲು ಸಾಧ್ಯವಿರುವುದರಿಂದ ಕೆಲವು ತಪ್ಪು ಮಾಹಿತಿಗಳು ಸೇರ್ಪಡೆ ಆಗುವ ಹಾಗೂ ಆಗಿರುವ ಸಾಧ್ಯತೆಗಳೂ ಉಂಟು.  ಹಾಗಾಗಿ ಅಂತಹ ಮಾಹಿತಿಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

ಆಗಾಗ ತಲೆದೋರಬಹುದಾದ ದುರ್ಬಳಕೆ ಅಥವಾ ವಿವಾದಗಳನ್ನು ಪರಿಹರಿಸಲು ವಿಕಿಪೀಡಿಯ ಸಮೃದ್ಧವಾದ ವಿಧಾನಗಳನ್ನು ಹೊಂದಿದೆ.  ಆ ವಿಧಾನಗಳನ್ನು ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಅವುಗಳ ವಿಶ್ವಾಸಾರ್ಹತೆ ಅತಿ ಉನ್ನತಮಟ್ಟದ್ದಾಗಿದೆ.

ವಿಕಿಪೀಡಿಯಕ್ಕೆ ಸಮಗ್ರ ಮಾಹಿತಿ ಬಂದರೆ ಭಾಷೆ, ಜನಪದ ಸಂಸ್ಕೃತಿ, ಚರಿತ್ರೆ ಇತ್ಯಾದಿ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುವವರಿಗೆ ಹೆಚ್ಚು ಪ್ರಯೋಜನವಾಗಬಹುದು.

ಕನ್ನಡ ವಿಕಿಪೀಡಿಯ ಅಗತ್ಯವೇ?

ಕನ್ನಡ ವಿಕಿಪೀಡಿಯವು ಜೂನ್ ೨೦೦೩ರಂದು ಪ್ರಾರಂಭವಾಯಿತು.  ಭಾರತದ ೨೩ ಭಾಷೆಗಳಲ್ಲಿ ವಿಕಿಪೀಡಿಯವು ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ ಕನ್ನಡವೂ ಪ್ರಮುಖ ಭಾಷೆಯಾಗಿ ಗುರುತಿಸಿಕೊಂಡಿದೆ.  ಕನ್ನಡ ಭಾಷೆ ಉಳಿದು ಬೆಳೆಯಬೇಕಾದರೆ ಕನ್ನಡದಲ್ಲಿ ಜನರಿಗೆ ಅಗತ್ಯವಾದ ಪ್ರಪಂಚಜ್ಞಾನದ ಮಾಹಿತಿ ಲಭ್ಯವಿರಬೇಕು.  ಕನ್ನಡ ಭಾಷೆಯಲ್ಲಿ ಪ್ರಪಂಚಜ್ಞಾನವನ್ನು ಸುಲಭವಾಗಿ ತರಲು ಸಹಾಯ ಮಾಡುವುದು ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯ.  ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರಾಗಿರಬೇಕೆಂಬ ಕಟ್ಟಳೆಯಿಲ್ಲ.  ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ.  ಬೇರೆ ಬೇರೆ ದೇಶ-ಭಾಷೆಗಳ ಹಿನ್ನೆಲೆ ತಿಳಿದ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ.  ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ.  ನಿಮಗೆ ತಿಳಿದಷ್ಟನ್ನು ನೀವು ಸೇರಿಸಿ.  ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರೂ ಸೇರಿಸುತ್ತಾರೆ.

 

ಕನ್ನಡ ವಿಕಿಪೀಡಿಯ

೨೦೧೭ ಮೇ ತಿಂಗಳಲ್ಲಿ ಕನ್ನಡದ ವಿಕಿಪೀಡಿಯದಲ್ಲಿ ೨೧,೯೫೭ ಲೇಖನಗಳು ಇವೆ. ೯೬ ಮಂದಿ ಸಂಪಾದಕರು ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯವಾಗಿ ಸಂಪಾದಿಸುತ್ತಿದ್ದಾರೆ.  ಕನ್ನಡ ವಿಕಿಪೀಡಿಯಕ್ಕೆ ಈ ವರೆಗೆ ಲಾಗಿನ್ ಆದವರು ೩೭,೫೯೬.  ತಿಂಗಳಿಗೆ ಸುಮಾರು ೪,೬೧೨ರಷ್ಟು ಸಂಪಾದನೆಗಳು ಆಗುತ್ತಿವೆ.  ಸುಮಾರು ೧೧ ಲಕ್ಷ ಮಂದಿ ಪ್ರತಿ ತಿಂಗಳಿಗೆ ಕನ್ನಡ ವಿಕಿಪೀಡಿಯವನ್ನು ವೀಕ್ಷಿಸುತ್ತಿದ್ದಾರೆ.

 

ವಿಕಿಪೀಡಿಯಕ್ಕೆ ಲೇಖನವನ್ನು ಬರೆಯುವುದರಿಂದ, ಸಂಪಾದಿಸುವುದರಿಂದ ಏನು ಲಾಭ?

ಭಾಷಾಭಿಮಾನಿಗಳು ಯಾವುದೇ ಲಾಭದ ಆಕಾಂಕ್ಷಿಗಳಾಗಿರಬಾರದು.  ಕನ್ನಡ ವಿಕಿಪೀಡಿಯದಲ್ಲಿ ಬರೆಯುವ ಲೇಖಕರಿಗೆ ಆರ್ಥಿಕ ಲಾಭವೇನೂ ಇಲ್ಲ.  ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ.  ವಿಕಿಪೀಡಿಯದಲ್ಲಿ ಬರೆಯುವವರು ನಿಜವಾದ ಸ್ವಾರ್ಥರಹಿತ ಸಮಾಜಸೇವಕರಾಗುತ್ತಾರೆ.  ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ವಿಕಿಪೀಡಿಯದಲ್ಲಿ ಲೇಖನ ಬರೆಯುವುದು ಅತೀ ಅಗತ್ಯ.

 

ವಿಕಿಪೀಡಿಯದಲ್ಲಿ ಲೇಖನ ಬರೆಯುವುದರಿಂದ ವಿದ್ಯಾರ್ಥಿಗಳ ಭಾಷಾ ಕೌಶಲ್ಯ, ಬರವಣಿಗೆ ಕ್ರಮ, ಸ್ಥಳೀಯ ಸಂಸ್ಕೃತಿಗಳ ತಿಳುವಳಿಕೆ, ಸಂಶೋಧನ ಪ್ರವೃತ್ತಿ, ಚಿಂತನಕ್ರಮಗಳ ಗುಣಮಟ್ಟವನ್ನು ಹೆಚ್ಚಿಸಬಹುದು.

ನಿಮ್ಮ ಬರವಣಿಗೆಯ ಶೈಲಿಯನ್ನು ಉತ್ತಮ ಪಡಿಸಿಕೊಳ್ಳಬಹುದು, ನಿಮ್ಮ ವಿಮರ್ಶಾತ್ಮಕ ಆಲೋಚನೆಯನ್ನು ತೀಕ್ಷ್ಣಗೊಳಿಸಬಹುದು, ನಿಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಲು, ಸಹಕಾರದೊಂದಿಗೆ ಕೆಲಸ ಮಾಡುವುದನ್ನು ಕಲಿಯಲು, ನಿಮ್ಮ ಬರವಣಿಗೆಯನ್ನು ವಿಶ್ವವ್ಯಾಪಿ ಹಂಚಿ ಓದುಗರನ್ನು ಪಡೆಯಲು, ನಿಮ್ಮ ಸಂಶೋಧನಾ ಕೌಶಲವನ್ನು ಉತ್ತಮಗೊಳಿಸಲು ಮತ್ತು ನಿಮ್ಮ ವೈಯಕ್ತಿಕ ಮಾಹಿತಿ (resume)  ಯನ್ನು ಬರೆದುಕೊಳ್ಳಲು ವಿಕಿಪೀಡಿಯ ಸಹಕಾರಿ.

ವಿದ್ಯಾರ್ಥಿಗಳಲ್ಲಿ ಕನ್ನಡ ಟೈಪಿಂಗ್ ಮತ್ತು ಕಂಪ್ಯೂಟರ್ ತಿಳುವಳಿಕೆಯನ್ನು ಹೆಚ್ಚಿಸಬಹುದು.  ಕನ್ನಡ ನುಡಿ, ಬರಹ, ಲಿಪ್ಯಂತರ ಇತ್ಯಾದಿ ತಂತ್ರಾಂಶಗಳನ್ನು ಬಳಸಿ ಸುಲಭವಾಗಿ ಟೈಪ್ ಮಾಡಲು ಅಭ್ಯಾಸವಾಗುವುದು.

ವಿದ್ಯಾರ್ಥಿಗಳಿಗೆ ಅನ್ಯಭಾಷೆಯಿಂದ ಕನ್ನಡಕ್ಕೆ ಅನುವಾದಿಸುವ ಕಾರ್ಯ ಸುಲಭವಾಗಿ ತಿಳಿಯುವುದು.

ಕನ್ನಡವನ್ನು ಜಾಗತಿಕ ಭಾಷೆಯಾಗಿ ಕೊಂಡೊಯ್ಯುವ ಪ್ರಯತ್ನ ಮಾಡಬಹದು.

ಕನ್ನಡ ಭಾಷೆಯಲ್ಲಿ ಜ್ಞಾನಸಾಹಿತ್ಯ ಸೃಷ್ಟಿಮಾಡುವ ಮೂಲಕ ಕನ್ನಡ ಭಾಷೆ ಬೆಳೆಯಲು ಸಹಾಯವಾಗುವುದು.

ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಆಚರಿಸಲು ಮತ್ತು ರಕ್ಷಿಸಲು, ಬರೆಯಲು, ವಿಷಯಾಸಕ್ತಿಗಾಗಿ, ಸಹಕಾರ ಮನೋಭಾವಕ್ಕಾಗಿ (collaborate) ಸಂಪಾದಿಸುತ್ತಾರೆ.

ವಿಕಿಪೀಡಿಯದ ಖಾತೆ ತೆರೆದು ಲೇಖನ ಬರೆಯುವುದು ಹೇಗೆ?

ಕನ್ನಡ ವಿಕಿಪೀಡಿಯ ಸಂಪಾದಕರಾಗುವುದು ತುಂಬ ಸುಲಭ. kn.wikipedia.org ಜಾಲತಾಣವನ್ನು ತೆರೆದು ಹೊಸ  ಖಾತೆ ತೆರೆಯಿರಿ.

 

ಸಹಾಯ ಪುಟಕ್ಕೆ ಭೇಟಿ ನೀಡಿ.  ಅಲಲ್ಲಿ ಕೊಂಡಿ ನೀಡಿರುವ ಟ್ಯುಟೊರಿಯಲ್ ಕಡತ ಮತ್ತು ವೀಡಿಯೋಗಳನ್ನ ವೀಕ್ಷಿಸಿ.  ಪ್ರಯೋಗಪುಟದಲ್ಲಿ ಲೇಖನ ಬರೆಯುವುದನ್ನು ಅಭ್ಯಾಸ ಮಾಡಿ, ಸಹಾಯ ಪುಟವನ್ನು ನೋಡಿ, ಅಲ್ಲಿ ನೀಡಿರುವ ಟ್ಯುಟೋರಿಯಲ್ ವೀಡಿಯೋ ನೋಡಿ, ಈಗಾಗಲೇ ರಚನೆಯಾಗಿರುವ ಲೇಖನಗಳ ವ್ಯಾಕರಣ ತಿದ್ದುಪಡಿ,  ಸಂಪಾದಿಸಿ, ವಿಷಯ ಸೇರ್ಪಡೆ ಮತ್ತು ಶೈಲಿ ಬದಲಾವಣೆ ಮಾಡಲು ಪ್ರಯತ್ನಿಸಿ.  ಬರೆಯಬೇಕೆಂದಿರುವ ಲೇಖನವನ್ನು ಬೇರೆ ಬೇರೆ ವಿಧಾನದಲ್ಲಿ ಹುಡುಕಿ.  ಉದಾ: ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಕೆ.ವಿ.ಪುಟ್ಟಪ್ಪ ಹೀಗೆ ಒಂದೇ ವಿಷಯಕ್ಕೆ ಸಂಬಂಧಿಸಿದ ಹಲವು ಲೇಖನಗಳು ತಯಾರಾಗದಂತೆ ಜಾಗ್ರತೆವಹಿಸಿ.  ಹೊಸ ಲೇಖನಗಳನ್ನು ಸೃಷ್ಟಿ ಮಾಡಿ.  ಸಾಧ್ಯವಾದರೆ ಫೇಸ್‌ಬುಕ್‌ನಲ್ಲಿ ಕನ್ನಡ ವಿಕಿಪೀಡಿಯ ಗುಂಪಿಗೆ ಸೇರಿಕೊಂಡು ಜಗತ್ತಿನಾದ್ಯಂತ ವಿಕಿಪೀಡಿಯ ಸಮುದಾಯದ ಸದಸ್ಯರೊಂದಿಗೆ ಸಂಪರ್ಕವನ್ನು ಬೆಳೆಸಿಕೊಳ್ಳಿ.  ನೀವು ಬರೆಯುತ್ತಿರುವುದನ್ನು ನಿಮ್ಮ ಬ್ಲಾಗಿನಲ್ಲಿ ಬರೆದು ಸುದ್ದಿ ಮಾಡಿ.

 

ಕಾಲೇಜುಗಳಲ್ಲಿ ‘ವಿಕಿಪೀಡಿಯ ಶೈಕ್ಷಣಿಕ ಯೋಜನೆ’ ಆರಂಭಿಸುವುದು ಹೇಗೆ?

ಪದವಿ ವಿದ್ಯಾರ್ಥಿಗಳು WEP ಎಂಬ ಯೋಜನೆಯನ್ನು ಕಾಲೇಜುಗಳಲ್ಲಿ ಅಳವಡಿಸಿಕೊಳ್ಳಬಹುದು. WEP ಎಂದರೆ ವಿಕಿಪೀಡಿಯ ಶಿಕ್ಷಣ ಯೋಜನೆ (Wikipedia Education Program).  ಪದವಿ ಕಾಲೇಜುಗಳು ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗುವುದರಿಂದ ಈ ಯೋಜನೆಯನ್ನು ರೂಪಿಸಿಕೊಳ್ಳಬಹುದು.

ಈ ಯೋಜನೆ ಪರಿಣಾಮಕಾರಿ ಆಗಬೇಕಾದರೆ ಈ ಕೆಳಗಿನ ಕೆಲವು ಅಂಶಗಳನ್ನು ಬಳಕೆಗೆ ತರಬಹುದು.

ಕಾಲೇಜಿನಲ್ಲಿ ವಿಕಿಪೀಡಿಯ ಸಂಘವೊಂದನ್ನು ರಚಿಸುವುದು.

ಸಂಘವು ಪ್ರತೀ ಸೆಮಿಸ್ಟರ್‌ಗೆ ೫೦ ಅಂಕಗಳ ವ್ಯವಸ್ಥೆ ಹೊಂದಿರುವುದರಿಂದ ಕಾಲೇಜಿನ ಒಬ್ಬ ಪ್ರಾಧ್ಯಾಪಕರು ಮತ್ತು ಕಂಪ್ಯೂಟರ್ ಲಾಬ್‌ನ್ನು ಕಾಲೇಜು ಒದಗಿಸಕೊಡಬೇಕಾಗುತ್ತದೆ.

ಸಂಘಕ್ಕೆ ಸೇರಿದ ಪ್ರತಿಯೊಬ್ಬರೂ ವಿಕಿಪೀಡಿಯಕ್ಕೆ ಲಾಗಿನ್ ಆಗುವುದು.

ಒಟ್ಟು ನಾಲ್ಕು ಸೆಮಿಸ್ಟರ್‌ಗಳಲ್ಲ್ಲಿ ಸಂಘದ ಕಾರ್ಯಚಟುವಟಿಕ ಇರುವುದರಿಂದ ವಿದ್ಯಾರ್ಥಿಗಳಿಗೆ ವಿಕಿಪೀಡಿಯದಲ್ಲಿ ಲೇಖನ ಬರೆಯುವ ಬೇರೆ ಬೇರೆ ಕಾರ್ಯಾಗಾರಗಳನ್ನು ನಡೆಸಿ ಮಾಹಿತಿ ನೀಡಬಹುದು.

ವಿದ್ಯಾರ್ಥಿಗಳು ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್, ಹಿಂದಿ ಇತ್ಯಾದಿ ಭಾಷೆಗಳಲ್ಲಿ ಲೇಖನಗಳನ್ನು ಬರೆಯಬಹುದು.

ಲಾಗಿನ್ ಆದ ಸಂಘದ ವಿದ್ಯಾರ್ಥಿಗಳಿಗೆ ಎರಡು ವಿಕಿಪೀಡಿಯ ಸರ್ಟಿಫಿಕೇಟ್ ಕೋರ್ಸ್ ತಯಾರಿಸಬಹುದು.

ವಿಕಿಪೀಡಿಯ ಚಟುವಟಿಕೆಯನ್ನು ಆರಂಭಿಸಲು ಕರಾವಳಿ ವಿಕಿಮೀಡಿಯನ್ಸ್ ಮಂಗಳೂರು ಮತ್ತು ದಿ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ, ಬೆಂಗಳೂರು ಈ ಎರಡು ಸಂಘಟನೆಗಳ ಸಹಾಯವನ್ನು ಪಡೆಯಬಹುದು.

 

(ಮೇ ೨೦೧೭ರ ವರೆಗಿನ ವಿಕಿಪೀಡಿಯ ಮಾಹಿತಿ ಆಧರಿಸಿ)

 

(ಮಂಗಳೂರು ವಿಶ್ವ ವಿದ್ಯಾಲಯದ ಡಿಗ್ರಿ ಕನ್ನಡ ಪಠ್ಯ ಪುಸ್ತಕ “ನುಡಿನಡೆ“ಯ ಒಂದು ಅಧ್ಯಾಯ)

 

ರಚನೆ:

-ಡಾ. ವಿಶ್ವನಾಥ ಬದಿಕಾನ,

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ,

ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು-೦೩

 

 


ತುಳು ವಿಕಿಪೀಡಿಯ ಈಗ ಸಿದ್ಧ
Source:  Vishva Kannada
Thursday, 08 December 2016 20:17

– ಡಾ. ಯು. ಬಿ. ಪವನಜ

ತುಳು ಭಾಷೆಗೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಬಹುಮಟ್ಟಿಗೆ ಬಾಯಿಮಾತಿನ ಭಾಷೆಯಾಗಿಯೇ ಉಳಿದು ಬೆಳೆದು ಬಂದಿದೆ. ತುಳು ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿ ಅಡಕವಾಗಿದೆ. ತುಳು ಭಾಷೆಯಲ್ಲಿ ಹಳೆಯ ಪಾಡ್ದನ ಮತ್ತು ಇತರೆ ಸಾಹಿತ್ಯಗಳಲ್ಲದೆ ಆಧುನಿಕ ಕಥೆ, ಕವನ, ಕಾದಂಬರಿ, ನಾಟಕ ಇತ್ಯಾದಿ ಕಥನ ಸಾಹಿತ್ಯವೂ ಬೇಕಾದಷ್ಟು ಸೃಷ್ಠಿಯಾಗಿದೆ. ತುಳು ಭಾಷೆಯಲ್ಲಿ ನಾಟಕ ಪ್ರದರ್ಶನ ಮತ್ತು ಚಲನಚಿತ್ರಗಳೂ ಆಗುತ್ತಿವೆ. ತುಳುನಾಡು ಮತ್ತು ತುಳು ಭಾಷೆಯ ಬಗ್ಗೆ ಹಲವಾರು ಸಂಶೋಧನೆಗಳು ಆಗಿವೆ ಮಾತ್ರವಲ್ಲ ಅವುಗಳು ಪುಸ್ತಕರೂಪದಲ್ಲೂ ಲಭ್ಯವಿವೆ. ಆದರೆ ಒಂದು ದೊಡ್ಡ ಕೊರತೆ ಎಂದರೆ ತುಳು ಭಾಷೆಯಲ್ಲಿ ಯಾವುದೇ ವಿಶ್ವಕೋಶ ತಯಾರಾಗಿಲ್ಲ. ಅಷ್ಟು ಮಾತ್ರವಲ್ಲ ವಿಶ್ವಕೋಶ ಶೈಲಿಯ ಮಾಹಿತಿ ಸಾಹಿತ್ಯ ವರ್ಗದ ಪುಸ್ತಕಗಳ ಸಂಖ್ಯೆ ತುಳು ಭಾಷೆಯಲ್ಲಿ ಅತಿ ಕಡಿಮೆ.

ಒಂದು ಭಾಷೆ ಉಳಿದು ಬೆಳೆಯಬೇಕಾದರೆ ಅದನ್ನು ಜನರು ಬಳಸುವುದು ಅತೀ ಮುಖ್ಯ. ಜನರು ಭಾಷೆಯನ್ನು ಬಳಸಬೇಕಾದರೆ ಅವರಿಗೆ ಆ ಭಾಷೆಯಲ್ಲಿ ದಿನನಿತ್ಯದ ವ್ಯವಹಾರಕ್ಕೆ ಅತೀ ಅಗತ್ಯವಾದ ಮಾಹಿತಿ ದೊರೆಯುವುದೂ ಅಷ್ಟೇ ಮುಖ್ಯವಾಗುತ್ತದೆ. ಈ ಮಾಹಿತಿ ವಿಜ್ಞಾನ, ತಂತ್ರಜ್ಞಾನ, ಕಾನೂನು, ವೈದ್ಯಕೀಯ, ಕೃಷಿ, ಸಂಗೀತ, ಧಾರ್ಮಿಕ, ಇತ್ಯಾದಿ ಯಾವುದೇ ಆಗಿರಬಹುದು. ಸರಳವಾಗಿ ಹೇಳಬೇಕಾದರೆ ಮಾಹಿತಿ ಸಾಹಿತ್ಯದ ಅಗತ್ಯ ಇದೆ. ತುಳು ಭಾಷೆಯಲ್ಲಿ ಇಂತಹ ಸಾಹಿತ್ಯ ಇಲ್ಲವೇ ಇಲ್ಲ.

ಇನ್ನೂ ಒಂದು ವಿಷಯದ ಕಡೆ ಗಮನ ಹರಿಸೋಣ. ತುಳುನಾಡಿನ ಶಾಲೆಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಸೇರಿಸಿದ್ದಾರೆ. ಈ ಭಾಷೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಓದಲು ಪಠ್ಯಪುಸ್ತಕದ ಹೊರತಾಗಿ ಏನಿದೆ? ಕೆಲವು ಕಥೆ, ಕಾದಂಬರಿ, ಕವನ ಸಂಕಲನಗಳಿವೆ ಎಂದು ಕೆಲವರು ಹೇಳಬಹುದು. ಆದರೆ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಸಾಹಿತ್ಯ ಎಷ್ಟಿದೆ? ಎಲ್ಲಕ್ಕಿಂತ ಮುಖ್ಯವಾಗಿ ಅವರ ಪಠ್ಯದಲ್ಲಿ ಇರುವ ವಿಷಯಗಳಿಗೆ ಪೂರಕವಾಗಿ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅವರು ಏನನ್ನು ಓದಬೇಕು? ಅಂತಹ ವಿಷಯಗಳು ತುಳು ಭಾಷೆಯಲ್ಲಿ ಓದಲು ಲಭ್ಯವಿದೆಯೇ? ಉತ್ತರ ನಿರಾಶಾದಾಯಕವಾಗಿದೆ.

ಇಷ್ಟು ಪೀಠಿಕೆಯಿಂದ ಒಂದು ಅಂಶವನ್ನು ನಾವು ಸಾಬೀತುಪಡಿಸಿದಂತಾಯಿತು. ಅದೆಂದರೆ ತುಳು ಭಾಷೆಯಲ್ಲಿ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಪುಸ್ತಕ ಅತೀ ಅಗತ್ಯವಿದೆ ಎಂದು. ಪುಸ್ತಕ ತಯಾರಿಸಿ ಮುದ್ರಿಸಿ ಹಂಚಿದರೂ ಅವು ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯವಾಗುವುದಿಲ್ಲ. ಮಾತ್ರವಲ್ಲ ಈಗಿನ ಮಾಹಿತಿಯುಗದಲ್ಲಿ ಎಲ್ಲವೂ ಅತೀ ವೇಗದಲ್ಲಿ ಬೆಳೆಯುತ್ತಿರುವಾಗ ಈ ಪುಸ್ತಗಳು ಅಷ್ಟೇ ವೇಗದಲ್ಲಿ ಹೊಸಹೊಸ ವಿಷಯಗಳನ್ನು ತುಂಬಿಕೊಂಡು ನಿಜಸಮಯದಲ್ಲಿ ನವೀಕರಣಗೊಳ್ಳುವುದು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ  ಈ ವಿಶ್ವಕೋಶ ಅಥವಾ ವಿಶ್ವಕೋಶ ಶೈಲಿಯ ಮಾಹಿತಿಕೋಶ ಅಂತರಜಾಲದಲ್ಲಿರಬೇಕು ಎಂಬುದು. ಈಗ ಹಳ್ಳಿಹಳ್ಳಿಗಳಲ್ಲೂ ಅಂತರಜಾಲ ಎಲ್ಲರಿಗೂ ಲಭ್ಯವಿದೆ. ಕಡಿಮೆ ಬೆಲೆಗೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳ ಮೂಲಕವೂ ಅಂತರಜಾಲ ವೀಕ್ಷಣೆ ಮಾಡಬಹುದು ಮತ್ತು ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದು. ಹಾಗಿರುವಾಗ ಅಂತರಜಾಲದಲ್ಲಿ ತುಳು ವಿಶ್ವಕೋಶವೊಂದನ್ನು ತಯಾರಿಸುವುದು ಅತೀ ಅಗತ್ಯವಾಗಿದೆ.

ಅಂತರಜಾಲದಲ್ಲಿ ಎಲ್ಲ ಕಾಲಕ್ಕೂ ಎಲ್ಲರಿಗೂ ಲಭ್ಯವಿರುವ ಮಾತ್ರವಲ್ಲ ಎಲ್ಲರೂ ಯಾವುದೇ ನಿರ್ಬಂಧವಿಲ್ಲದೆ ಸಂಪಾದಿಸಬಹುದಾದ ಸ್ವತಂತ್ರ ವಿಶ್ವಕೋಶ ವಿಕಿಪೀಡಿಯ. ಜಗತ್ತಿನ ೨೯೪ ಭಾಷೆಗಳಲ್ಲಿರುವ ವಿಕಿಪೀಡಿಯ ೨೦೦೧ರಲ್ಲಿ ಪ್ರಾರಂಭವಾಯಿತು.

ವಿಕಿಪೀಡಿಯವು ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಸಂಪಾದಕರಾಗಿ ಲೇಖನ ಸೇರಿಸಬಹುದು, ಇರುವ ಲೇಖನ ತಿದ್ದಬಹುದು. ಇನ್ನೊಬ್ಬರು ಬರೆದ ಲೇಖನದಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ಅಥವಾ ಮಾಹಿತಿಯ ಕೊರತೆ ಇದ್ದಲ್ಲಿ ಆ ಮಾಹಿತಿ ನಿಮ್ಮಲ್ಲಿ ಇದ್ದಲ್ಲಿ ಅದನ್ನು ನೀವೇ ತಿದ್ದಬಹುದು ಮತ್ತು ಹೆಚ್ಚಿನ ಮಾಹಿತಿ ಸೇರಿಸಬಹುದು. ನಿಮಗೆ ಒಂದು ವಿಷಯದ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಆ ವಿಷಯದ ಬಗ್ಗೆ ವಿಕಿಪೀಡಿಯದಲ್ಲಿ ಲೇಖನ ಇಲ್ಲ ಎಂದಾದಲ್ಲಿ ಆ ಬಗ್ಗೆ ಒಂದು ಹೊಸ ಲೇಖನವನ್ನು ನೀವೇ ಸೇರಿಸಬಹುದು. ನಿಮ್ಮ ಲೇಖನ ಯಾರೋ ಒಬ್ಬರು ಒಪ್ಪಿದ ನಂತರ ಅದು ಪ್ರಕಟವಾಗುವ ಪರಿಪಾಠ ಇಲ್ಲಿಲ್ಲ.

ವಿಕಿಪೀಡಿಯ ಲಾಭೋದ್ದೇಶರಹಿತ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಸರಕಾರಿ ಸಂಸ್ಥೆಯಲ್ಲ, ಸರಕಾರದಿಂದ ಯಾವುದೇ ರೀತಿಯ ಅನುದಾನವನ್ನು ಪಡೆಯುತ್ತಿಲ್ಲ. ಈ ಯೋಜನೆಗೆ ಆವಶ್ಯಕವಾದ ಬಂಡವಾಳವನ್ನು ವಿಕಿಪೀಡಿಯದ ಸಾಮಾನ್ಯ ಬಳಕೆದಾರರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗಿದೆ. ವಿಕಿಪೀಡಿಯ ನಡೆಸಲು ನೀವೂ ಧನಸಹಾಯ ನೀಡಬಹುದು. ಇಂದು ವಿಕಿಪೀಡಿಯ ಇಷ್ಟು ಜನಪ್ರಿಯವಾಗಿರುವ ಕಾರಣ ಕೆಲವು ಸರಕಾರಿ ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಕೂಡ ಧನ ಸಹಾಯ ನೀಡಲು ಮುಂದಾಗಿವೆ.

ವಿಕಿಪೀಡಿಯದಲ್ಲಿ ಮಾಹಿತಿಯನ್ನು ಸೇರಿಸುವುದಕ್ಕೆ ನಾವು ತಜ್ಞರು ಆಗಿರಬೇಕು ಎನ್ನುವ ಒಂದು ತಪ್ಪು ಕಲ್ಪನೆ ತುಂಬ ಜನರಲ್ಲಿದೆ. ಇದು ಸರಿಯಲ್ಲ. ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರು ಆಗಿರಬೇಕು ಎಂಬ ಕಟ್ಟಳೆಯಿಲ್ಲ. ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ. ಬೇರೆ ಬೇರೆ ದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ನಿಮಗೆ ತಿಳಿದಷ್ಟು ನೀವು ಸೇರಿಸಿ. ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರು ಸೇರಿಸುತ್ತಾರೆ.

ವಿಕಿಪೀಡಿಯದಲ್ಲಿ ಬರೆಯುವುದರಿಂದ ಯಾವುದೇ ಆರ್ಥಿಕ ಲಾಭವಿಲ್ಲ. ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ. ವಿಕಿಪೀಡಿಯದಲ್ಲಿ ಬರೆಯುವುದೆಂದರೆ ನಿಜವಾದ ಸ್ವಾರ್ಥರಹಿತ ಸಮಾಜಸೇವೆ. ನಮ್ಮ ಭಾಷೆಯ ಉಳಿವಿಗೆ ಇದು ಅತೀ ಅಗತ್ಯ.

ತುಳು ವಿಕಿಪೀಡಿಯ ಆಗಸ್ಟ್ ೫, ೨೦೧೬ರ ತನಕ ಶೈಶವಾವಸ್ಥೆಯಲ್ಲಿತ್ತು (incubator). ೨೦೦೭ರಲ್ಲಿ ಕೆಲವು ಆಸಕ್ತರ ಉತ್ಸಾಹದಿಂದ ತುಳು ವಿಕಿಪೀಡಿಯ ಪ್ರಾರಂಭವಾಯಿತು. ೨೦೦೭-೦೮ರ ಅವಧಿಯಲ್ಲಿ ತುಳು ವಿಕಿಪೀಡಿಯ ಸ್ವಲ್ಪ ಚಟುವಟಿಕೆಯಿಂದ ಕೂಡಿತ್ತು. ನಂತರ ಜನರ ಉತ್ಸಾಹ ಕಡಿಮೆಯಾಗಿ ಚಟುವಟಿಕೆ ಬಹುಮಟ್ಟಿಗೆ ನಿಂತೇ ಹೋಯಿತು. ೨೦೧೩ರ ಆಳ್ವಾಸ್ ವಿಶ್ವನುಡಿಸಿರಿಯ ಅಧ್ಯಕ್ಷೀಯ ಭಾಷಣದಲ್ಲಿ ಡಾ. ವಿವೇಕ ರೈಯವರು  ತುಳು ವಿಕಿಪೀಡಿಯವನ್ನು ಜೀವಂತವಾಗಿಸುವ ಅಗತ್ಯವನ್ನು ಒತ್ತಿ ಹೇಳಿದರು. ಜನವರಿ ೨೦೧೪ರಲ್ಲಿ ಮಂಗಳೂರಿನಲ್ಲಿ ಡಾ. ವಿವೇಕ ರೈ, ಡಾ. ಎ.ವಿ. ನಾವಡ ಮತ್ತು ಇತರೆ ಉತ್ಸಾಹಿಗಳು ಸಭೆ ಸೇರಿ ತುಳು ವಿಕಿಪೀಡಿಯವನ್ನು ಜೀವಂತಗೊಳಿಸುವ ಬಗ್ಗೆ ಎಲ್ಲರೂ ಕ್ರಿಯಾಶೀಲರಾಗಬೇಕು ಎಂದು ತೀರ್ಮಾನಿಸಲಾಯಿತು. ಜನವರಿ ೨೦೧೪ರಲ್ಲಿ ತುಳು ವಿಕಿಪೀಡಿಯದಲ್ಲಿ ೧೩೫ ಲೇಖನಗಳಿದ್ದವು. ನಂತರ ಮಂಗಳೂರು ಮತ್ತು ಉಡುಪಿಗಳಲ್ಲಿ ತುಳು ವಿಕಿಪೀಡಿಯಕ್ಕೆ ಲೇಖನ ಸೇರಿಸುವ ಸಂಪಾದನೋತ್ಸವಗಳು ಜರುಗಿದವು.

ಡಿಸೆಂಬರ್ ೨೦೧೪ರಲ್ಲಿ ಮಂಗಳೂರಿನಲ್ಲಿ ಜರುಗಿದ ವಿಶ್ವ ತುಳುವೆರೆ ಪರ್ಬೊದಲ್ಲಿ ತುಳು ವಿಕಿಪೀಡಿಯದ ಪ್ರಾತ್ಯಕ್ಷಿಕೆ ಮತ್ತು ಆಸಕ್ತರನ್ನು ಅಲ್ಲಿಯೇ ಸಂಪಾದಕರನ್ನಾಗಿಸುವ ಕೆಲಸಗಳು ನಡೆದವು. ಅದೇ ಸಮ್ಮೇಳನದಲ್ಲಿ ಡಾ. ಯು.ಬಿ. ಪವನಜ ಅವರು ತುಳು ಯುನಿಕೋಡ್ ಮತ್ತು ತುಳು ವಿಕಿಪೀಡಿಯ ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಭಾಷಣ ನೀಡಿದರು. ಮಂಗಳೂರು ಮತ್ತು ಉಡುಪಿಯಲ್ಲಿ ಹಲವು ಕಾರ್ಯಾಗಾರ ಮತ್ತು ಸಂಪಾದನೋತ್ಸವಗಳು ಜರುಗಿದವು. ಈ ಕೆಲಸದಲ್ಲಿ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ರಾಮಕೃಷ್ಣ ಪಿ.ಯು. ಕಾಲೇಜು, ಕರ್ನಾಟಕ ಥಿಯೋಲೋಜಿಕಲ್ ಕಾಲೇಜು ಉಡುಪಿಯ ಎಂ.ಜಿ.ಎಂ. ಕಾಲೇಜು, ಇತ್ಯಾದಿ ಸಂಘ ಸಂಸ್ಥೆಗಳು ಸಹಯೋಗ ನೀಡಿದವು. ಇವೆಲ್ಲವುಗಳ ಫಲಿತಾಂಶವಾಗಿ ತುಳು ವಿಕಿಪೀಡಿಯ ಸಮುದಾಯ ಸೃಷ್ಟಿಯಾಯಿತು. ಈ ಸಮುದಾಯದವರ ನಿರಂತರ ಕೆಲಸದಿಂದಾಗಿ ತುಳು ವಿಕಿಪೀಡಿಯದಲ್ಲಿ ಸುಮಾರು ೧೧೦೦ ಲೇಖನಗಳು ಸೇರಿದವು. ಕೆಲವು ಹೆಸರುಗಳನ್ನು ಉಲ್ಲೇಖಿಸುವುದಾದರೆ ತುಳು ವಿಕಿಪೀಡಿಯಕ್ಕೆ ಅತ್ಯಂತ ಹೆಚ್ಚು ಲೇಖನ ಸೇರಿಸಿದವರು ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಡಾ. ವಿಶ್ವನಾಥ ಬದಿಕಾನ ಮತ್ತು ಎರಡನೆ ಅತಿ ಹೆಚ್ಚಿನ ಸಂಪಾದನೆ ಮಾಡಿದ ಭರತೇಶ ಅಳಸಂಡೆಮಜಲು. ಇವರ ಜೊತೆ ಇನ್ನೂ ಕೆಲವು ಪ್ರಮುಖ ಸಂಪಾದಕರು –ಡಾ. ಬೆನೆಟ್ ಅಮಣ್ಣ, ಡಾ. ಕಿಶೋರ್ ಕುಮಾರ್ ರೈ, ವಸಂತ ಎಸ್. ಎನ್., ಲೋಕೇಶ್ ಕುಂಚಡ್ಕ.

ಈ ಎಲ್ಲ ಪ್ರಯತ್ನಗಳ ಫಲವಾಗಿ ಆಗಸ್ಟ್ ೬, ೨೦೧೬ ರಂದು ತುಳು ವಿಕಿಪೀಡಿಯ incubatorನಿಂದ ಹೊರಬಂದು ಜೀವಂತವಾಯಿತು. ತುಳು ವಿಕಿಪೀಡಿಯವನ್ನು http://tcy.wikipedia.org ಜಾಲತಾಣದ ಮೂಲಕ ನೋಡಬಹುದು.

ಚಂಡಿಘಡದಲ್ಲಿ ನಡೆದ (ಆಗಸ್ಟ್ 5-8, 2016) ವಿಕಿಕಾನ್ಫೆರೆನ್ಸ್ ಇಂಡಿಯಾದಲ್ಲಿ ವಿಕಿಮೀಡಿಯ ಫೌಂಡೇಶನ್‌ನ ಎಕ್ಸೆಕ್ಯೂಟಿವ್ ಡೈರೆಕ್ಟರ್ ಕ್ಯಾಥೆರಿನ್ ಮಹೆರ್ ಅವರು ತಮ್ಮ ಆಶಯ ಭಾಷಣದಲ್ಲಿ ತುಳು ವಿಕಿಪೀಡಿಯ ಜೀವಂತವಾಗಿರುವುದನ್ನು ಘೋಷಿಸಿದರು. ಜೊತೆಗೆ ಅದೇ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ, ತುಳು ವಿಕಿಪೀಡಿಯಕ್ಕೆ ಅತ್ಯಂತ ಹೆಚ್ಚು ಕಾಣಿಕೆ ನೀಡಿದ ಡಾ. ವಿಶ್ವನಾಥ ಬದಿಕಾನ ಮತ್ತು ಭರತೇಶ ಅವರನ್ನು ಅಭಿನಂದಿಸಿದರು.

tulu-wiki-katherine-and-others

 

ತುಳು ವಿಕಿಪೀಡಿಯವನ್ನು ಜೀವಂತ ಮಾಡುವ ಮೂಲಕ ನಾವು ಇನ್ನೂ ಒಂದೆರಡು ಕೆಲಸ ಮಾಡಬಹುದಾಗಿದೆ. ತುಳು ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿಸೇರಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬಹುದು. ತುಳು ವಿಕಿಪೀಡಿಯ ಕೂಡ ಇದೆ, ಹಾಗಿರುವಾಗ ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಯಾಕಿಲ್ಲ ಎಂದು ಒತ್ತಾಯಪೂರ್ವಕ ಕೇಳಬಹುದು.  ಗಣಕಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಬಳಸುವ ಜಾಗತಿಕ ಸಂಕೇತೀಕರಣ ವ್ಯವಸ್ಥೆ ಯುನಿಕೋಡ್. ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಇನ್ನೂ ಸೇರಿಸಿಲ್ಲ. ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಸೇರಿಸುವುದರಿಂದ ಗಣಕಗಳಿಗೆ ಅದು ಅರ್ಥವಾಗುತ್ತದೆ. ಇದರಿಂದ ಮಾಹಿತಿಯ ಹುಡುಕುವಿಕೆ ಸಾಧ್ಯವಾಗುತ್ತದೆ. ಅಂತರಜಾಲದಲ್ಲಿ ತುಳುವಿನಲ್ಲೇ ಮಾಹಿತಿ ಹುಡುಕಬಹುದು. ದೃಷ್ಟಿಶಕ್ತಿವಂಚಿತರು ಪಠ್ಯದಿಂದ ಧ್ವನಿಗೆ (text-to-speech) ಬದಲಿಸುವ ತಂತ್ರಾಂಶವನ್ನು ಬಳಸಿ ತುಳು ಪಠ್ಯವನ್ನು ಓದಬಹುದು. ತುಳು ವಿಕಿಪೀಡಿಯವನ್ನು ಜೀವಂತ ಮಾಡುವ ಮೂಲಕ ಯುನಿಕೋಡ್‌ನಲ್ಲಿ ತುಳು ಭಾಷೆಯನ್ನು ಸೇರಿಸಲು ಕೋರಿಕೆ ಸಲ್ಲಿಸಬಹುದು.

ತುಳು ವಿಕಿಪೀಡಿಯವನ್ನು ಬೆಳೆಸಿ. ಅದರಿಂದಾಗಿ ತುಳು ಭಾಷೆ ಉಳಿಸಿ ಬೆಳೆಸಿ.

 

(ಅಗಸ್ಟ್ ೬, ೨೦೧೬)


ತಂತ್ರಜ್ಞಾನ: ನಾಳೆಗಳ ನಿರ್ಮಾಣ
Source:  Vishva Kannada
Sunday, 20 November 2016 11:57

ಆಳ್ವಾಸ್ ನುಡಿಸಿರಿ – ೨೦೧೬ರಲ್ಲಿ ಮಾಡಿದ ಭಾಷಣದ ಪೂರ್ಣರೂಪ

ಟಿ. ಜಿ. ಶ್ರೀನಿಧಿ

ನಾಳೆಗಳನ್ನು ನಿರ್ಮಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದು. ಅಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಸಂಸ್ಥೆಯೊಂದು ನಾಳೆಗಳ ನಿರ್ಮಾಣದ ಕುರಿತಾಗಿಯೇ ಈ ಸಮ್ಮೇಳನವನ್ನು ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಕಳೆದೆರಡು ದಿನಗಳಿಂದ ವಿವಿಧ ಕ್ಷೇತ್ರದ ನಾಳೆಗಳ ಕುರಿತ ಅನೇಕ ಸಂಗತಿಗಳನ್ನು, ಅನಿಸಿಕೆ-ಅಭಿಪ್ರಾಯಗಳನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ನಾಳೆಗಳ ಕುರಿತು ಮಾತನಾಡುವ ಸಮಯ.

srinidhitg-alvas-nudisiri-2016

೨೦೦೦ನೇ ಸಾಲಿನಲ್ಲಿ ಜಾವೆದ್ ಅಖ್ತರ್‌ ಅವರಿಗೆ ಅತ್ಯುತ್ತಮ ಗೀತರಚನೆಗೆಂದು ಚಲನಚಿತ್ರ ಕ್ಷೇತ್ರದ ರಾಷ್ಟ್ರಪುರಸ್ಕಾರ ಲಭಿಸಿತ್ತು. “ಹಾರುವ ಹಕ್ಕಿಗೆ ಬೀಸುವ ಗಾಳಿಗೆ ಸೀಮೆಯ ಹಂಗಿಲ್ಲ, ಮನುಜ ಮನುಜನ ನಡುವಲಿ ಮಾತ್ರ ಗಡಿಗಳಿಗೆಣೆಯಿಲ್ಲ” – ಇದು ಆ ಗೀತೆಯ ಮೊದಲ ಕೆಲ ಸಾಲುಗಳ ಭಾವಾರ್ಥ.

ನಿಜ, ಬಹುತೇಕ ಸರಹದ್ದುಗಳೆಲ್ಲ ಮನುಷ್ಯರದೇ ಸೃಷ್ಟಿ. ರಾಷ್ಟ್ರಗಳ, ರಾಜ್ಯಗಳ, ಭಾಷೆಗಳ, ಧರ್ಮಗಳ ಹೆಸರಿನಲ್ಲಿ ಅದೆಷ್ಟೋ ಸರಹದ್ದುಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡುಬಿಟ್ಟಿದ್ದೇವೆ.

ಇಂತಹ ಸರಹದ್ದುಗಳ ಕಾಟ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಇವುಗಳ ಕೈವಾಡ ತಂತ್ರಜ್ಞಾನ ಕ್ಷೇತ್ರದಲ್ಲೂ ಇದೆ.
ತಂತ್ರಜ್ಞಾನದ ಭಾಷೆ, ತಂತ್ರಜ್ಞಾನ ಕುರಿತ ಅರಿವು, ಅದನ್ನು ಬಳಸುವ ಅವಕಾಶ – ಹೀಗೆ ಹಲವು ಅಂಶಗಳು ಇಲ್ಲಿ ನಮ್ಮನ್ನು ನಿರ್ಬಂಧಿಸುವ ಸರಹದ್ದುಗಳಂತೆ, ಮಿತಿಗಳಂತೆ ವರ್ತಿಸಬಲ್ಲವು. ಆಶಾದಾಯಕವಾದ ನಾಳೆಗಳು ನಿರ್ಮಾಣವಾಗಬೇಕಾದರೆ ಇಂತಹ ಸವಾಲುಗಳನ್ನು ನಿವಾರಿಸಿಕೊಳ್ಳಬೇಕಾದ್ದು ಅತ್ಯಗತ್ಯ.

ಈ ಮಾತು ಬಂದಾಗಲೆಲ್ಲ ಅದು ಆಗಬೇಕು – ಇದು ಆಗಬೇಕು ಎಂಬ ಹೇಳಿಕೆಗಳು, ಅವೆಲ್ಲದರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹೊರೆಸಿ ಸುಮ್ಮನಾಗುವ ಜಾಣತನ ಎರಡೂ ಸಾಮಾನ್ಯವಾಗಿ ಕಾಣಸಿಗುತ್ತವೆ. ಆದರೆ ಇದನ್ನೆಲ್ಲ ಬೇರೆ ಯಾರೋ ಮಾಡಲಿ ಎಂದು ಕಾಯುವ ಅಗತ್ಯ ಖಂಡಿತಾ ಇಲ್ಲ. ಏಕೆಂದರೆ ತಂತ್ರಜ್ಞಾನ ಕ್ಷೇತ್ರದ ಸವಾಲುಗಳನ್ನು ನಿವಾರಿಸುವಲ್ಲಿ ನಮ್ಮಂತಹ ಸಾಮಾನ್ಯ ಬಳಕೆದಾರರ ಜವಾಬ್ದಾರಿಯೂ ಬಹಳಷ್ಟಿದೆ. ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ, ಸಿನಿಕತೆಯಿಲ್ಲದೆ ಹೊಸದನ್ನು ಸ್ವಾಗತಿಸುವ ಕುತೂಹಲ, ಬಳಸಿ ನೋಡಿದ್ದರ ಕುರಿತು ರಚನಾತ್ಮಕ ಪ್ರತಿಕ್ರಿಯೆ ನೀಡುವ ಅಭ್ಯಾಸ – ಇವನ್ನೆಲ್ಲ ಬೆಳೆಸಿಕೊಳ್ಳುವುದು ಈ ನಿಟ್ಟಿನಲ್ಲಿ ಬಹಳ ಉಪಯುಕ್ತವಾಗಬಲ್ಲ ಕ್ರಮಗಳು.

ಸಿನಿಕತೆಯ ಸಮಸ್ಯೆ ಸಣ್ಣದೇನಲ್ಲ. “ಯಂತ್ರ ಬಳಸಿ ಆಕಾಶದಲ್ಲಿ ಹಾರುವುದೆಂದರೇನು? ಅದೆಲ್ಲಾದರೂ ಸಾಧ್ಯವೇ?” ಎಂದು ರೈಟ್ ಸಹೋದರರ ತಂದೆ ಪ್ರಶ್ನಿಸಿದ್ದರೆಂದು ಹೇಳುವ ಒಂದು ಕತೆಯಿದೆ. ಆ ಕತೆ ನಿಜವೋ ಸುಳ್ಳೋ, ಆದರೆ ಹೊಸ ಸಂಗತಿಗಳ ಕುರಿತು ಇಂತಹ ಪ್ರತಿಕ್ರಿಯೆಗಳನ್ನು ನೀಡುವುದರಲ್ಲಿ ನಾವೇನೂ ಕಡಿಮೆಯಿಲ್ಲ. ಕೆಲ ವರ್ಷಗಳ ಹಿಂದೆ ಕನ್ನಡಕ್ಕೆ ಯಾಂತ್ರೀಕೃತ ಅನುವಾದ ಸೌಲಭ್ಯ ದೊರೆತಾಗ ಅದರ ಸಾಧಕ ಬಾಧಕಗಳ ಬಗ್ಗೆ ಮಾತನಾಡುವುದಕ್ಕಿಂತ ಅನುವಾದದ ತಪ್ಪುಗಳನ್ನು ಹುಡುಕುವವರ ಸಂಖ್ಯೆಯೇ ಜಾಸ್ತಿಯಾಗಿರಲಿಲ್ಲವೇ?

ಸಿನಿಕತೆ ಬೇಡ, ಸರಿ. ಹಾಗೆಂದು ಪಾಲಿಗೆ ಬಂದದ್ದೇ ಪಂಚಾಮೃತ ಎಂದುಕೊಳ್ಳುವ ಅಗತ್ಯವೂ ಇಲ್ಲ ಬಿಡಿ. ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಮಾರುಕಟ್ಟೆ ಇನ್ನೂ ಸೀಮಿತವಾಗಿರುವ ಸನ್ನಿವೇಶದಲ್ಲಿ ನಮಗೆ ಮಾರುಕಟ್ಟೆಯನ್ನು ಬೆಳೆಸುವ ಸದುದ್ದೇಶ ಇರಬೇಕು ಎನ್ನುವುದಷ್ಟೇ ಮೇಲೆ ಹೇಳಿದುದರ ಉದ್ದೇಶ.

ಮಾರುಕಟ್ಟೆಯ ವರ್ತನೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಒಂದೇ ರೀತಿ ಇರುತ್ತದೆ. ಗ್ರಾಹಕರ ಸಂಖ್ಯೆ ಮತ್ತು ಅವರ ಬೇಡಿಕೆಗಳ ಪ್ರಮಾಣ ಹೆಚ್ಚಿದಂತೆ ಆ ಬೇಡಿಕೆಗಳನ್ನು ಪೂರೈಸುವವರ ಸಂಖ್ಯೆಯೂ ಹೆಚ್ಚುತ್ತದೆ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರಕುತ್ತವೆ. ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ ಇಂಗ್ಲಿಷಿನಂತಹ ಭಾಷೆಗಳಲ್ಲಿ ಈ ಪ್ರಕ್ರಿಯೆಗೆ ಜಾಸ್ತಿ ಸಮಯ ಬೇಡ; ಆದರೆ ಸೀಮಿತ ಗಾತ್ರದ ಕನ್ನಡದಂತಹ ಮಾರುಕಟ್ಟೆಗಳು ಬೆಳೆಯಲು ಕೊಂಚ ಸಮಯ ಬೇಕು. ಮಾರುಕಟ್ಟೆ ಬೆಳೆಯಲಿ ಆಮೇಲೆ ನೋಡೋಣ ಎನ್ನುವಂತೆಯೂ ಇಲ್ಲ. ಏಕೆಂದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಮಾರುಕಟ್ಟೆಯನ್ನು ಬೆಳೆಸುವ ಜವಾಬ್ದಾರಿಯೂ ನಮ್ಮದೇ.

ಮಾರುಕಟ್ಟೆ ಬೆಳೆಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂದರೆ ಹೆಚ್ಚುಹೆಚ್ಚು ಬಳಕೆದಾರರ ಸೃಷ್ಟಿ. ಈಗಾಗಲೇ ಲಭ್ಯವಿರುವ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳುವುದು, ಆ ಸವಲತ್ತುಗಳನ್ನು ಬಳಸುವುದು ಹಾಗೂ ಅವನ್ನು ನಮ್ಮ ಆಪ್ತರಿಗೆ ಪರಿಚಯಿಸುವುದರ ಮೂಲಕ ನಾವು ಇಲ್ಲಿ ನೆರವಾಗಬಹುದು. ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಪುಸ್ತಕ, ಪತ್ರಿಕೆ ಹಾಗೂ ಜಾಲತಾಣಗಳನ್ನು ಪ್ರೋತ್ಸಾಹಿಸುವುದು ಈ ಕುರಿತು ನಾವು ಮಾಡಬಹುದಾದ ಇನ್ನೊಂದು ಕೆಲಸ.

ಅಗತ್ಯ ತಾಂತ್ರಿಕ ಜ್ಞಾನವಿರುವವರು ಹೊಸ ಸವಲತ್ತುಗಳನ್ನು ರೂಪಿಸುವ, ಲಭ್ಯ ಸವಲತ್ತುಗಳನ್ನು ಕನ್ನಡೀಕರಿಸುವ ಅಥವಾ ಕನಿಷ್ಟಪಕ್ಷ ತಮ್ಮ ಜ್ಞಾನವನ್ನು ಇತರರೊಡನೆ ಅವರ ಭಾಷೆಯಲ್ಲೇ ಹಂಚಿಕೊಳ್ಳುವ ಪ್ರಯತ್ನ ಮಾಡಬಹುದು. ಎಂಬತ್ತರ ದಶಕದಲ್ಲೇ ಕನ್ನಡ ತಂತ್ರಾಂಶವೊಂದನ್ನು ರೂಪಿಸಿ ಮುಕ್ತವಾಗಿ ವಿತರಿಸಿದ ನಾಡೋಜ ಕೆ. ಪಿ. ರಾಯರಂತಹ ಮಹನೀಯರ ಉದಾಹರಣೆಗಳು ಇಲ್ಲಿ ನಮಗೆ ಮಾರ್ಗದರ್ಶಕವಾಗಬೇಕಿವೆ.

ಅಂದಹಾಗೆ ತಂತ್ರಾಂಶಗಳನ್ನು, ಜಾಲತಾಣಗಳನ್ನು, ಕನ್ನಡದಲ್ಲೂ ನೋಡಲು ಅನುವುಮಾಡಿಕೊಡುವ ಉದ್ದೇಶದಿಂದ ಹಲವು ಅನುವಾದ ಕಾರ್ಯಕ್ರಮಗಳು ಗುಂಪುಗುತ್ತಿಗೆ, ಅಂದರೆ ಕ್ರೌಡ್‌ಸೋರ್ಸಿಂಗ್ ಆಧಾರದಲ್ಲಿ ನಡೆಯುತ್ತಿವೆ. ಇಂತಹ ಕೆಲಸಗಳಲ್ಲಿ ಪಾಲ್ಗೊಳ್ಳಲು ಹೆಚ್ಚಿನ ತಾಂತ್ರಿಕ ಜ್ಞಾನವೇನೂ ಬೇಕಿಲ್ಲ ಎನ್ನುವುದು ವಿಶೇಷ. ಫೇಸ್‌ಬುಕ್‌ನಲ್ಲೋ ಇನ್ನೊಂದು ಜಾಲತಾಣ ಅಥವಾ ತಂತ್ರಾಂಶದಲ್ಲೋ ಬಳಸಿರುವ ಕನ್ನಡ ಸರಿಯಿಲ್ಲ ಎಂದು ಲೇವಡಿಮಾಡಿ ಸಂದೇಶಗಳನ್ನು ಹರಿಬಿಡುವ ಬದಲು ಸೂಕ್ತ ಅನುವಾದಕ್ಕೆ ನಮ್ಮ ಕೈಲಾದಷ್ಟು ಸಹಾಯಮಾಡುವುದು ನಿಜಕ್ಕೂ ಒಳ್ಳೆಯ ಕೆಲಸವಾಗಬಲ್ಲದು.

ಸರಕಾರ ಹಾಗೂ ಸಂಘಸಂಸ್ಥೆಗಳೂ ತಂತ್ರಜ್ಞಾನದ ಹೊಸ ಹೊಸ ಸವಲತ್ತುಗಳನ್ನು ಕನ್ನಡದಲ್ಲಿ ಒದಗಿಸುವ ಮೂಲಕ ಕನ್ನಡದ ಬಳಕೆ ಹೆಚ್ಚುವಂತೆ ಮಾಡುವುದು ಸಾಧ್ಯವಿದೆ. ಈ ಕ್ಷೇತ್ರದ ಆಸಕ್ತರನ್ನು ಒಂದು ವೇದಿಕೆಯಡಿ ಕರೆತರುವುದು, ಇಂಜಿನಿಯರಿಂಗ್ ಕಾಲೇಜಿನ ಪ್ರಾಜೆಕ್ಟುಗಳಲ್ಲಿ ಕನ್ನಡದ ಕೆಲಸಕ್ಕೆ ಮಹತ್ವ ದೊರಕುವಂತೆ ಮಾಡುವುದು, ಜನರ ದೈನಂದಿನ ವ್ಯವಹಾರದ ಅಗತ್ಯಗಳಿಗೆ ಹೊಂದುವ ತಂತ್ರಜ್ಞಾನದ ಸುಲಭೋಪಾಯಗಳನ್ನು (ಮೊಬೈಲ್ ಆಪ್ ಇತ್ಯಾದಿ) ಕನ್ನಡದಲ್ಲಿ ಒದಗಿಸುವುದು – ಇವು ಈ ನಿಟ್ಟಿನಲ್ಲಿ ಮಾಡಬಹುದಾದ ಕೆಲಸಗಳು. ಕನ್ನಡ ತಂತ್ರಾಂಶಗಳನ್ನು ರೂಪಿಸುವ ಉದ್ದೇಶದಿಂದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗಾಗಲೇ ಇಂಜಿನಿಯರಿಂಗ್ ಕಾಲೇಜುಗಳೊಡನೆ ಕೈಜೋಡಿಸುವ ಪ್ರಯತ್ನದಲ್ಲಿರುವುದನ್ನು ಇಲ್ಲಿ ವಿಶೇಷವಾಗಿ ಉದಾಹರಿಸಬಹುದು.

ಇಂತಹ ಪ್ರಯತ್ನಗಳ ಜೊತೆಗೆ ತಂತ್ರಜ್ಞಾನದ ಜಗತ್ತಿನಲ್ಲಿ, ಅದರ ಭಾಗವಾದ ಜಾಗತಿಕ ಸಂಸ್ಥೆಗಳಲ್ಲಿ ಕನ್ನಡವನ್ನೂ ಸಮರ್ಥವಾಗಿ ಪ್ರತಿನಿಧಿಸುವುದು ಸರಕಾರವೇ ಮಾಡಬೇಕಿರುವ, ಸರಕಾರ ಮಾತ್ರ ಮಾಡಬಹುದಾದ ಇನ್ನೊಂದು ಕೆಲಸ. ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಈಗಾಗಲೇ ಇರುವ ಅಪಾರ ಪ್ರಮಾಣದ ಕನ್ನಡದ ಮಾಹಿತಿಯನ್ನು ಮುಕ್ತವಾಗಿ ಒದಗಿಸುವುದು ಇನ್ನೊಂದು ಹೆಜ್ಜೆ – ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಈ ಕುರಿತ ಕೆಲಸ ಈಗಾಗಲೇ ಪ್ರಾರಂಭವಾಗಿರುವುದು ಖುಷಿಯ ಸಂಗತಿ.

ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಬೆಳವಣಿಗೆಗಳು ಆಗುತ್ತಿರುತ್ತವೆ. ಅವುಗಳೆಲ್ಲದರ ಅನುಕೂಲತೆಗಳು ಹೆಚ್ಚುಹೆಚ್ಚು ಜನರನ್ನು ತಲುಪಬೇಕಾದರೆ ಅದು ಅವರ ಭಾಷೆಯಲ್ಲೇ ಲಭ್ಯವಿರಬೇಕು. ತಂತ್ರಜ್ಞಾನದ ಸಹವಾಸ ನಮಗೇಕೆ ಎಂದು ಕುಳಿತವರು ಕೂಡ ಅದು ತಮ್ಮ ಭಾಷೆಯಲ್ಲೇ ಲಭ್ಯವಾದಾಗ ಅತ್ತ ಒಮ್ಮೆಯಾದರೂ ನೋಡುವುದು ಖಂಡಿತ. ಈಗ ನಮ್ಮ ಮನೆಗಳಲ್ಲೇ ನೋಡಿ, ಟೆಕ್ನಾಲಜಿಯೆಲ್ಲ ನಮಗೆ ಅರ್ಥವಾಗದ್ದು ಎಂದು ಕೆಲ ವರ್ಷಗಳ ಹಿಂದಷ್ಟೇ ಹೇಳುತ್ತಿದ್ದ ಅದೆಷ್ಟು ಜನ ಹಿರಿಯರು ಇದೀಗ ಫೇಸ್‌ಬುಕ್ – ವಾಟ್ಸ್‌ಆಪ್‌ಗಳಲ್ಲಿ ಸಕ್ರಿಯರಾಗಿಲ್ಲ?

ಕಂಪ್ಯೂಟರ್ ತಂತ್ರಾಂಶಗಳಿಗೆ ಸಂಬಂಧಪಟ್ಟಂತೆ ಇದೇ ಉದ್ದೇಶವನ್ನಿಟ್ಟುಕೊಂಡ ಅನೇಕ ಪ್ರಯತ್ನಗಳು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಇವೆಲ್ಲ ಪ್ರಯತ್ನಗಳ ಫಲವಾಗಿ ಸಾಕಷ್ಟು ತಂತ್ರಾಂಶಗಳ ರಚನೆಯೂ ಆಗಿದೆ. ಅವುಗಳ ಮೂಲಕ ದೊಡ್ಡ ಪ್ರಮಾಣದ ಮಾಹಿತಿಯೂ ಸ್ಥಳೀಯ ಭಾಷೆಗಳಲ್ಲೇ ಸೃಷ್ಟಿಯಾಗುತ್ತಿದೆ.

ಹೀಗಿದ್ದರೂ ಕಂಪ್ಯೂಟರಿನ ಇಡೀ ವಾತಾವರಣವನ್ನು ನಮ್ಮ ಭಾಷೆಗೆ ತರುವುದು ಮಾತ್ರ ಸಾಧ್ಯವಾಗಿರಲಿಲ್ಲ. ತಂತ್ರಾಂಶ ಕನ್ನಡದ್ದೇ ಆದರೂ ಅದನ್ನು ಡೌನ್‌ಲೋಡ್ ಮಾಡಲು, ನಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಲು ಅಷ್ಟಿಷ್ಟು ಇಂಗ್ಲಿಷ್ ಅಗತ್ಯ ಇದ್ದೇ ಇತ್ತು. ಒಟ್ಟಾರೆ ಜನಸಂಖ್ಯೆಯ ಹೋಲಿಕೆಯಲ್ಲಿ ಕಂಪ್ಯೂಟರ್ ಬಳಕೆದಾರರ ಸಂಖ್ಯೆ ಕಡಿಮೆಯಿದ್ದುದರಿಂದ, ಮತ್ತು ಪ್ರಾಯಶಃ ಅವರಲ್ಲಿ ಬಹಳಷ್ಟು ಜನಕ್ಕೆ ಇಂಗ್ಲಿಷಿನ ಪ್ರಾಥಮಿಕ ಜ್ಞಾನವೂ ಇದ್ದುದರಿಂದ ಇದು ದೊಡ್ಡ ಸಮಸ್ಯೆಯೆಂದೇನೂ ಅನಿಸಿರಲಿಲ್ಲ. ಕಂಪ್ಯೂಟರಿನ ಇಡೀ ಕಾರ್ಯಾಚರಣ ವ್ಯವಸ್ಥೆಯ (ಆಪರೇಟಿಂಗ್ ಸಿಸ್ಟಂ) ಸ್ಥಳೀಯ ಭಾಷಾ ಆವೃತ್ತಿಗಳನ್ನು ರೂಪಿಸಲು ನಡೆದ ಕೆಲ ಯತ್ನಗಳಿಗೆ ಹೆಚ್ಚಿನ ಯಶ ಸಿಗದಿದ್ದರ ಹಿನ್ನೆಲೆಯಲ್ಲೂ, ಬಹುಶಃ, ಇದೇ ಕಾರಣವೇ ಇತ್ತು.

ಆದರೆ ಹೊಸ ಬಳಕೆದಾರರು, ಅದರಲ್ಲೂ ಗ್ರಾಮೀಣ ಹಿನ್ನೆಲೆಯಿಂದ ಬಂದವರು, ಕಂಪ್ಯೂಟರಿನಿಂದ ದೂರವೇ ಉಳಿಯಲಿಕ್ಕೂ ಇದು ಕಾರಣವಾಗಿತ್ತು. ಕನ್ನಡದ ಮೇಲೆ ಒಳ್ಳೆಯ ಹಿಡಿತವಿದ್ದರೂ, ಕಂಪ್ಯೂಟರಿನಲ್ಲಿ ಕನ್ನಡ ಬಳಸಿ ಏನೆಲ್ಲ ಮಾಡುವ ಆಸಕ್ತಿಯಿದ್ದರೂ ಅದನ್ನು ಆಗಮಾಡಿಸಲು ಬೇಕಾದ ಇಂಗ್ಲಿಷ್ ಜ್ಞಾನದ ಕೊರತೆ ಹಲವರನ್ನು ಕಾಡಿದ್ದನ್ನು ರಾಜ್ಯದ ಹಲವೆಡೆ ತರಬೇತಿ ಕಾರ್ಯಾಗಾರಗಳಲ್ಲಿ ನಾನೇ ಸ್ವತಃ ನೋಡಿದ ಸಂದರ್ಭಗಳು ಇಲ್ಲಿ ನೆನಪಿಗೆ ಬರುತ್ತಿವೆ.

ಮೊಬೈಲ್ ಫೋನ್ ಜನಪ್ರಿಯತೆ ಹೆಚ್ಚಿದಂತೆ ಪರಿಸ್ಥಿತಿಯಲ್ಲಿ ದೊಡ್ಡದೊಂದು ಬದಲಾವಣೆ ಕಂಡುಬಂತು. ಔಪಚಾರಿಕ ವಿದ್ಯಾಭ್ಯಾಸದ ಮಟ್ಟ, ಇಂಗ್ಲಿಷ್ ಜ್ಞಾನ ಇತ್ಯಾದಿಗಳ ನಿರ್ಬಂಧಗಳನ್ನು ಮೀರಿ ಜನರು ತಂತ್ರಜ್ಞಾನದತ್ತ ಮುಖಮಾಡುವಂತೆ ಮಾಡಿದ್ದು ಮೊಬೈಲ್ ಫೋನಿನ ಅತಿದೊಡ್ಡ ಸಾಧನೆಯೆಂದೇ ಹೇಳಬಹುದು. ಸಾಮಾನ್ಯ ಫೋನು ಸ್ಮಾರ್ಟ್ ಆಗುವುದರೊಡನೆ ಅದೇ ಒಂದು ಕಂಪ್ಯೂಟರ್ ಆಗಿ ಬದಲಾಯಿತು, ಈ ಹಿಂದೆ ಕಂಪ್ಯೂಟರ್ ಬಳಸದಿದ್ದವರೂ ಮೊಬೈಲ್ ರೂಪದ ಈ ಕಂಪ್ಯೂಟರನ್ನು ಬಳಸಲು ಪ್ರಾರಂಭಿಸಿದರು. ಅದರೊಡನೆ ಸ್ಥಳೀಯ ಭಾಷೆಯಲ್ಲಿ ತಂತ್ರಜ್ಞಾನದ ಸವಲತ್ತುಗಳನ್ನು ಒದಗಿಸುವ ಪ್ರಶ್ನೆಗೆ ಮತ್ತೆ ಜೀವಬಂತು.

ಕಂಪ್ಯೂಟರಿನಂತೆ ಸ್ಮಾರ್ಟ್‌ಫೋನುಗಳಲ್ಲೇನೂ ಭೌತಿಕ ಕೀಲಿಮಣೆ ಇರುವುದಿಲ್ಲ; ಹಾಗಾಗಿ ಕೀಲಿಮಣೆಯಲ್ಲಿ ಇಂಗ್ಲಿಷ್ ಅಕ್ಷರವಿದೆ – ಅದಕ್ಕಾಗಿ ಇಂಗ್ಲಿಷ್ ಕಲಿಯಿರಿ ಎನ್ನುವ ನೆಪ ಇಲ್ಲಿ ನಡೆಯುವುದಿಲ್ಲ. ತಂತ್ರಜ್ಞಾನದ ಸವಲತ್ತುಗಳು ಸ್ಥಳೀಯ ಭಾಷೆಯಲ್ಲಿ ಇರಲೇಬೇಕು ಎನ್ನುವ ವಾದಕ್ಕೆ ಒತ್ತು ದೊರೆತದ್ದು ಬದಲಾದ ಈ ಪರಿಸ್ಥಿತಿಯಲ್ಲಿಯೇ.

ಸ್ಥಳೀಯ ಭಾಷೆಯಲ್ಲಿ ಸವಲತ್ತು ಎನ್ನುವ ಬೇಡಿಕೆಗೆ ಹಲವು ಆಯಾಮಗಳಿವೆ. ಮೊಬೈಲಿನಲ್ಲೋ ಕಂಪ್ಯೂಟರಿನಲ್ಲೋ ಬೇರೆ ಯಾವುದೇ ಸಾಧನದಲ್ಲೋ ದೊರಕುವ ಮಾಹಿತಿ ನಮ್ಮ ಆಯ್ಕೆಯ ಭಾಷೆಯಲ್ಲಿರಬೇಕು ಎನ್ನುವುದು ಈ ಪೈಕಿ ಮೊದಲನೆಯದು. ಸ್ಥಳೀಯ ಭಾಷೆಯನ್ನು ಮೂಡಿಸಲು ಬೇಕಾದ ಸೌಲಭ್ಯ, ತಂತ್ರಾಂಶಗಳಲ್ಲಿ ಸ್ಥಳೀಯ ಭಾಷೆಯ ಆಯ್ಕೆಗಳು (ಮೆನು), ಸ್ಥಳೀಯ ಅಗತ್ಯಗಳನ್ನು ಪೂರೈಸುವ ತಂತ್ರಾಂಶಗಳು – ಇವೆಲ್ಲ ಈ ಹಂತದ ಬೇಡಿಕೆಗಳು.

ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ನಡೆದಿದೆ, ನಡೆಯುತ್ತಿದೆ ಎನ್ನುವುದು ಗಮನಾರ್ಹ. ಒಂದು ಕಾಲದಲ್ಲಿ ಕನ್ನಡ ತಂತ್ರಾಂಶವೆಂದರೆ ಟೈಪಿಂಗ್ ಮಾತ್ರ ಎನ್ನುವ ಭಾವನೆಯಿತ್ತು. ಆದರೆ ಈಗ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದೆ. ಯಾವುದೇ ಸ್ಪರ್ಶಸಂವೇದಿ ಪರದೆಯ (ಟಚ್‌ಸ್ಕ್ರೀನ್) ಮೇಲೆ ಬೆರಳನ್ನೋ ಸ್ಟೈಲಸ್ ಕಡ್ಡಿಯನ್ನೋ ಬಳಸಿ ಬರೆದದ್ದನ್ನು ಗುರುತಿಸಿ ಡಿಜಿಟಲೀಕರಿಸುವುದು ಹಾಗೂ ಕ್ಷಣಾರ್ಧದಲ್ಲಿ ಅದನ್ನು ಇತರ ಭಾಷೆಗಳಿಗೆ ಅನುವಾದಿಸಿಕೊಳ್ಳುವುದನ್ನು ಸಾಧ್ಯವಾಗಿಸುವ ಸವಲತ್ತು ಇದೀಗ ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲೂ ಬಂದಿದೆ. ಸ್ಕ್ಯಾನ್ ಮಾಡಿದ ಪುಟಗಳಲ್ಲಿ ಏನು ಮುದ್ರಿತವಾಗಿದೆ ಎಂದು ಗುರುತಿಸುವ, ಹಾಗೂ ಅದನ್ನು ಪಠ್ಯರೂಪಕ್ಕೆ ಬದಲಿಸಿಕೊಡುವ ಓಸಿಆರ್ (ಆಪ್ಟಿಕಲ್ ಕ್ಯಾರಕ್ಟರ್ ರೆಕಗ್ನಿಶನ್) ತಂತ್ರಾಂಶ ಕೂಡ ಇದೆ. ಪಠ್ಯವನ್ನು ಧ್ವನಿಗೆ ಪರಿವರ್ತಿಸುವ (ಟೆಕ್ಸ್ಟ್ ಟು ಸ್ಪೀಚ್) ತಂತ್ರಾಂಶಗಳ ಅಭಿವೃದ್ಧಿಯತ್ತಲೂ ಸಾಕಷ್ಟು ಕೆಲಸ ನಡೆದಿದೆ. ಅಕ್ಷರದೋಷಗಳನ್ನು ಗುರುತಿಸುವ, ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗುವ ಸವಲತ್ತುಗಳೂ ಬಂದಿವೆ. ಒಂದು ಭಾಷೆಯಲ್ಲಿರುವ ಜಾಲತಾಣವನ್ನು ನಮ್ಮ ಆಯ್ಕೆಯ ಇನ್ನೊಂದು ಭಾಷೆಗೆ ಬದಲಾಯಿಸಿಕೊಳ್ಳುವುದು ಸಾಧ್ಯವಾಗುತ್ತಿದೆ. ಜಾಲತಾಣಗಳಲ್ಲಷ್ಟೇ ಅಲ್ಲ, ಜಾಲತಾಣದ ವಿಳಾಸ – ಇಮೇಲ್ ಅಡ್ರೆಸ್‌ಗಳಲ್ಲೂ ಸ್ಥಳೀಯ ಭಾಷೆಗಳು ಕಾಣತೊಡಗಿವೆ.

ಈಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಮೊಬೈಲ್ ಫೋನುಗಳಲ್ಲಿ ಇಂಗ್ಲಿಷ್ ಮಾತ್ರವೇ ಅಲ್ಲದೆ ಹಲವು ಭಾರತೀಯ ಭಾಷೆಗಳನ್ನು ಸುಲಭವಾಗಿ ಬಳಸುವುದು ಸಾಧ್ಯವಾಗಿದೆ. ಫೋನಿನ ಆಯ್ಕೆಗಳೆಲ್ಲವೂ ನಮ್ಮ ಭಾಷೆಯಲ್ಲೇ ಇರುವಂತೆ ಮಾಡಿಕೊಳ್ಳುವುದೂ ಇದೀಗ ಸುಲಭ.

ಹಲವು ವಾಣಿಜ್ಯ ಸಂಸ್ಥೆಗಳು, ಗೂಗಲ್‌ನಂತಹ ದಿಗ್ಗಜರೂ ಸ್ಥಳೀಯ ಭಾಷಾ ಸೌಲಭ್ಯಗಳನ್ನು ಒದಗಿಸಲು ಮುಂದೆಬಂದಿರುವ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ. ಇಂತಹ ಅನೇಕ ಸಂಸ್ಥೆಗಳು ತಾವೇ ಸೃಷ್ಟಿಸಿಕೊಂಡಿದ್ದ ಇಂಗ್ಲಿಷ್ ಮಾತ್ರವೆಂಬ ಬೇಲಿಯೂ ಈಗ ಸಡಿಲವಾಗುತ್ತಿದೆ. ನೀವು ಗೂಗಲ್‌ನೊಡನೆ ಹಿಂದಿಯಲ್ಲೇ ಮಾತನಾಡಬಹುದು ಎನ್ನುವಂತಹ ಜಾಹೀರಾತುಗಳು ಸಾಕಷ್ಟು ಪ್ರಮಾಣದಲ್ಲೇ ಬರುತ್ತಿವೆ. ನಾವು ಮಾತನಾಡಿದ್ದನ್ನು ಅರ್ಥಮಾಡಿಕೊಳ್ಳುವ ವ್ಯವಸ್ಥೆಗಳು, ಅನುವಾದಿಸುವಾಗ ಪದಗಳನ್ನಷ್ಟೇ ನೋಡದೆ ಅವುಗಳನ್ನು ಬಳಸಿರುವ ಸನ್ನಿವೇಶವನ್ನೂ ಗಮನಿಸುವ ತಂತ್ರಾಂಶಗಳು ಸದ್ಯವೇ ಸ್ಥಳೀಯ ಭಾಷೆಗಳಲ್ಲೂ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ, ಕಂಪ್ಯೂಟರ್ ಬಳಸಲು ಇಂಗ್ಲಿಷ್ ಬೇಕೇಬೇಕು ಎನ್ನುವ ಪರಿಸ್ಥಿತಿಯಿಂದ ಹೊರಟ ನಾವು ಇಂದು ತಂತ್ರಜ್ಞಾನವೆಂದರೆ ಇಂಗ್ಲಿಷ್ ಮಾತ್ರವೇ ಅಲ್ಲ ಎಂದು ಹೇಳುವ ಮಟ್ಟವನ್ನು ತಲುಪಿದ್ದೇವೆ. ಹೊಸ ಬಳಕೆದಾರರು ಹೆಚ್ಚುಹೆಚ್ಚಿನ ಸಂಖ್ಯೆಯಲ್ಲಿ ತಂತ್ರಜ್ಞಾನದ ಸಂಪರ್ಕಕ್ಕೆ ಬರಬೇಕೆಂದರೆ ಅವರು ಇಂಗ್ಲಿಷ್ ಕಲಿಯಲಿ ಎನ್ನದೆ ತಂತ್ರಜ್ಞಾನವೇ ತನ್ನ ಮಿತಿಗಳನ್ನೆಲ್ಲ ಮೀರಿ ಬಳಕೆದಾರರ ಭಾಷೆಯನ್ನು ಕಲಿಯುವಂತಾಗಬೇಕು. ಹಾಗೆ ಆದಾಗಲಷ್ಟೇ ಕಂಪ್ಯೂಟರ್ ಇರುವುದು ಟೈಪ್ ಮಾಡಲು, ಸ್ಮಾರ್ಟ್‌ಫೋನ್ ಇರುವುದು ವಾಟ್ಸಾಪ್ ಸಂದೇಶ ಕಳುಹಿಸಲು ಎನ್ನುವ ಪರಿಸ್ಥಿತಿ ಬದಲಾಗುತ್ತದೆ.

ಅಂದಹಾಗೆ ತಂತ್ರಜ್ಞಾನದ ನೆರವಿನಿಂದ ದೊರಕುವ ಸೌಲಭ್ಯಗಳು ಹೈಟೆಕ್ ಆಗಿಯೇ ಇರಬೇಕು ಎಂದೇನೂ ಇಲ್ಲ. ಕೆಲಸಮಯದ ಹಿಂದೆ ರಾಜಕಾರಣಿಯೊಬ್ಬರು ನಮ್ಮ ದೇಶದಲ್ಲಿ ಅದೆಷ್ಟೋ ದೊಡ್ಡ ಸಾಮರ್ಥ್ಯದ ಸೂಪರ್‌ಕಂಪ್ಯೂಟರುಗಳಿರಬೇಕು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಆ ಕ್ಷೇತ್ರದ ತಜ್ಞರೊಬ್ಬರು “ಸೂಪರ್‌ಕಂಪ್ಯೂಟರಿನ ಸಾಮರ್ಥ್ಯ ಎಷ್ಟು ಎನ್ನುವುದಕ್ಕಿಂತ ನಮ್ಮ ಅಗತ್ಯಗಳಿಗೆ ಅದನ್ನು ಎಷ್ಟು ಸಮರ್ಥವಾಗಿ ಬಳಸುತ್ತಿದ್ದೇವೆ ಎನ್ನುವುದು ಮುಖ್ಯ” ಎಂದು ಹೇಳಿದ್ದರು. ಸರಿಯಾದ ಮುಂದಾಲೋಚನೆಯಿಲ್ಲದೆ ತಂತ್ರಜ್ಞಾನವನ್ನು ಅಳವಡಿಸಲು ಹೋಗುವುದಕ್ಕೂ ವಿದ್ಯುತ್ತನ್ನೇ ಕಾಣದ ಊರ ಮಕ್ಕಳಿಗೆ ಲ್ಯಾಪ್‌ಟಾಪ್ ಹಂಚುವುದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಣ್ಣಸಣ್ಣ ಕೆಲಸಗಳೂ ಮಹತ್ವದ ಪರಿಣಾಮ ಬೀರಬಲ್ಲವು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಕಣಜ ಅಂತರಜಾಲ ಕನ್ನಡ ಜ್ಞಾನಕೋಶದಲ್ಲಿ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಿದ ಆರೇ ತಿಂಗಳಿನಲ್ಲಿ ಬಳಕೆದಾರರು ಅರವತ್ತು ಸಾವಿರಕ್ಕೂ ಹೆಚ್ಚು ಬಾರಿ ಅವುಗಳನ್ನು ಬಳಸಿದ್ದಾರೆ. ಅಷ್ಟೇ ಅಲ್ಲ, ಪಠ್ಯಪುಸ್ತಕದ ಚಿತ್ರಗಳನ್ನು ಗೋಡೆಯ ಮೇಲೆ ಪ್ರೊಜೆಕ್ಟ್ ಮಾಡಿ ಮಕ್ಕಳಿಗೆ ವಿವರಿಸುವಂತಹ ಹೊಸ ಆಲೋಚನೆಗಳನ್ನೂ ಕಾರ್ಯಗತಗೊಳಿಸಿದ್ದಾರೆ.

ಕಣಜದ ಮೂಲಕವೇ ಲಭ್ಯವಿರುವ ಹಲವಾರು ಪತ್ರಿಕೆಗಳು, ವಿವಿಧ ಜಾಲತಾಣ ಹಾಗೂ ಆಪ್‍ಗಳ ಮೂಲಕ ದೊರಕುತ್ತಿರುವ ನಿಘಂಟುಗಳು, ವೈವಿಧ್ಯಮಯ ಮಾಹಿತಿ ನೀಡುತ್ತಿರುವ ವಿಕಿಪೀಡಿಯದಂತಹ ವಿಶ್ವಕೋಶಗಳು ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿವೆ. ತಂತ್ರಜ್ಞಾನದ ಜಗತ್ತನ್ನು ಹೆಚ್ಚುಹೆಚ್ಚು ಮಂದಿಗೆ ಪರಿಚಯಿಸಿ ಅವರನ್ನು ಕನ್ನಡದ ಮಾರುಕಟ್ಟೆಯ ಬಳಕೆದಾರರನ್ನಾಗಿ ರೂಪಿಸುವಲ್ಲಿ ಈ ತಾಣಗಳ ಪಾತ್ರ ಮಹತ್ವದ್ದು.

ನಾವು ಮಾತನಾಡಿದ್ದನ್ನು ಅರ್ಥಮಾಡಿಕೊಳ್ಳುವ ಸ್ಪೀಚ್ ರೆಕಗ್ನಿಶನ್‌ನಂತಹ ಉನ್ನತ ತಂತ್ರಜ್ಞಾನದ ವ್ಯವಸ್ಥೆಗಳು ಬೇಕಿರುವಂತೆಯೇ ಸಾಮಾನ್ಯ ಜನರ ಪ್ರಾಥಮಿಕ ಅಗತ್ಯಗಳಿಗೆ ಒದಗುವ ತಂತ್ರಜ್ಞಾನಗಳೂ ಇಂದು ಅಗತ್ಯವಾಗಿ ಬೇಕಾಗಿವೆ. ಫೋರ್ ಜಿ ಸಂಪರ್ಕ ಬಳಸಿ ಮೊಬೈಲಿನಲ್ಲೇ ಟೀವಿ ತೋರಿಸುವುದರ ಜೊತೆಗೆ ಎಸ್ಸೆಮ್ಮೆಸ್ ಮೂಲಕವೇ ಬ್ಯಾಂಕಿಂಗ್ ಸೌಲಭ್ಯ ನೀಡುವುದೂ ಇಂದಿನ ಅಗತ್ಯ.

೨೦೨೦ರ ವೇಳೆಗೆ ಅಂತರಜಾಲದ ಸಂಪರ್ಕಕ್ಕೆ ಬರುವ ಭಾರತೀಯರ ಒಟ್ಟುಸಂಖ್ಯೆ ಎಪ್ಪತ್ತು ಕೋಟಿಗಿಂತ ಹೆಚ್ಚಾಗಲಿದೆ ಎಂದು ನ್ಯಾಸ್‌ಕಾಮ್‌ನ ‘ಭಾರತದಲ್ಲಿ ಅಂತರಜಾಲದ ಭವಿಷ್ಯ’ ಎಂಬ ವರದಿ ಹೇಳುತ್ತದೆ. ತಂತ್ರಜ್ಞಾನದ ಸೌಲಭ್ಯ ಬಳಸಲು ದುಬಾರಿ ಸ್ಮಾರ್ಟ್‌ಫೋನನ್ನೋ ಕಂಪ್ಯೂಟರನ್ನೋ ಬಳಸಿ ಎಂದು ಇಷ್ಟೆಲ್ಲ ಜನಕ್ಕೆ ಹೇಳುವ ಬದಲು ನಿಮ್ಮ ಕೈಲಿರುವ ಒಂದೆರಡು ಸಾವಿರದ ಫೋನಿನಲ್ಲೇ ಏನೆಲ್ಲ ಮಾಡಬಹುದು ನೋಡೋಣ ಬನ್ನಿ ಎನ್ನುವವರು ಇವತ್ತಿನ ಪರಿಸ್ಥಿತಿಯಲ್ಲಿ ತುರ್ತಾಗಿ ಬೇಕಾಗಿದ್ದಾರೆ.

ತಂತ್ರಜ್ಞಾನ ಕ್ಷೇತ್ರದ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ನೀಡುವುದರ ಅಗತ್ಯವೂ ಬಹಳಷ್ಟಿದೆ. ಹೊಸ ತಂತ್ರಜ್ಞಾನಗಳ ಬಗೆಗಷ್ಟೇ ಅಲ್ಲ, ಈಗಾಗಲೇ ಲಭ್ಯವಿರುವ ಸವಲತ್ತುಗಳನ್ನು ಜವಾಬ್ದಾರಿಯುತವಾಗಿ ಬಳಸುವುದು ಹೇಗೆ ಎನ್ನುವ ನಿಟ್ಟಿನಲ್ಲೂ ಸಾಕಷ್ಟು ಮಾಹಿತಿ ಪ್ರಸರಣದ ಅವಶ್ಯಕತೆಯಿದೆ. ಸಮಾಜ ಜಾಲಗಳಲ್ಲಿ ಇಂದು ಕಾಣುವ ತಪ್ಪು ಮಾಹಿತಿ, ದ್ವೇಷಸಾಧನೆ, ಬೇಜವಾಬ್ದಾರಿಯುತ ಬರಹಗಳು – ಮತ್ತು ಇವೆಲ್ಲವುಗಳಿಂದ ಆಗುವ ವ್ಯರ್ಥ ಕಾಲಹರಣದ ಬೆಲೆ ಎಷ್ಟು ಎನ್ನುವುದು ಎಲ್ಲರಿಗೂ ಅರಿವಾಗುವುದು ಅತ್ಯಗತ್ಯ. ಸಿಕ್ಕ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸುವುದು ಹೇಗೆಂದು ತಿಳಿಯಲು, ಜಾಲಲೋಕದಲ್ಲಿ ನಮ್ಮ ಬೇಜವಾಬ್ದಾರಿಯುತ ಕೆಲಸಗಳ ಪರಿಣಾಮ ಏನಾಗಬಹುದೆಂದು ಅರಿಯಲು ಕೂಡ ಒಂದಷ್ಟು ಸಹಾಯ ಬೇಕಿದೆ.

ಇಂತಹ ಸಹಾಯವನ್ನು ಒದಗಿಸಿಕೊಡಲು ಪ್ರಯತ್ನಿಸುತ್ತಿರುವ ಕೆಲವು ಜಾಲತಾಣಗಳು ಕನ್ನಡದಲ್ಲಿವೆ; ಆದರೆ ಅವುಗಳ ಸಂಖ್ಯೆ ನಮ್ಮ ಜನಸಂಖ್ಯೆಯ ಹೋಲಿಕೆಯಲ್ಲಿ ಬಹಳ ಕಡಿಮೆ. ಪತ್ರಿಕೆಗಳಲ್ಲೂ ಒಂದಷ್ಟು ಒಳ್ಳೆಯ ಪ್ರಯತ್ನಗಳು ನಡೆದಿವೆ, ನಿಜ. ಆದರೆ ತಂತ್ರಜ್ಞಾನಕ್ಕೆ ಮೀಸಲಾದ ಸ್ಥಳಾವಕಾಶದ ಬಹುಪಾಲನ್ನು ಮೊಬೈಲ್ ಫೋನುಗಳೇ ಆಕ್ರಮಿಸಿಕೊಳ್ಳುತ್ತಿರುವುದು, ಮಿಕ್ಕ ಜಾಗದಲ್ಲಿ ತಂತ್ರಜ್ಞಾನದ ಪರಿಚಯಕ್ಕಿಂತ ಸುದ್ದಿಸ್ವಾರಸ್ಯಕ್ಕೆ ಪ್ರಾಮುಖ್ಯ ದೊರಕುತ್ತಿರುವುದು ಆತಂಕದ ಸಂಗತಿ. ಟೀವಿ ಮಾಧ್ಯಮದಲ್ಲಂತೂ ತಂತ್ರಜ್ಞಾನ ಕುರಿತು ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಈ ಸನ್ನಿವೇಶ ಕೊಂಚಮಟ್ಟಿಗೆ ಬದಲಾದರೂ ಅದು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆಗೆ ದೊಡ್ಡ ಕೊಡುಗೆಯಾಗಬಲ್ಲದು.

ಇದರ ಜೊತೆಗೆ ನಮ್ಮೊಡನೆ ನಮ್ಮ ಭಾಷೆಯಲ್ಲೇ ವ್ಯವಹರಿಸಿ ಎಂದು ವಾಣಿಜ್ಯ ಸಂಸ್ಥೆಗಳನ್ನು ಎಚ್ಚರಿಸುವ ಕೆಲಸ ಕೂಡ ಆಗುತ್ತಲೇ ಇರಬೇಕು. ಇದಕ್ಕೆ ತಂತ್ರಜ್ಞಾನದ ಸವಲತ್ತುಗಳನ್ನೇ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಫೇಸ್‌ಬುಕ್‌ನಂತಹ ತಾಣಗಳಲ್ಲಿ ಸಕ್ರಿಯವಾಗಿರುವ ಕನ್ನಡ ಗ್ರಾಹಕ ಕೂಟಗಳು ತೋರಿಸಿಕೊಟ್ಟಿವೆ.

ತಂತ್ರಜ್ಞಾನವಷ್ಟೇ ಏಕೆ, ಯಾವ ಕ್ಷೇತ್ರದಲ್ಲೇ ಆದರೂ ಜನರ ಮನಸ್ಸನ್ನು ಸುಲಭವಾಗಿ ಮುಟ್ಟುವ ಸಂಗತಿಗಳಿಗೆ ಮಹತ್ವ ಹೆಚ್ಚು. ತಂತ್ರಜ್ಞಾನದ ಸಹಾಯದಿಂದ ನಮ್ಮ ನಾಳೆಗಳ ನಿರ್ಮಾಣವಿರಲಿ, ನಮ್ಮ ಸಹಾಯದಿಂದ ತಂತ್ರಜ್ಞಾನದ ನಾಳೆಗಳ ನಿರ್ಮಾಣವಿರಲಿ – ಕರ್ನಾಟಕದಲ್ಲಿರುವವರ ಮಟ್ಟಿಗೆ ಎಲ್ಲದರ ಕೇಂದ್ರದಲ್ಲೂ ಕನ್ನಡವೇ ಇರಬೇಕು. ಹಾಗೆ ಆದಾಗ ಮಾತ್ರ ನಾಳೆಗಳು ಸುಂದರವಾಗಿರುವುದು ಸಾಧ್ಯ.

ಇದುವರೆಗೂ ನನ್ನ ಮಾತುಗಳಿಗೆ ಕಿವಿಗೊಟ್ಟ ನಿಮಗೆ, ಇಲ್ಲಿ ಮಾತನಾಡಲು ಅವಕಾಶಕೊಟ್ಟ ನುಡಿಸಿರಿಯ ಆಯೋಜಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನನ್ನ ಭಾಷಣದ ಪೂರ್ಣಪಾಠ ಹಾಗೂ ಅದಕ್ಕೆ ಪೂರಕ ಮಾಹಿತಿಯನ್ನು ಇಜ್ಞಾನ ಡಾಟ್ ಕಾಮ್‌ನಲ್ಲಿ ನೀವು ಪಡೆಯಬಹುದು. ಈ ಕುರಿತು ನಿಮ್ಮ ಪ್ರಶ್ನೆಗಳೇನಾದರೂ ಇದ್ದಲ್ಲಿ ಅಂತರಜಾಲದ ಮಾಧ್ಯಮ ಹೇಗೂ ಇದ್ದೇ ಇದೆ.

ಸಂಪರ್ಕದಲ್ಲಿರೋಣ, ನಮಸ್ಕಾರ!


<< < Prev 1 2 3 4 5 6 7 Next > >>