VicksWeb upgrade Location upload ads trending
VicksWeb ಭಾರತ
ಆಕಸ್ಮಿಕ ಬೆಂಕಿ :ಗುಡಿಸಲು ಭಸ್ಮ
Source:  Janatha Madhyama
Tuesday, 23 December 2014 05:53

ಹಳೇಬೀಡು:ಬೆಂಕಿ ಆಕಸ್ಮಿಕದಿಂದ ಗುಡಿ ಸಲು ಸುಟ್ಟು ಭಸ್ಮವಾಗಿರುವ ಘಟನೆ ಸೋಮ ವಾರ ಸಂಜೆ ನಡೆದಿದೆ. ಸುಮಾರು ೭೦೦೦ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಬೆಂಕಿಗೆ ಆಹುತಿಯಾದ ಗುಡಿಸಲು ರವಿ ನಾಯ್ಕ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಜಮೀನು, ಮನೆ ಇಲ್ಲದ ರವಿನಾಯ್ಕ ಹಾಗೂ ಇವರ ಪತ್ನಿ ಆಶಾ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಎರಡು ಗಂಡು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ತುಂಡು ಭೂಮಿಯೂ ಇಲ್ಲದ ಇವರು ಗಟ್ಟಿಮುಟ್ಟಾದ ಸೂರು ಹೊಂದಲು ಸಾಧ್ಯ ವಾಗದೆ ಕಿತ್ತು ತಿನ್ನುವ ಬಡತನದಲ್ಲಿ ಜೋಪಡಿಯಲ್ಲಿ ವಾಸವಾಗಿದ್ದರು. ಇರುವ ಗುಡಿಸಲೊಂದು ಬೆಂಕಿಗೆ ತುತ್ತಾಗಿರುವುದ ರಿಂದ ಕುಟುಂಬ ಬೀದಿಗೆ ಬಂದಿದೆ. ಮನೆಯಲ್ಲಿದ್ದ ಪಾತ್ರೆ, ಬಟ್ಟೆ ಆಹಾರ ಪದಾರ್ಥಗಳು ಕೈಗೆ ಸಿಗದಂತೆ ನಾಶವಾಗಿವೆ. ರೇಷನ… ಕಾಡ…ರ್, ಮತದಾರ ಚೀಟಿ ಮೊದ ಲಾದ ದಾಖಲಾತಿ ಸುಟ್ಟು ಬೂದಿಯಾಗಿರು ವುದಲ್ಲದೆ, ಮನೆ ನಿರ್ಮಿಸಿಕೊಳ್ಳುವುದಕ್ಕಾಗಿ ಸಂಗ್ರಹಿಸುತ್ತಿದ್ದ ರೂ.೧೦೦೦೦ ನಗದು ಸಹ ಸುಟ್ಟು ಹೋಗಿದೆ. ಓದುವ ಪುಸ್ತಕ ಹಾಗೂ ಬಟ್ಟೆ ಸುಟ್ಟು ಹೋಗಿರುವುದರಿಂದ ನಾಳೆ ಶಾಲೆಗೆ ಹೇಗೆ ಹೋಗುವುದು ಎಂದು ಮಕ್ಕಳು ಚಿಂತಾಕ್ರಾಂತರಾಗಿದ್ದ ದೃಶ್ಯ ಕಂಡು ಬಂತು. ಕುಟುಂಬ ಸದಸ್ಯರ ಬಳಿ ತೊಟ್ಟ ಬಟ್ಟೆ ಹೊರತು ಪಡಿಸಿ ಮುಂದಿನ ಜೀವನಕ್ಕೆ ಬಿಡಿಗಾಸು ಇಲ್ಲದಂತಾಗಿದೆ. ಪತಿ ರವಿನಾಯ್ಕ ಬೇರೆ ಊರಿಗೆ ತೆರಳಿದ್ದರಿಂದ ರಾತ್ರಿ ಕಳೆಯುವುದ ಕ್ಕಾಗಿ ಪುಟ್ಟ ಮಕ್ಕಳೊಂದಿಗೆ ಪತ್ನಿ ಆಶಾ ಪರ ದಾಡುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.


ಅರಕಲಗೂಡು : ಜ.೫ಕ್ಕೆ ಪರಂಪರಾ ಉತ್ಸವ
Source:  Janatha Madhyama
Tuesday, 23 December 2014 05:52

ಅರಕಲಗೂಡು : ಹೊಯ್ಸಳ ಮಹೋ ತ್ಸವದ ಅಂಗವಾಗಿ ತಾಲ್ಲೂಕಿನಲ್ಲಿ ಜನವರಿ ೫,೨೦೧೫ರಂದು ಸಂಭ್ರಮದ ಅರಕಲ ಗೂಡು ಪರಂಪರಾ ಉತ್ಸವ ಆಯೋಜಿಸ ಲಾಗಿದೆ ಎಂದು ಶಾಸಕ ಎ.ಮಂಜು ಹೇಳಿದ್ದಾರೆ. ಪಟ್ಟಣದಲ್ಲಿ ಸೋಮವಾರ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸಿದ ಅವರು, ಇದೇ ಪ್ರಥಮ ಬಾರಿಗೆ ಹೊಯ್ಸಳ ಮಹೋತ್ಸವದ ಅಂಗವಾಗಿ ತಾಲ್ಲೂಕಿನಲ್ಲಿ ಅರಕಲಗೂಡು ತಾಲ್ಲೂಕಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆ ಯನ್ನು ವರ್ತಮಾನದ ಜನರಿಗೆ ಪರಿಚಯಿ ಸುವ ಸಲುವಾಗಿ ಅರಕಲಗೂಡು ಪರಂಪರಾ ಉತ್ಸವ ನಡೆಯುತ್ತಿದೆ ಎಂದರು. ಬೆಳಿಗ್ಗೆ ೮ ಗಂಟೆಗೆ ಅರಕಲಗೂಡು ಪಟ್ಟಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಆರಂಭಿಸಲಾಗುವ ಪರಂಪರಾ ಉತ್ಸವ ರಾಮನಾಥಪುರಕ್ಕೆ ತೆರಳಲಿದೆ. ಮೆರ ವಣಿಗೆಯಲ್ಲಿ ಆಕರ್ಷಕ ಸ್ತಬ್ದ ಚಿತ್ರಗಳು, ವಿವಿಧ ಜಾನಪದ ಕಲಾ ತಂಡಗಳು, ಕಳಶ ಹೊತ್ತ ಮಹಿಳೆಯರು ಹೆಜ್ಜೆ ಹಾಕುವರು. ವಿವಿಧ ವಾದ್ಯ ಪರಿಕರಗಳ ವಾದನ ಇರ ಲಿದೆ. ರಾಮನಾಥಪುರ ಸರ್ಕಲ…ನಿಂದ ರಾಮೇಶ್ವರ ದೇಗುಲದ ತನಕ ಮೆರವಣಿಗೆ ಸಾಗಲಿದೆ. ಅಲ್ಲಿ ವಿವಿಧ ಇಲಾಖೆಗಳ ಮಾಹಿತಿ ಒದಗಿಸುವ ವಸ್ತು ಪ್ರದರ್ಶನ, ಪುಸ್ತಕ ಮಾರಾಟ ಪ್ರದರ್ಶನ ಮತ್ತು ಆಹಾರ ಮೇಳಕ್ಕೆ ಚಾಲನೆ ನೀಡಲಾಗು ವುದು ಎಂದರು. ವೇದಿಕೆ ಕಾರ್ಯಕ್ರಮದಲ್ಲಿ ಉದ್ಘಾ ಟನೆ, ಗಣ್ಯರ ಸನ್ಮಾನ ಆದ ನಂತರ ಅರ ಕಲಗೂಡು ಸಾಹಿತ್ಯ, ಸಾಂಸ್ಕೃತಿಕ& ಐತಿ ಹಾಸಿಕ ಅವಲೋಕನ, ಕೃಷಿ ಬದುಕು ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಮಧ್ಯಾಹ್ನ ೭ ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದ ನಂತರ ಸಾರ್ವಜನಿಕರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ೩&೩೦ಕ್ಕೆ ನಡೆಯುವ ಯುವ ಜನೋತ್ಸವದಲ್ಲಿ ವಿವಿಧ ಶಾಲಾ&ಕಾಲೇಜು ಮಕ್ಕಳಿಂದ ನೃತ್ಯ, ಹಾಡುಗಾರಿಕೆ, ನೃತ್ಯ ರೂಪಕ, ಸಾಹಸ ಪ್ರದರ್ಶನ ಜರುಗಲಿದೆ. ಈ ನಡುವೆ ಛಾಯಾಚಿತ್ರಕಾರರ ಸಂಘ ದಿಂದ ಛಾಯಾಚಿತ್ರ ಪ್ರದರ್ಶನ, ಅರ ಕಲಗೂಡು ಐತಿಹಾಸಿಕ ಪರಂಪರೆ ಪರಿ ಚಯಿಸುವ ಸ್ಮರಣ ಸಂಚಿಕೆ ಬಿಡುಗಡೆ ಯಾಗಲಿದೆ. ಸಂಜೆ ಸಮಾರೋಪ ಕಾರ್ಯಕ್ರಮ, ನಂತರ ರುದ್ರಪಟ್ಟಣ ಸಂಗೀತಗಾರರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ ೮ ರಿಂದ ೧೧ರವರೆಗೆ ಆಹ್ವಾನಿತ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ತಾಲ್ಲೂಕಿನ ಸಮಸ್ತ ಜನತೆ ಪರಂಪರಾ ಉತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು.


ಎತ್ತಿನಹೊಳೆ ಯೋಜನೆ : ಕೈಬಿಡುವ ಪ್ರಶ್ನೆಯೇ ಇಲ್ಲ
Source:  Janatha Madhyama
Tuesday, 23 December 2014 05:50

ಸಕಲೇಶಪುರ : ಎರಡು ಜಿಲ್ಲೆಯ ಜನರ ಕುಡಿಯುವ ನೀರಿನ ಯೋಜನೆ ಯಾದ ಎತ್ತಿನಹೊಳೆ ಯೋಜನೆ ಯನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಈ ಯೋಜನೆಯಿಂದ ಸಂತ್ರಸ್ತರಾಗುವ ಮಲೆನಾಡು ಜನರ ಬೇಡಿಕೆಗಳನ್ನು ಈಡೇರಿಸಲು ಅತಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳು ವುದಾಗಿ ರಾಜ್ಯ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ… ತಿಳಿಸಿದ್ದಾರೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ ಕುರಿತಾಗಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಸೋಮ ವಾರ ಪಟ್ಟಣದ ಪುರಭವನದ ಸಭಾಂಗಣ ದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸಾರ್ವ ಜನಿಕರು, ಸಂತ್ರಸ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಅಭಿ ಪ್ರಾಯ, ಸಲಹೆ ಸೂಚನೆಗಳನ್ನು ಆಲಿಸಿದ ನಂತರ ಉತ್ತರಿಸಿದ ಸಚಿವರು, ಸದರಿ ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರ ಪ್ರಾರಂಭಿಸಿದ್ದರೂ ಕೂಡ ಇದೊಂದು ಮಾನವೀಯ ಪರಿ ಕಲ್ಪನೆಯ ಯೋಜನೆ. ಈಗಿನ ಕಾಂಗ್ರೆಸ… ಸರ್ಕಾರವೂ ಕೂಡ ಯೋಜನೆ ಕೈಗೆತ್ತಿ ಕೊಂಡಿದೆ ಎಂದರು. ಸುಮಾರು ೧೪ ಸಾವಿರ ಕೋಟಿ ರೂ. ವೆಚ್ಚ ತಗುಲುವ ಈ ಯೋಜನೆಯಿಂದ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನರಿಗೆ ಅನುಕೂಲ ವಾಗುತ್ತದೆ ಎಂದರು. ಯಾವುದೇ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಂದರ್ಭ ದಲ್ಲಿ ಸ್ವಲ್ಪ ಮಟ್ಟದ ತೊಂದರೆ ಎದು ರಾಗುವುದು ಸಹಜ. ಸರ್ವೋಚ್ಛ ನ್ಯಾಯಾಲಯ ಘೊಷಿಸಿದ ಹೊಸ ಭೂ ಸ್ವಾಧೀನ ಕಾಯ್ದೆ ಅಡಿಯಲ್ಲಿ ಭೂಮಿಯನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗುವುದು ಹಾಗೂ ಸೂಕ್ತ ಪರಿಹಾರ, ಪುನ ರ್ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಈ ಭಾಗದ ಸಂತ್ರಸ್ತರ ಬೇಡಿಕೆ ಗಳನ್ನು ಆದ್ಯತೆ ಮೇರೆಗೆ ಬಗೆಹರಿ ಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ಯಾಕೇಜ… ಘೊಷಿಸು ವುದಾಗಿ ತಿಳಿಸಿದರು. ಯೋಜನೆಯ ಸಮಗ್ರ ವರದಿ ಯಲ್ಲಿ ಹಲವಾರು ಅವೈಜ್ಞಾನಿಕ ಮತ್ತು ದ್ವಂದ್ವ ಮಾಹಿತಿ ಇವೆ ಎಂದು ದೂರಿ ಯೋಜನೆ ಕುರಿತು ಸರ್ಕಾರ ಸ್ಥಳೀಯ ರಿಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ… ಆಕ್ಷೇಪಿಸಿ ದರು.


ಈಚುನಾವಣೆಎಂ.ಸಿ.ಇ.ನಕುಟುಂಬಆಡಳಿತಕ್ಕೆಅಂತ್ಯಹಾಡುವುದೇ?
Source:  Janatha Madhyama
Tuesday, 23 December 2014 04:54

ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಚುನಾವಣೆ ಸಮೀಪಿಸುತ್ತಿರು ವಂತೆಯೇ ಈ ಹಿಂದಿನ ಚುನಾವಣೆಗಳಿ ಗಿಂತ ಹೆಚ್ಚಿನ ರಂಗು ಪಡೆದುಕೊಂಡಿದೆ. ಮತದಾರರ ಪಟ್ಟಿ ಹಾಗೂ ಚುನಾವಣಾ ಪ್ರಕ್ರಿಯೆ ದೋಷಪೂರಿತವಾಗಿದ್ದು, ಇದನ್ನು ರದ್ದುಪಡಿಸಿ ಹೊಸ ಮತದಾರರ ಪಟ್ಟಿ ಯೊಂದಿಗೆ ಚುನಾವಣೆ ನಡೆಸಬೇಕೆಂದು ನಗರದ ಪ್ರಧಾನ ಸಿವಿಲ… ನ್ಯಾಯಾಲಯದ ಕಿರಿಯ ವಿಭಾಗದಲ್ಲಿ ದಾವೆ ಹೂಡ ಲಾಗಿದೆ. ಆದರೆ ಇದು ಡಿಸೆಂಬರ… ೨೭ ರಂದು ನಡೆಯಲಿರುವ ಚುನಾವಣೆಗೆ ಯಾವುದೇ ರೀತಿಯ ತೊಡಕಾಗದು ಎಂದು ಹೇಳಲಾಗುತ್ತಿದೆ. ಹಾಗೆ ನೋಡಿದರೆ ಕಳೆದ ೩೦ ವರ್ಷ ದಿಂದ ಚುನಾವಣೆಯೇ ನಡೆದಿಲ್ಲ. ಇದಕ್ಕೆ ಹಾರನಹಳ್ಳಿ ರಾಮಸ್ವಾಮಿ ಅವರ ಕುಟುಂಬ ರಾಜಕಾರಣವೇ ಕಾರಣ ಎಂಬುದು ಸುಸ್ಪಷ್ಟ . ಚುನಾವಣೆ ದಿನವೇ ಮತದಾರರಿಗೆ ಹೊಡೆದು ಕಳುಹಿಸ ಲಾಗಿತ್ತು. ಈಗಲೂ ಈ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಎಂ.ಸಿ.ಇ.ನ ತಮ್ಮ ಕುಟುಂಬ ರಾಜಕಾರಣದಿಂದಾಗಿ ಜನರ, ಆಡಳಿತ ಮಂಡಳಿಯವರ ತೀವ್ರ ಅಸಮಾಧಾನಕ್ಕೆ ಗುರಿಯಾಗಿದ್ದರೂ, ಹಾರನಹಳ್ಳಿ ರಾಮ ಸ್ವಾಮಿ ಅವರು ಮಾತ್ರ ಎಲ್ಲರನ್ನೂ ಸಮಾನ ವಾಗಿ ಕಾಣುತ್ತಿದ್ದರು ಎಂಬ ಮಾತಿಗೆ ಈಗ ಎಂ.ಸಿ.ಇ. ಆಡಳಿತ ಮಂಡಳಿ ಅಧ್ಯಕ್ಷರಾಗಿ ರುವ ಅಶೋಕ… ಹಾರ್ನಳ್ಳಿ ಅವರು ತಮ್ಮ ತಂದೆಯ ನಡವಳಿಕೆಗೆ ತದ್ವಿರುದ್ದವಾಗಿ ದ್ದಾರೆ. ಅವರ ನೇತೃತ್ವದಲ್ಲಿ ತುಘಲಕ… ದರ್ಬಾರ… ನಡೆಯುತ್ತಿದೆ ಎಂಬುದಕ್ಕೆ ಹಲ ವಾರು ಕಾರಣಗಳು ಸಿಗುತ್ತವೆ. ಅಷ್ಟಕ್ಕೂ ಅಶೋಕ… ಹಾರನಹಳ್ಳಿ ಅವರು ಬೆಂಗಳೂರಿನಲ್ಲೇ ವಾಸ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಸಂಸ್ಥೆಯ ಜವಾಬ್ದಾರಿಯನ್ನು ಸೀಟ… ಕುಮಾರ ಮತ್ತು ಶಿವರಾಂ ಎಂಬು ವವರಿಗೆ ವಹಿಸಿದ್ದು , ಇವರಿಬ್ಬರದೇ ದರ್ಬಾರ…. ನಿರ್ದೇಶಕರು ಇವರಿಗೆ ಲೆಕ್ಕಕ್ಕಿಲ್ಲ. ಸದಸ್ಯರ ಕಡೆಯವರಿಗೂ ಕಾಲೇಜಿನಲ್ಲಿ ಪ್ರವೇಶ ಸಿಗದಂತೆ ನೋಡಿಕೊಂಡಿರುವ ಇವರಿಬ್ಬರ ತೆರೆಮೆರೆ ಆಟ ಅಶೋಕ… ಹಾರನಹಳ್ಳಿ ಅವರ ಗಮನಕ್ಕೆ ಈವರೆಗೂ ಬಾರದಿರುವುದು ಸೋಜಿಗದ ವಿಷಯ. ಸರ್ಕಾರದ ಸ್ವಾಮ್ಯತೆಗೊಳಪಟ್ಟಿರುವ ಎಂ.ಸಿ.ಇ.ನಲ್ಲಿ ಈವರೆಗೂ ಕಾನೂನುಬದ್ದ ವಾಗಿ ಯಾರಿಗೂ ಬಡ್ತಿ ನೀಡಿಲ್ಲ . ಮನಸ್ಸಿಗೆ ಬಂದಂತೆ ಬಡ್ತಿ ನೀಡಲಾಗುತ್ತಿದ್ದರೂ, ಯಾರೊಬ್ಬರೂ ಚಕಾರ ಎತ್ತಿಲ್ಲ . ಪ್ರಶ್ನೆ ಮಾಡಿದರೆ ತಮಗೆ ಅಲ್ಲಿ ಜಾಗವಿಲ್ಲ ಎಂಬುದು ಅನುಭವಸ್ಥರ ಮಾತು. ಜ್ಯೇಷ್ಠತೆ ಆಧಾರದ ಮೇಲೆ ಪ್ರಾಂಶುಪಾಲರಾಗಿ ಮೋಹನ… ಕುಮಾರ… ಅವರನ್ನು ನೇಮಕ ಮಾಡದೆ ಜಯಂತ… ಅವರನ್ನು ತಾತ್ಕಾ ಲಿಕವಾಗಿ ಪ್ರಾಂಶುಪಾಲರನ್ನಾಗಿ ಕೂರಿಸುವ ‘ದರ್ದಾ’ದರೂ ಏನಿತ್ತು ಎಂಬುದು ಬಹು ತೇಕ ನಿರ್ದೇಶಕರ ಪ್ರಶ್ನೆಯಾಗಿದ್ದರೂ, ಅದಕ್ಕೆ ನ್ಯಾಯಬದ್ದ ಉತ್ತರ ಸಿಗುವುದಿಲ್ಲ ಎಂಬುದನ್ನು ಅರಿತು ಮಾತು ಬಂದರೂ ಮೂಕರಾಗಿದ್ದಾರೆ. ಅಷ್ಟಕ್ಕೂ ಎಂ.ಸಿ.ಇ. ಆಡಳಿತ ಮಂಡಳಿಗೆ ಅರ್ಥಾತ… ಅಶೋಕ… ಹಾರನಹಳ್ಳಿ ಅವರಿಗೆ ಬೇಕಿರು ವುದು ಇಂಥಾ ‘ಮೂಕರೇ’ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹೀಗೆ ತಾತ್ಕಾಲಿಕವಾಗಿ ತಾವು ಪ್ರಾಂಶುಪಾಲರ ಹುದ್ದೆಗೇರಿರುವುದು ಮುಂದೆ ತಮ್ಮ ಭವಿಷ್ಯದ ದೃಷ್ಟಿಯಿಂದ ತೊಡಕಾಗುತ್ತದೆ ಎಂಬುದರ ಬಗ್ಗೆ ಜಯಂತ… ಅವರು ಯೋಚನೆ ಮಾಡಲು ಹೋಗಿಲ್ಲವೋ ಅಥವಾ ಅವರಿಗೆ ಅಶೋಕ… ಹಾರನಹಳ್ಳಿ ಅವರು ಮತ್ತೇನು ಭರವಸೆ ನೀಡಿದ್ದಾರೋ? ಇರಲಿ, ಆದರೆ ಈ ವಿಷಯದಲ್ಲಂತೂ ಸಿಬ್ಬಂದಿ ವರ್ಗಕ್ಕೆ ತೀವ್ರ ಅಸಮಾಧಾನ ಇದ್ದೇ ಇದೆ. ಪ್ರೊಫೆಸರ… ಹಾಗೂ ಸಹಾಯಕ ಪ್ರೊಫೆ ಸರ… ನೇಮಕದಲ್ಲೂ ತಾರತಮ್ಯ ಎಸಗ ಲಾಗಿದೆ. ಕೆಲವರು ಕಾಲೇಜಿನ ಸಂಬಳ ಪಡೆಯುತ್ತಾ ಹಾರನಹಳ್ಳಿಯಲ್ಲಿ ತೋಟ ನೋಡಿಕೊಂಡಿದ್ದಾರೆ.


ಮತದಾರರಪಟ್ಟಿಲೋಪ ಸರಿಪಡಿಸಲುಆಗ್ರಹ
Source:  Janatha Madhyama
Tuesday, 23 December 2014 04:53

ಹಾಸನ : ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಡಿಸೆಂಬರ… ೨೭ರಂದು ಚುನಾವಣೆ ನಡೆಯಲಿದೆ. ಆದರೆ ಮತ ದಾರರ ಪಟ್ಟಿಯಲ್ಲಿ ಭಾರೀ ಲೋಪ ಇದೆ. ಈ ಲೋಪ ಸರಿಪಡಿಸುವಂತೆ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಮಾಜಿ ಕಾರ್ಯದರ್ಶಿ ಬಿ.ಕೆ.ಮಂಜು ನಾಥ… ಒತ್ತಾಯಿಸಿದರು. ಈ ಸಂಬಂಧ ಚುನಾವಣಾಧಿಕಾರಿ ವಿ.ಎಸ….ಮುರುಗೇಂದ್ರಯ್ಯ ಅವರಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದು ಸೋಮವಾರ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಲೋಪ ಸರಿಪಡಿಸದಿದ್ದರೆ ಕಾನೂ ನಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರಲ್ಲದೆ, ತಕ್ಷಣವೇ ಚುನಾವಣಾಧಿಕಾರಿಗಳು ಇತ್ತ ಗಮನ ಹರಿಸುವಂತೆ ಆಗ್ರಹಿಸಿದರು. ಕೇವಲ ರಾಜಕೀಯ ದುರುದ್ದೇಶ ಕ್ಕಾಗಿ ಕೆಲವರನ್ನು ಪಟ್ಟಿಯಿಂದ ಕೈಬಿಡ ಲಾಗಿದೆ ಹಾಗೂ ಮೃತಪಟ್ಟ ಸದಸ್ಯರ ಜಾಗಕ್ಕೆ ಅನಧಿಕೃತವಾಗಿ ಅದೇ ಹೆಸರು ಳ್ಳವರನ್ನು ಸೇರಿಸಿರುವುದು ಮಹಾ ಪರಾಧ ಎಂದು ಹೇಳಿದರು. ೫೧೬ ಆಜೀವ ಸದಸ್ಯರಲ್ಲಿ ಕೇವಲ ೧೫೧ ಜನರಿಗೆ ಮತದಾನದ ಹಕ್ಕು ನೀಡಲಾಗಿದ್ದು, ಅದರಲ್ಲಿ ೧೦ ರಿಂದ ೧೫ ಜನ ನಕಲಿ ಮತದಾರರಿದ್ದಾರೆ. ಈ ಸಂಬಂಧ ಚುನಾವಣಾ ಅಧಿಕಾರಿ ವಿ.ಎಸ….ಮುರುಗೇಂದ್ರ ಅವರು ಇದಕ್ಕೆ ಸಂಬಂಧಿಸಿದಂತೆ ಸದಸ್ಯರಿಗೆ ಪತ್ರ ವೊಂದನ್ನು ಕಳುಹಿಸಿಕೊಡುವಂತೆ ಆಗ್ರಹಿಸಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಸದಸ್ಯರುಗಳಾದ ಬಸವರಾಜ…, ರಮೇಶ…, ಮೂರ್ತಿ, ಕೃಷ್ಣೇ ಗೌಡ, ತಮ್ಮಣ್ಣಗೌಡ ಹಾಜರಿದ್ದರು.


ಶಿರಾಡಿಘಾಟ್‌ ರಸ್ತೆ ಕಾಮಗಾರಿ ಶೀಘ್ರ ಪ್ರಾರಂಭ
Source:  Janatha Madhyama
Friday, 05 December 2014 12:52

ಹಾಸನ : ಅಗತ್ಯ ಪ್ರಮಾಣದ ಸಾಮಗ್ರಿ ಸಂಗ್ರಹ ಕಾರ್ಯ ಮುಗಿದ ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್‌ನ ವಾಹನ ಸಂಚಾರ ಸ್ಥಗಿತಗೊಳಿಸಿ ಸಿಮೆಂಟ್‌ ರಸ್ತೆ ಕಾಮಗಾರಿ ಪ್ರಾರಂಭಿಸ ಲಾಗುವುದು ಎಂದು ಜಿಲ್ಲಾ ಉಸ್ತು ವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಡಾ:ಹೆಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ. ಶಿರಾಡಿ ಘಾಟ್‌ ರಸ್ತೆ ಕಾಮಗಾರಿಗೆ ಸಂಗ್ರಹಿಸಲಾಗಿರುವ ಸಾಮಗ್ರಿ ಮತ್ತು ಹಾಲಿ ನಡೆಯುತ್ತಿರುವ ಮೋರಿ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ನಂತರ ಸಕಲೇಶಪುರದಲ್ಲಿ ಅರಣ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾ ನಾಥ ರೈ ಮತ್ತು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಯವರು ಮತ್ತು ಇತರೆ ಹಿರಿಯ ಅಧಿಕಾರಿಗಳೊಂದಿಗೆ ಗುರು ವಾರ ಸಭೆಯನ್ನು ನಡೆಸಿದ ಸಚಿವರು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗುವ ಸೂಚನೆ ನೀಡಿ, ಬದಲಿ ರಸ್ತೆಗಳನ್ನು ಸಂಚಾರ ಯೋಗ್ಯವನ್ನಾಗಿಸಿ ಸಿದ್ಧಪಡಿಸಿ ಕೊಳ್ಳಲು ನಿರ್ದೇಶನ ನೀಡಿದರು. ಅರಣ್ಯ ಸಚಿವ ರಮಾನಾಥ ರೈ ಮಾತನಾಡಿ, ಮಡಿಕೇರಿ ಮಾರ್ಗದ ರಸ್ತೆ ಸಹ ದುರಸ್ತಿಯಲ್ಲಿದೆ. ಬಿಸಿಲೆ&ಸುಬ್ರಹ್ಮಣ್ಯ ರಸ್ತೆ ಶೀಘ್ರವಾಗಿ ಸಂಚಾರ ಯೋಗ್ಯ ವನ್ನಾಗಿಸಬೇಕಿದೆ ಅಲ್ಲದೆ ಚಾರ್ಮುಡಿ ಘಾಟ್‌ ಬಲಪಡಿಸಬೇಕಾಗಿದೆ. ಮೂಡಿಗೆರೆ ಸಂಪರ್ಕ ರಸ್ತೆಗಳ ಜಾಲವನ್ನು ಉತ್ತಮಗೊಳಿಸಬೇಕು. ಒಟ್ಟಿನಲ್ಲಿ ಈ ಕಾಮಗಾರಿ ಗುಣಮಟ್ಟದಿದ ನಡೆಯಬೇಕು ಶೀಘ್ರವಾಗಿ ಮುಗಿಸಬೇಕು ಎಂದರು. ಹಾಸನ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಸ್ಥಳೀಯ ಸಮಸ್ಯೆಗಳು ಹಾಗೂ ಪರಿಹಾರ ಮಾರ್ಗಗಳ ಬಗ್ಗೆ ನಕ್ಷೆ ಮೂಲಕ ಸಲಹೆ ನೀಡಿದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ರೆಡ್ಡಿ ಹಾಗೂ ಮುಖ್ಯ ಇಂಜಿನಿಯರ್‌ ಮೃತ್ಯುಂಜಯ ಸ್ವಾಮಿ ಅವರು ಈವರೆಗೆ ಕಾಮಗಾರಿ ಅನುಷ್ಠಾನವಾಗಿರುವ ಪ್ರಗತಿ, ಬದಲಿ ಮಾರ್ಗಗಳ ಸ್ಥಿತಿಗತಿ ಸುಧಾರಣೆಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ವಿವರಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಪೇಂದ್ರ ಪ್ರತಾಪ್‌ಸಿಂಗ್‌ ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.


ಕಸ್ತೂರಿ ರಂಗನ್‌ ವರದಿ : ಜನರ ಹಿತ ಕಾಯಲು ಸರ್ಕಾರ ಬದ
Source:  Janatha Madhyama
Friday, 05 December 2014 12:46

ಹಾಸನ : ಪಶ್ಚಿಮ ಘಟ್ಟಗಳ ಸಂರ ಕ್ಷಣೆಗೆ ಕಸ್ತೂರಿ ರಂಗನ್‌ ವರದಿ ಜಾರಿ ಸಂದರ್ಭ ಈ ಭಾಗದ ಜನರ ಹಿತವನ್ನು ಕಾಯುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸಲಿದೆ ಎಂದು ಅರಣ್ಯ ಸಚಿವ ವಿ.ರಮಾ ನಾಥ ರೈ ತಿಳಿಸಿದ್ದಾರೆ. ಗುರುವಾರ ಗುಂಡ್ಯ ಬಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಸ್ತೂರಿ ರಂಗನ್‌ ವರದಿಯಲ್ಲಿ ಶೇ.೨೦ರಷ್ಟು ಕಾಡಿನ ಸ್ವರೂಪ ಹೊಂದಿರುವ ಪ್ರದೇಶಗಳನ್ನು ಅರಣ್ಯವೆಂದು ಗುರು ತಿಸಲಾಗಿದೆ ಅದನ್ನು ಶೇ.೫೦.ರಷ್ಟು ಪ್ರಮಾಣಕ್ಕೆ ವಿಸ್ತರಿಸಲು ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಇದರಿಂದ ಹಲವು ಗ್ರಾಮಗಳು ಬಿಟ್ಟು ಹೋಗುವ ಸಾಧ್ಯತೆಗಳಿವೆ ಎಂದು ಸಚಿವರು ಹೇಳಿದರು. ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಗೋವಾ, ಗುಜರಾತ್‌ ರಾಜ್ಯಗಳು ಕಸ್ತೂರಿ ರಂಗನ್‌ ವರದಿಯ ವ್ಯಾಪ್ತಿಗೆ ಬರುತ್ತವೆ. ಕೇರಳ ರಾಜ್ಯವೊಂದೇ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿ ಸಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ರಾಜ್ಯ ಸರ್ಕಾರವು ವರದಿಯನ್ನು ಸಲ್ಲಿಸಬೇಕಾಗಿದೆ. ಆದ್ದರಿಂದ ಈ ವೇಳೆ ಈ ವರದಿ ವ್ಯಾಪ್ತಿಗೆ ಸೇರ್ಪಡೆ ಯಾಗಿರುವ ಗ್ರಾಮಗಳ ಹಿತ ಚಿಂತನೆಯೂ ಸರ್ಕಾ ರಕ್ಕೆ ಇದೆ ಎಂದು ಸಚಿವರು ಹೇಳಿದರು. ಸಕಲೇಶಪುರ ತಾಲ್ಲೂಕಿನಲ್ಲಿ ಆನೆ ಕಾರಿಡಾರ್‌ ನಿರ್ಮಾ ಣಕ್ಕೆ ಗ್ರಾಮಸ್ಥರಿಂದಲೂ ಮನವಿ ಬರುತ್ತಿದೆ. ಇದೊಂದು ಸೂಕ್ಷ್ಮ ವಿಷಯ. ಸರ್ಕಾರಕೆ ಈ ಬಗ್ಗೆ ತಾತ್ವಿಕ ಒಪ್ಪಿಗೆ ಇದೆ. ಆದರೆ ಈವರೆಗೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದರು. ಹಣಕಾಸಿನ ಲಭ್ಯತೆ, ಸಾಧ್ಯ ಸಾಧ್ಯತೆಗಳನ್ನು ಪರಿ ಶೀಲಿಸಿ ಮುಂದಿನ ಹೆಜ್ಜೆ ಇಡಬೇಕಾ ಗಿದೆ ಎಂದರು. ಆನೆ ಹಾವಳಿ ನಿಯಂತ್ರಣಕ್ಕೆ ಆನೆ ಕಂದಕಗಳನ್ನು ಇನ್ನಷ್ಟು ಪರಿಣಾಮ ಕಾರಿಯಾಗಿ ನಿರ್ಮಿಸಿ ನಿರ್ವಹಿಸಲು ೨೧೨ ಕೋಟಿ ರೂ. ಮೀಸಲಿರಿಸ ಲಾಗಿದೆ. ಈ ವರ್ಷ ೫೦ ಕೋಟಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಸೋಲಾರ್‌ ಬೇಲಿಗಳ ನಿರ್ವಹಣೆ ಸಮಸ್ಯೆ ನಿವಾರಿಸಲು ಕೃಷಿಕರಿಗೆ ಶೇ. ೫೦ ರಷ್ಟು ಸಬ್ಸಿಡಿ ಹಣ ನೀಡಿ ತಮ್ಮ ಜಮೀನುಗಳಲ್ಲಿ ಅವರೇ ಸೋಲಾರ್‌ ಬೇಲಿ ಅಳವಡಿಸಿ ನಿರ್ವಹಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ವನ್ಯಜೀವಿಗಳ ಹಾವಳಿಯಿಂದ ಬೆಳೆ ನಷ್ಟ ಪರಿಹಾರ ಗರಿಷ್ಠ ಮೊತ್ತವನ್ನು ಓಂದು ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಮನುಷ್ಯನ ಪ್ರಾಣಹಾನಿಗೆ ತಲಾ ೫ ಲಕ್ಷ ರೂ., ದನಕರುಗಳ ಸಾವಿಗೆ ೧೦ ಸಾವಿರ ರೂ, ಕುರಿ ಮೇಕೆಗಳ ಸಾವಿಗೆ ೫೦೦೦ ರೂ. ಪರಿಹಾರ ನಿಗದಿಪಡಿಸಲಾಗಿದೆ ಎಂದ ಸಚಿವರು, ಅರಣ್ಯ ಒತ್ತುವರಿ ಬಗ್ಗೆ ಸರ್ವೆಸ್ಥಿತಿಯ ಬಗ್ಗೆ ಕಾರ್ಯ ನಡೆಯುತ್ತಿದ್ದು, ಅಲ್ಲಿನ ಪರಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು ಎಂದರು.


ನಿಷ್ಠೆಯಿಂದ ಕಾರ್ಯ ನಿರ್ವಹಣೆ : ಎಸ್‌.ಎಂ.ಆನಂದ
Source:  Janatha Madhyama
Friday, 05 December 2014 12:43

ಆಲೂರು : ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡರು ನನ್ನ ಮೇಲೆ ನಂಬಿಕೆ ಯಿಟ್ಟು ವಹಿಸಿರುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ರೀತಿಯ ಚ್ಯುತಿ ಬರದಂತೆ ಅತ್ಯಂತ ಜವಾಬ್ದಾರಿ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವ ಹಿಸುವುದಾಗಿ ರಾಜ್ಯ ಆಹಾರ ನಿಗಮ ಮಂಡಳಿ ಅಧ್ಯಕ್ಷ ಎಸ್‌.ಎಂ.ಆನಂದ್‌ ತಿಳಿಸಿದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಗುರುವಾರ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗ ಮಿಸಿದ್ದ ಅವರಿಗೆ ತಾಲ್ಲೂಕು ಕಾಂಗ್ರೆಸ್‌ ಮುಖಂಡರು ಆತ್ಮೀಯ ಸ್ವಾಗತ ನೀಡಿದ ನಂತರ ಮಾತನಾಡಿದ ಅವರು, ಆಹಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಅತ್ಯಂತ ಜವಾಬ್ದಾರಿ ಯುತವಾದುದಾಗಿದ್ದು, ಇದರಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆ ಯನ್ನು ನಿಭಾಯಿಸುವುದು ಸವಾಲಿನ ಕೆಲಸ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಯಾವುದೇ ಅಡತಡೆಯಿಲ್ಲದೇ ಸುವ್ಯವ ಸ್ಥಿತವಾಗಿ ನಡೆಯಲು ಪ್ರಾಮಾಣಿಕವಾಗಿ ಕೆಲಸ ಮಾಡುವೆ. ಕಾಂಗ್ರೆಸ್‌ ಪಕ್ಷದ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಯಕರ್ತನಾದ ನನ್ನ ಸೇವೆಯನ್ನು ಗುರುತಿಸಿ ಸರ್ಕಾರದವರು ನನಗೆ ಈ ಜವಾಬ್ದಾರಿಯನ್ನು ವಹಿಸಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಇರಲಿ, ಇನ್ಯಾವುದೇ ಕೆಲಸ ವಿರಲಿ ಶ್ರದ್ಧೆಯಿಂದ ಕಾರ್ಯ ನಿರ್ವ ಹಿಸುವುದಾಗಿ ಹೇಳಿದರು. ತಾಲ್ಲೂಕು ಕಾಂಗ್ರೆಸ್‌ ಅಧ್ಯಕ್ಷ ಜಿ.ಆರ್‌. ರಂಗನಾಥ, ಹೆಚ್‌.ವಿ ಶಿವ ರಾಮೇಗೌಡ, ಕಬ್ಬಿನಹಳ್ಳಿ ಜಗದೀಶ, ಶಾಂತಕೃಷ್ಣ , ಬ್ಯಾಬ ಧರ್ಮಪ್ಪ , ಟೀಕ ರಾಜು, ಖಾಲಿದ್‌ ಬಾಯ್‌, ಶಿವ ಮೂರ್ತಿ, ರಂಗೇಗೌಡ, ಬೈರಾಪುರ ಅಶೋಕ, ಹೊನ್ನಪ್ಪ, ಮುಂತಾದವರಿದ್ದರು.


ರಾಜಿನಾಮೆ ವಾಪಸ್‌ ಪಡೆದ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ
Source:  Janatha Madhyama
Friday, 05 December 2014 12:41

ಹಾಸನ : ನಾಟಕೀಯ ಬೆಳ ವಣಿಗೆಯೊಂದರಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಅವರು ಗುರು ವಾರ ವಾಪಸ್ಸು ಪಡೆದಿದ್ದಾರೆ. ಅಪರ ಜಿಲ್ಲಾಧಿಕಾರಿ ಗೋಪಾಲ ಕೃಷ್ಣ ಅವರ ಕಛೇರಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ನಗರ ಸಭಾ ಸದಸ್ಯರೊಂದಿಗೆ ತೆರಳಿ ಶ್ರೀವಿದ್ಯಾ ಅವರು ರಾಜಿನಾಮೆ ವಾಪಸ್ಸು ಪಡೆ ದರು. ಅಧ್ಯಕ್ಷೆಯಾಗಿ ಮುಂದುವರಿಯಲು ಶ್ರೀವಿದ್ಯಾ ಅವರು ತೀವ್ರ ಕಸರತ್ತು ನಡೆಸಿದ್ದಾರೆ. ಈ ನಡುವೆಯೇ ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲ ಕೂಡ ಯಾಚಿಸಿದ್ದಾರೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಈ ಬೆಳವಣಿಗೆಯಿಂದ ದಳದ ಮುಖಂಡರು ತೀವ್ರ ಅಸಮಾಧಾನ ಗೊಂಡಿದ್ದಾರೆ. ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್‌.ಡಿ.ರೇವಣ್ಣ ಪ್ರವಾಸಿ ಮಂದಿರದಲ್ಲಿ ಪಕ್ಷದ ಸದಸ್ಯರೊಂದಿಗೆ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು. ಶಾಸಕ ಪ್ರಕಾಶ್‌ ಕೂಡ ರಾತ್ರಿ ೭ ಗಂಟೆ ವೇಳೆಯಲ್ಲಿ ಚರ್ಚೆ ನಡೆಸಿದರು. ಆದರೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಇನ್ನೆರಡು ದಿವಸ ಕಾದು ನೋಡುವ ತಂತ್ರವನ್ನು ದಳದ ಸದಸ್ಯರು ಹೊಂದಿದ್ದಾರೆ. ಶಾಸಕ ಹೆಚ್‌.ಡಿ.ರೇವಣ್ಣ ಅವರು ಈ ಬೆಳವಣಿಗೆಯಿಂದ ತೀವ್ರ ಮುಜು ಗರಕ್ಕೀಡಾಗಿದ್ದಾರೆ. ಅಲ್ಲದೆ ಶ್ರೀವಿದ್ಯಾ ಅವರನ್ನು ಮೊದಲ ಅವಧಿಗೆ ಆಯ್ಕೆ ಮಾಡಿದ ಕ್ರಮದ ಬಗ್ಗೆಯೂ ಅಸಮಾ ಧಾನ ವ್ಯಕ್ತಪಡಿಸಿದ್ದರಲ್ಲದೆ, ಇದು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೇ? ಎಂದು ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಏತನ್ಮಧ್ಯೆ ಶ್ರೀವಿದ್ಯಾ ವಿರುದ್ಧ ಅವಿಶ್ವಾಸ ನಿರ್ಣಯ ತರಲು ಸಾಧ್ಯವೇ ಎಂಬ ಬಗ್ಗೆಯೂ ದಳ ವಲಯದಲ್ಲಿ ತೀವ್ರವಾಗಿ ಪರಿಶೀಲಿಸಲಾಗುತ್ತಿದೆ. ಸದಸ್ಯ ಬಲಾಬಲದ ಬಗ್ಗೆಯೂ ಚರ್ಚೆ ನಡೆದಿದೆ. ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಜೆಡಿಎಸ್‌ ೧೯, ಕಾಂಗ್ರೆಸ್‌ ೧೦, ಬಿಜೆಪಿ ೩, ಪಕ್ಷೇತರರು ೩ ಮಂದಿ ಇದ್ದಾರೆ. ಮುಂದೇನಾಗುತ್ತದೋ ಕಾದು ನೋಡೋಣ.Source:  Janatha Madhyama
Sunday, 30 December 2012 05:08

ÖÝÓÜ®Ü: PÜáÊæí±Üâ AÊÜÃÜ ÓÝ×ñÜ ÓÜÊÜìPÝÆPÜãR ±ÜÅÓÜá¤ñÜ Gí¨Üá ÖÝÓÜ®Ü ÊÜá×ÙÝ ±ÜÅ¥ÜÊÜá ¨Ühæì PÝÇæài®Ü ÓÜÖÜ ±ÝūݱÜPÜ vÝ>>w.ÎÅà¯ÊÝÓ… A¼±ÝÅ¿á ÊÜÂPܤ±ÜwԨݪÃæ. 
iÇÝÉ PܮܰvÜ ÓÝ×ñÜ ±ÜÄÐÜñ… ÊÜ£ Àáí¨Ü ÃÝÐÜóPÜË PÜáÊæí±Üâ g®Ü¾ ©®Ý aÜÃÜOæ AíWÜÊÝX ÍܯÊÝÃÜ H±Üì wԨܪ "ËaÝÃÜ«ÝÃæ ÖÝWÜã PÜáÊæí±Üâ XàñæWÜÙÜá' WÝ¿á®Ü PÝ¿áìPÜÅÊÜá ÊÜ®Üá° E¨Ý^qÔ ÊÜÞñÜ®Ýw¨Ü AÊÜÃÜá, PÜáÊæí±Üâ AÊÜÃÜ ÓÝ×ñÜ A¥æìçÔPæãÙÜÛ¸æàPݨÜÃæ ®ÜÊæã¾ÙÜWæ PÜáÊæí±Üâ AÊÜÃÜ®Üá° ÓÜêÑrÔPæãÙÜÛ¸æàPÜá. BWÜ ÊÜÞñÜÅ AÊÜÃÜ ÊæçaÝÄPÜñæ, B«Ý £¾PÜñæ, ÓÝÊÜÞiPÜ bíñÜ®æ¿á®Üá° £Ú¿áÆá ÓÝ«Ü Gí¨ÜÃÜá.

<< < Prev 1 2 3 4 5 6 7 Next > >>